hampiyaji (1)

ಅಧ್ಯಯನಾಂಗ ಇತರೆ ವಿಶ್ವವಿದ್ಯಾಲಯದ ರೀತಿಯಲ್ಲಿ ಪರೀಕ್ಷಾ ಕೆಲಸವನ್ನು ನಿರ್ವಹಿಸುವ ಪರೀಕ್ಷಾಂಗವಾಗಿದೆ. ಜೊತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ವಿಭಾಗ. ಸಂಶೋಧನೆ, ಅಧ್ಯಯನ, ಪ್ರಧಾನ ಚಟುವಟಿಕೆಯಾಗಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಖ್ಯವಾಗಿ ಭಾಷೆ, ಸಮಾಜವಿಜ್ಞಾನ, ಲಲಿತಕಲೆ ಹಾಗೂ ವಿಜ್ಞಾನ ನಿಕಾಯ ಎಂಬ ನಾಲ್ಕು ನಿಕಾಯಗಳು ಕಾರ್ಯನಿರತವಾಗಿವೆ.

ಈ ನಾಲ್ಕು ನಿಕಾಯಗಳಲ್ಲಿ ಬರುವ ಅಧ್ಯಯನ ವಿಭಾಗಗಳ ಮತ್ತು ಮಾನ್ಯತಾ ಕೇಂದ್ರಗಳ ಸಂಶೋಧನ ಚಟುವಟಿಕೆಗಳನ್ನು ರೂಪಿಸುವ ಹಾಗೂ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಅಧ್ಯಯನಾಂಗದ ವ್ಯಾಪ್ತಿಯಲ್ಲಿ ಬರುವ ಅಧ್ಯಯನ ವಿಭಾಗಗಳು  ಕನ್ನಡ, ಕರ್ನಾಟಕದ ಕಲೆ, ಸಂಸ್ಕೃತಿ, ಭಾಷೆ, ಸಾಹಿತ್ಯ, ಚರಿತ್ರೆ, ರಾಜಕೀಯ, ಆರ್ಥಿಕ, ಸಮಾಜ, ಸಮುದಾಯ, ಶಿಕ್ಷಣ, ವೈಜ್ಞಾನಿಕ ಮುಂತಾದ ವಿಷಯಗಳಲ್ಲಿ ಅಧ್ಯಯನವನ್ನು ಕೈಗೊಳ್ಳುತ್ತಲಿವೆ.

shade

ಅಧ್ಯಯನಾಂಗ ಇತರೆ ವಿಶ್ವವಿದ್ಯಾಲಯದ ರೀತಿಯಲ್ಲಿ ಪರೀಕ್ಷಾ ಕೆಲಸವನ್ನು ನಿರ್ವಹಿಸುವ ಪರೀಕ್ಷಾಂಗವಾಗಿದೆ. ಜೊತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ವಿಭಾಗ. ಸಂಶೋಧನೆ, ಅಧ್ಯಯನ, ಪ್ರಧಾನ ಚಟುವಟಿಕೆಯಾಗಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಖ್ಯವಾಗಿ ಭಾಷೆ, ಸಮಾಜವಿಜ್ಞಾನ, ಲಲಿತಕಲೆ ಹಾಗೂ ವಿಜ್ಞಾನ ನಿಕಾಯ ಎಂಬ ನಾಲ್ಕು ನಿಕಾಯಗಳು ಕಾರ್ಯನಿರತವಾಗಿವೆ.

ಈ ನಾಲ್ಕು ನಿಕಾಯಗಳಲ್ಲಿ ಬರುವ ಅಧ್ಯಯನ ವಿಭಾಗಗಳ ಮತ್ತು ಮಾನ್ಯತಾ ಕೇಂದ್ರಗಳ ಸಂಶೋಧನ ಚಟುವಟಿಕೆಗಳನ್ನು ರೂಪಿಸುವ ಹಾಗೂ ನಿರ್ವಹಿಸುವ ಜವಬ್ದಾರಿಯನ್ನು ಹೊಂದಿದೆ. ಅಧ್ಯಯನಾಂಗದ ವ್ಯಾಪ್ತಿಯಲ್ಲಿ ಬರುವ ಅಧ್ಯಯನ ವಿಭಾಗಗಳು ಕನ್ನಡ, ಕರ್ನಾಟಕದ ಕಲೆ, ಸಂಸ್ಕೃತಿ, ಭಾಷೆ, ಸಾಹಿತ್ಯ, ಚರಿತ್ರೆ, ರಾಜಕೀಯ, ಆರ್ಥಿಕ, ಸಮಾಜ, ಸಮುದಾಯ, ಶಿಕ್ಷಣ, ವೈಜ್ಞಾನಿಕ ಮುಂತಾದ ವಿಷಯಗಳಲ್ಲಿ ಅಧ್ಯಯನವನ್ನು ಕೈಗೊಳ್ಳತ್ತಲಿವೆ.

