ಮಾನ್ಯ ಕುಲಪತಿಗಳ ಮಾತು

ಪ್ರಪಂಚದಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಮ್ಮೆಯೊಂದಿಗೆ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಬದುಕಿನ ವಿವೇಕದಂತೆ ಕೆಲಸ ಮಾಡಿದೆ. ಕರ್ನಾಟಕ ಸರಕಾರ ಕೊಡಮಾಡಿದ ಸುಮಾರು ಏಳುನೂರು ಎಕರೆಯಷ್ಟು ವಿಸ್ತಾರದಲ್ಲಿ ತ್ರಿಪದಿ, ಕೂಡಲಸಂಗಮ, ಕ್ರಿಯಾಶಕ್ತಿ, ಭುವನವಿಜಯ, ತುಂಗಭದ್ರಾ, ಅನನ್ಯ, ಅಸ್ಮಿತ, ಅಕ್ಷರ ಗ್ರಂಥಾಲಯದಂಥ ಭವ್ಯ ಕಟ್ಟಡಗಳಿವೆ. ಮರೆತು ಹೋಗಬಹುದಾಗಿದ್ದ ನಮ್ಮ ದೇಸಿ ಮಾರ್ಗದ ಹೆಸರುಗಳನ್ನು ಕಟ್ಟಡಗಳಿಗೆ ಇಟ್ಟು ಯುವಕರ ಭಾವಕೋಶದಲ್ಲಿ ಉಳಿಯುವಂತೆ ಮಾಡಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಭೌತಿಕವಾಗಿ ಭದ್ರ ಬುನಾದಿಯನ್ನು ಹಾಕಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು “ಕನ್ನಡ ವಿಶ್ವವಿದ್ಯಾಲಯ ಕೇವಲ ವಿದ್ಯೆಯನ್ನು ನೀಡುವುದಕ್ಕೆ ಸೀಮಿತವಲ್ಲ ವಿದ್ಯೆಯನ್ನು ಸೃಷ್ಟಿಸುವ ಕೇಂದ್ರ”ವೆಂದು ಕರೆಯುತ್ತ ವಿಶ್ವವಿದ್ಯಾಲಯದ ಆಶಯ ಸ್ವರೂಪವನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿಯೇ ಬುನಾದಿ ಹಾಕಿರುವರು. ಹಿಂದೆ ವಿದ್ಯಾನಗರವಾಗಿದ್ದ ಈ ಪ್ರದೇಶ ನಂತರ ಸಾಮಾಜ್ರ್ಯ ವಿಸ್ತಾರದಿಂದ ವಿಜಯನಗರವಾಗಿ ಈಗ ‘ವಿದ್ಯಾರಣ್ಯ’ವಾಗಿದೆ ಎಂಬ ಮಾತು ಚರಿತ್ರೆಯನ್ನು ನೆನಪಿಸುತ್ತದೆ. ಕನ್ನಡಿಗರ ನೂರಾರು ಕನಸುಗಳನ್ನು ಸಾಕಾರಗೊಳಿಸಲೆಂದು ಹುಟ್ಟಿದ ವಿಶ್ವವಿದ್ಯಾಲಯ ಕನ್ನಡದ ಕೆಲಸವನ್ನು ಕಾಲ ಬಯಸಿದಂತೆ ಮಾಡುತ್ತ ಬಂದಿದೆ.

ಅಧ್ಯಯನಾಂಗ : ನುಡಿಹಬ್ಬ-೩೨ (ಘಟಿಕೋತ್ಸವ) ರ ಅಂಗವಾಗಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಹಾಗೂ ಶುಲ್ಕ  ವಿವರvv   ಉತ್ತಮ ಆಡಳಿತ  ಕಾರ್ಯಗಳುvv   UUCMS Login vv