ಶೈಕ್ಷಣಿಕ ವೇಳಾಪಟ್ಟಿ : 

೨೦೧೭-೧೮ನೇ ಶೈಕ್ಷಣಿಕ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ಮೂಲಕ ನಡೆಯುವ ವಿವಿಧ ಸ್ನಾತಕೋತ್ತರ ಮತ್ತು ಪಿಎಚ್.ಡಿ. ಕೋರ್ಸ್‌ಗಳ ವಾರ್ಷಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿ ನಿಗದಿಗೊಳಿಸಲಾಗಿದೆ. ಈ ಅಧಿಸೂಚನೆಯನ್ನು ಸಂಬಂಧಿಸಿದ ಕೋರ್ಸ್‌ಗಳ ಸಂಚಾಲಕರು/ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಈ ಕೆಳಗಿನಂತೆ ಅನುಸರಿಸಲು ಸೂಚಿಸಿದೆ.

ಯೋಜನೆಗಳು: ಅಧ್ಯಯನ ವಿಭಾಗಗಳ ಪ್ರತಿಯೊಬ್ಬ ಪ್ರಾಧ್ಯಾಪಕರು ವೈಯಕ್ತಿಕ ಹಾಗೂ ಆಯಾ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಕೂಡಿ ಸಾಂಸ್ಥಿಕ ನೆಲೆಯಲ್ಲಿ ಪ್ರತಿವರ್ಷ ಎರಡು ಯೋಜನೆಗಳನ್ನು ನಿರ್ವಹಿಸುತ್ತಾರೆ. ವಿಭಾಗಗಳ ಅಧ್ಯಯನ ಮಂಡಳಿಗಳಿಗೆ ಆಯಾ ವಿಭಾಗದ ಹಿರಿಯ ಪ್ರಾಧ್ಯಾಪಕರು ಅಧ್ಯಕ್ಷರಾಗಿರುತ್ತಾರೆ. ವಿಭಾಗದ ಎಲ್ಲಾ ಪ್ರಾಧ್ಯಾಪಕರು ಸದಸ್ಯರಾಗಿರುತ್ತಾರೆ. ವಿಭಾಗಗಳ ಅವಶ್ಯಕತೆಗೆ ಅನುಗುಣವಾಗಿ ಬಾಹ್ಯ ವಿದ್ವಾಂಸರು, ಕ್ಷೇತ್ರ ತಜ್ಞರು ಅಧ್ಯಯನ ಮಂಡಳಿಯ ಸದಸ್ಯರಾಗಿರುತ್ತಾರೆ. ಅಧ್ಯಯನ ಮಂಡಳಿಯ ಅನುಮೋದನೆ ಪಡೆದ ಯೋಜನಾ ಪ್ರಸ್ತಾವನೆಗಳನ್ನು ವಿಭಾಗವು ಅಧ್ಯಯನಾಂಗದ ಮುಖಾಂತರ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳುತ್ತದೆ. ಮುಕ್ತಾಯಗೊಂಡ ಯೋಜನೆಗಳನ್ನು ವಿಭಾಗಗಳು ಮತ್ತೊಮ್ಮೆ ಅಧ್ಯಯನ ಮಂಡಳಿಯ ಶಿಫಾರಸ್ಸಿನೊಂದಿಗೆ ಅಧ್ಯಯನಾಂಗಕ್ಕೆ ಸಲ್ಲಿಸುತ್ತವೆ. ಹೀಗೆ ಸಲ್ಲಿಕೆಯಾದ ಯೋಜನೆಗಳನ್ನು ಕುಲಪತಿಯವರ ಅನುಮೋದನೆಯೊಂದಿಗೆ ಅಧ್ಯಯನಾಂಗವು ಪ್ರಕಟಣೆಗಾಗಿ ಪ್ರಸಾರಾಂಗಕ್ಕೆ  ಸಲ್ಲಿಸುತ್ತದೆ.