ಸೂಚನಾ ಫಲಕ

ನುಡಿಹಬ್ಬ-೩೨ (ಘಟಿಕೋತ್ಸವ)   :  ಕಾರ್ಯಕ್ರಮದ ಆಮಂತ್ರಣ ಪತ್ರಿಕೆvv   ಪುಸ್ತಕ ಬಿಡುಗಡೆ ಕಾರ್ಯಕ್ರಮ vv
ಅಧ್ಯಯನಾಂಗ : ನುಡಿಹಬ್ಬ-೩೨ (ಘಟಿಕೋತ್ಸವ) ರ ಅಂಗವಾಗಿ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಜಿ ಹಾಗೂ ಶುಲ್ಕ  ವಿವರvv
ವಿಜ್ಞಾನ ಸಂಗಾತಿ : ಜನವರಿ – ಮಾರ್ಚ್  ೨೦೨೨, ಸಂಪುಟ ೨೯, ಸಂಚಿಕೆ ೬, ೭ ಮತ್ತು ೮vv    UUCMS Link to I semester PG/UG Admission vv
ಸಂಶೋಧನಾ ನೀತಿ (Research Policyvv    The Policies and Programs of  Kannada University 
ಅಧ್ಯಾಪಕರ ಸ್ವ-ವಿವರ  ನಮೂನೆ   : ಕನ್ನಡ ಹೋಂ ಪೇಜ್‌ vv      ಕನ್ನಡ ಲಿಂಕ್‌ ಪೇಜ್‌ vv   ವೃತ್ತಿ ಪದೋನ್ನತಿ (CAS) ಯೋಜನೆಯ ಅರ್ಜಿ ನಮೂನೆ vv
ಕನ್ನಡ ವಿಶ್ವವಿದ್ಯಾಲಯ ಆರಂಭದಿಂದ ಇಂದಿನವರೆಗಿನ ಕುಲಪತಿಗಳ, ಕುಲಸಚಿವರ ಹಾಗೂ ಹಣಕಾಸು ಅಧಿಕಾರಿಗಳ ವಿವರ  
IQAC :  EVALUATIVE REPORT FORMAT :- ೨೦೨೦-೨೧ .    IQAC :  EVALUATIVE REPORT FORMATS  :  ೨೦೨೦-೨೧  .     IQAC :  AQAR FORMATS :-  ೨೦೧೯-೨೦  
 IQAC : AAA Committee Report       ವಿದ್ಯಾರ್ಥಿಗಳ ಸಂತೃಪ್ತಿ ಸಮೀಕ್ಷೆ,   ಹಣಕಾಸು ವಿಭಾಗ :  ಲೆಕ್ಕ ತಪಾಸಣಾ ವರದಿಗಳು  
ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲು ಸಂ. ೨೩೬೮/೨೦೧೧ರ ತೀರ್ಪಿನನ್ವಯ ಪರಿಷ್ಕೃತ ಜೇಷ್ಠತಾ ಪಟ್ಟಿ : ಬೋಧಕ ಸಿಬ್ಬಂದಿ,     ಬೋಧಕೇತರ ಸಿಬ್ಬಂದಿ 
IQAC :  EVALUATIVE REPORT FORMATS  :-  ೨೦೧೨-೧೩ ೨೦೧೩೧೪   , ೨೦೧೪-೧೫ ,    ೨೦೧೫-೧೬   , ೨೦೧೬-೧೭,     ೨೦೧೭-೧೮    ೨೦೧೮-೧೯
IQAC :  The Annual Quality Assurance Report :  ೨೦೧೨-೧೩,  ೨೦೧೩-೧೪,    ೨೦೧೪-೧೫  ೨೦೧೫-೧೬  ೨೦೧೬-೧೭   ೨೦೧೭-೧೮   
ಮಾಹಿತಿಹಕ್ಕು ಅಧಿನಿಯಮ ೨೦೦೫ರ ಪ್ರಕರಣ ೪(೧)(ಎ) ಮತ್ತು ೪(೧)(ಬಿ)ಗಳ ಅಡಿಯಲ್ಲಿ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಗಳು  vvvv
ಕಾರ‍್ಯಕಾರಿ ಸಮಿತಿಯ ಸಭೆಯ ನಡೆವಳಿಗಳು :     ರಜೆ ಮಂಜೂರು ಆದೇಶ ,   ರಜೆ ಮಂಜೂರು ತಿದ್ದುಪಡಿ ಆದೇಶ ,  ಕನ್ನಡ ವಿವಿ : ರಜೆ ನಮೂನೆಗಳುರಜೆ ಮಂಜೂರು ಮಾಡುವ ಪ್ರಾಧಿಕಾರ, ಉದ್ಯೋಗಿಗಳ ಸಂಖ್ಯೆ     
ಅಧ್ಯಯನಾಂಗ : ಪದವಿ ಪಡೆದವರ ವಿವರ ,    ವಾರ್ಷಿಕ ವರದಿಗಳು : ೨೦೧೧-೧೨ ರಿಂದ ೨೦೧೬-೧೭ ರವರೆಗೆ

ಹೆಚ್ಚಿನ ಮಾಹಿತಿ  

 

ಕನ್ನಡ ವಿಶ್ವವಿದ್ಯಾಲಯಕ್ಕೆ ನಿಮಗೆ ಆತ್ಮೀಯ ಸುಸ್ವಾಗತ

home
ವಿದ್ಯಾರಣ್ಯ” ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ ‘ಅಕ್ಷರ’ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. “ಕ್ರಿಯಾಶಕ್ತಿ” ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. ‘ಭುವನ ವಿಜಯ’. ವಿವಿಧ ನಿಕಾಯಗಳ ವಿವಿಧ ವಿಭಾಗಗಳು ‘ತ್ರಿಪದಿ’, ‘ಕೂಡಲಸಂಗಮ’, ‘ತುಂಗಭದ್ರ’, ‘ಘಟಿಕಾಲಯ’, ‘ಕೇಶೀರಾಜ’, ‘ಹರಿಹರ’, ‘ನಾಗವರ್ಮ’, ‘ಅಕ್ಕ’, ‘ಅಲ್ಲಮ’, ‘ನಾದಲೀಲೆ’, ‘ಕಂಠಪತ್ರ’, ‘ಜಕ್ಕಣ ಮಂಟಪ’ ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. “ಸಿರಿಗನ್ನಡ” ಸಂಶೋಧನಾ ಗ್ರಂಥಾಲಯ “ಸರ್ವಜ್ಞ” ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು ‘ಗಿರಿಸೀಮೆ’. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ ‘ನವರಂಗ’ ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ ‘ಅಂತರಂಗ-ಬಹಿರಂಗ’ ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