ಕೋರ್ಸ್‌ಗಳು: ಅಧ್ಯಯನಾಂಗವು ಪಿಎಚ್.ಡಿ., ಡಿ.ಲಿಟ್., ಎಂ.ಫಿಲ್, ಎಂ.ಎ.ಪಿಎಚ್.ಡಿ. (ಕನ್ನಡ ಸಂಯೋಜಿತ ಪದವಿ), ಎಂ.ವಿ.ಎ. ಎಂ.ಮ್ಯೂಜಿಕ್, ಬಿ.ಮ್ಯೂಜಿಕ್ ಹಾಗೂ ನಾಟಕ ಡಿಪ್ಲೊಮಾ, ಕನ್ನಡ ಭಾಷಾಧ್ಯಯನ ಸ್ನಾತಕೋತ್ತರ ಡಿಪ್ಲೋಮಾ, ಪತ್ರಿಕೋಧ್ಯಮ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳನ್ನು ನಿರ್ವಹಿಸುತ್ತದೆ. ಈ ಎಲ್ಲಾ ಕೋರ್ಸ್‌ಗಳ ಪಠ್ಯಕ್ರಮ, ಪ್ರವೇಶ ಪ್ರಕ್ರಿಯೆ, ಪರೀಕ್ಷೆ ಮತ್ತು ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ ಹಾಗೂ ಅಂಕಪಟ್ಟಿ ನಿರ್ವಹಣೆಯನ್ನು ಮಾಡುತ್ತದೆ. ಎಲ್ಲಾ ಕೋರ್ಸ್‌ಗಳ ಪ್ರವೇಶ ಪ್ರಕಟಣೆಯನ್ನು ಸುದ್ಧಿ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗುವುದು. ವಿಶ್ವವಿದ್ಯಾಲಯ ಹಾಗೂ ಯು.ಜಿ.ಸಿ. ಅಂತರ್ಜಾಲದಲ್ಲಿಯೂ ಪ್ರಕಟಿಸಲಾಗುವುದು.

ಆಯಾ ವರ್ಷ ಖಾಲಿಯಿರುವ ಸೀಟುಗಳ ವಿವರವನ್ನು ವಿಭಾಗಗಳಿಂದ ಮಾಹಿತಿ ಪಡೆದು, ಯು.ಜಿ.ಸಿ. ನಿಯಮಾನುಸಾರ ಎಲ್ಲ ಕೋರ್ಸ್‌ಗಳ ಅಧ್ಯಯನಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಆಯ್ಕೆ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅಗತ್ಯ ಶುಲ್ಕಗಳೊಂದಿಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ವಿದ್ಯಾರಣ್ಯದಲ್ಲಿಯ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳು ವಿವಿಧ ಅಧ್ಯಯನ ವಿಭಾಗಗಳಲ್ಲಿಯೂ, ಮಾನ್ಯತಾ ಕೇಂದ್ರಗಳಲ್ಲಿಯೂ ಹಾಗೂ ವಿಸ್ತರಣಾ ಕೇಂದ್ರಗಳಲ್ಲಿಯೂ ಪ್ರವೇಶ ಪಡೆಯಬಹುದು.

ಅಭ್ಯರ್ಥಿಯು ಸಂಶೋಧನೆಗೆ ಆರಿಸಿಕೊಳ್ಳುವ ವಿಷಯ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಸಮಾಜ, ಭಾಷಾಂತರ, ಅಭಿವೃದ್ಧಿ, ವಿಜ್ಞಾನ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿರಬೇಕು.

ಕೋರ್ಸ್‌ವರ್ಕ್ (ಸಂಶೋಧನ ಕಮ್ಮಟ): ಪಿಎಚ್.ಡಿ. ಅಧ್ಯಯನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಲ್ಕು ಹಂತಗಳಲ್ಲಿ ಕೋರ್ಸ್‌ವರ್ಕ್‌ನ್ನು ನಡೆಸಲಾಗುತ್ತದೆ. ಕೊನೆಯ ಹಂತದ ಕೋರ್ಸ್‌ವರ್ಕ್‌ನ್ನು ಪ್ರತಿವರ್ಷ ಡಾ. ಶಂಬಾ ಜೋಶಿಯವರ ಜನ್ಮದಿನವಾದ ಜನವರಿ ೦೪ರಂದು ವಿಶ್ವವಿದ್ಯಾಲಯವು ’ಸಂಶೋಧನ ದಿನ’ವನ್ನಾಗಿ ಪರಿಗಣಿಸಿ ಶಂಬಾ ಜೋಶಿ ಅಧ್ಯಯನ ಪೀಠದ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ. ನಂತರದಲ್ಲಿ ಕೋರ್ಸ್‌ವರ್ಕ್‌ನ ಲಿಖಿತ ಹಾಗೂ ಮೌಖಿಕ ಪರೀಕ್ಷೆ ನಡೆಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೋರ್ಸ್‌ವರ್ಕ್ ಅಂಕಪಟ್ಟಿಗಳನ್ನು ವಿತರಿಸಲಾಗುವುದು.

ನಿರ್ದೇಶಕರು: ಅಧ್ಯಯನಾಂಗದ ನಿರ್ದೇಶಕರು ಕುಲಪತಿಯವರಿಂದ ನಿಯೋಜಿಸಲ್ಪಟ್ಟಿರುತ್ತಾರೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೇಲುಪ್ರಾಧಿಕಾರದ ನಿರ್ದೇಶನದಲ್ಲಿ ನಿರ್ವಹಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ನಿರ್ದೇಶನಗಳನ್ನು ಕುಲಸಚಿವರು ನೀಡುತ್ತಾರೆ. ಇದುವರೆಗೂ ಅಧ್ಯಯನಾಂಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದವರ ವಿವರ.

ಕ್ರ.ಸಂ ಹೆಸರು ಅವಧಿ
೦೧. ಡಾ. ಕೆ.ವಿ.ನಾರಾಯಣ ೧೩.೧೧.೧೯೯೨ ರಿಂದ ೨೭.೦೧.೧೯೯೩
೦೨. ಡಾ. ಪುರುಷೋತ್ತಮ ಬಿಳಿಮಲೆ ೨೭.೦೧.೧೯೯೩ ರಿಂದ ೨೧.೦೨.೧೯೯೪
೦೩. ಡಾ. ಎಚ್.ಎಸ್.ರಾಘವೇಂದ್ರರಾವ್ ೨೧.೦೨.೧೯೯೪ ರಿಂದ ೨೨.೦೭.೧೯೯೫
೦೪. ಡಾ. ಪುರುಷೋತ್ತಮ ಬಿಳಿಮಲೆ ೨೪.೦೭.೧೯೯೫ ರಿಂದ ೧೧.೦೪.೧೯೯೬
೦೫. ಪ್ರೊ. ಹಿ.ಚಿ.ಬೋರಲಿಂಗಯ್ಯ ೧೧.೦೪.೧೯೯೬ ರಿಂದ ೧೨.೦೬.೧೯೯೬
೦೬. ಡಾ. ಬಿ.ಶೇಷಾದ್ರಿ ೧೨.೦೬.೧೯೯೬ ರಿಂದ ೨೫.೧೧.೧೯೯೬
೦೭. ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್ ೨೫.೧೧.೧೯೯೬ ರಿಂದ ೨೨.೦೧.೧೯೯೮
೦೮. ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್ ೨೨.೦೧.೧೯೯೮ ರಿಂದ ೧೮.೦೮.೧೯೯೮
೦೯. ಪ್ರೊ. ಬಾಲಸುಬ್ರಮಣ್ಯ ೧೮.೦೮.೧೯೯೮ ರಿಂದ ೧೫.೦೪.೨೦೦೦
೧೦. ಕುಲಸಚಿವರು ೧೫.೦೪.೨೦೦೦ ರಿಂದ ೦೪.೧೧.೨೦೦೦
೧೧. ಡಾ. ಕೆ.ವಿ.ನಾರಾಯಣ ೦೪.೧೧.೨೦೦೦ ರಿಂದ ೦೩.೦೪.೨೦೦೧
೧೨. ಪ್ರೊ. ಹಿ.ಚಿ.ಬೋರಲಿಂಗಯ್ಯ ೨೧.೦೬.೨೦೦೧ ರಿಂದ ೧೩.೦೬.೨೦೦೨
೧೩. ಡಾ. ಬಿ.ಕೆ.ಕರೀಗೌಡ ೧೩.೦೬.೨೦೦೨ ರಿಂದ ೧೬.೧೦.೨೦೦೪
೧೪. ಡಾ. ಟಿ.ಆರ್.ಚಂದ್ರಶೇಖರ್ ೧೬.೧೦.೨೦೦೪ ರಿಂದ ೧೬.೦೭.೨೦೦೭
೧೫. ಡಾ. ಡಿ.ಪಾಂಡುರಂಗಬಾಬು ೧೬.೦೭.೨೦೦೭ ರಿಂದ ೧೯.೦೬.೨೦೦೯
೧೬. ಕುಲಸಚಿವರು ೧೯.೦೬.೨೦೦೯ ರಿಂದ ೨೪.೦೬.೨೦೦೯
೧೭. ಡಾ. ವಿ.ಎಸ್.ಬಡಿಗೇರ ೨೫.೦೬.೨೦೦೯ ರಿಂದ ೨೪.೦೬.೨೦೧೧
೧೮. ಡಾ. ಎಫ್.ಟಿ.ಹಳ್ಳಿಕೇರಿ ೨೫.೦೬.೨೦೧೧ ರಿಂದ ೦೯.೦೭.೨೦೧೩
೧೯. ಡಾ. ಅಶೋಕಕುಮಾರ ರಂಜೇರೆ ೧೦.೦೭.೨೦೧೩ ರಿಂದ ೦೬.೦೫.೨೦೧೫
೨೦. ಡಾ. ಕೆ.ರವೀಂದ್ರನಾಥ ೦೭.೦೫.೨೦೧೫ ರಿಂದ ೧೬.೦೬.೨೦೧೭
೨೧. ಡಾ. ಶಿವಾನಂದ ವಿರಕ್ತಮಠ ೧೭.೦೬.೨೦೧೭ ರಿಂದ

 

ಘಟಿಕೋತ್ಸವ: ಕನ್ನಡ ವಿಶ್ವವಿದ್ಯಾಲಯ ಘಟಿಕೋತ್ಸವವನ್ನು (Convocation) ನುಡಿಹಬ್ಬವೆಂದು ಆಚರಿಸಿಕೊಂಡು ಬರುತ್ತಿದೆ. ಈ ನುಡಿಹಬ್ಬದ ಆಚರಣೆಯಲ್ಲಿ ಅಧ್ಯಯನಾಂಗದ ಪಾತ್ರ ಪ್ರಮುಖವಾದುದು. ಘಟಿಕೋತ್ಸವಲ್ಲಿ ಡಿ.ಲಿಟ್, ಪಿಎಚ್.ಡಿ., ಎಂ.ಫಿಲ್. ಪದವಿ ಹಾಗೂ ಆಯಾ ಸ್ನಾತಕೋತ್ತರ ಪದವಿ ಪಡೆದ ಪದವೀಧರರಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡುವ ಎಲ್ಲ ಶೈಕ್ಷಣಿಕ ಜವಬ್ದಾರಿಯನ್ನು ಅಧ್ಯಯನಾಂಗವು ನಿರ್ವಹಿಸುತ್ತದೆ. ಜೊತೆಗೆ ನುಡಿಹಬ್ಬದಲ್ಲಿ ಕನ್ನಡ ಭಾಷೆ, ಕರ್ನಾಟಕ ಕಲೆ, ಸಂಸ್ಕೃತಿಗಳ ಏಳಿಗೆಗಾಗಿ ದುಡಿದ ಮಹನೀಯರನ್ನು ಗುರುತಿಸಿ ಅವರಿಗೆ ’ನಾಡೋಜ’ ಎಂಬ ಗೌರವ ಪದವಿಯನ್ನು ನೀಡುತ್ತಾ ಬಂದಿದೆ. ಆದಿಕವಿ ಪಂಪನಿಗೆ ಈ ನಾಡವರು ಗೌರವ ಸೂಚಕವಾಗಿ ಸಂಬೋಧಿಸಿದ ’ನಾಡೋಜ’ ಎಂಬ ಬಿರುದನ್ನು ಕರ್ನಾಟಕ ಪರಂಪರೆಯ ಸಾತತ್ಯವನ್ನು ಹಾಗೂ ನಾಡು ನುಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಾಡೋಜ ಗೌರವ ಪದವಿ ನೀಡಲಾಗುವುದು. ಈ ಗೌರವ ಪದವಿ ಪ್ರದಾನ ಸಮಾರಂಭದ ಕಾರ್ಯಚಟುವಟಿಕೆಯನ್ನು ಅಧ್ಯಯನಾಂಗವು ನಿರ್ವಹಿಸುತ್ತದೆ.

ನಾಡೋಜ ಗೌರವ ಪುರಷ್ಕಾರ : ಕನ್ನಡ ವಿಶ್ವವಿದ್ಯಾಲಯವು ಪ್ರತಿವರ್ಷ ಆಚರಿಸುವ ’ನುಡಿಹಬ್ಬ’ದಲ್ಲಿ ಕನ್ನಡ ಭಾಷೆ, ಕರ್ನಾಟಕ ಕಲೆ, ಸಂಸ್ಕೃತಿಗಳ ಏಳಿಗೆಗಾಗಿ ದುಡಿದ ಮಹನೀಯರನ್ನು ಗುರುತಿಸಿ ಅವರಿಗೆ ’ನಾಡೋಜ’ ಎಂಬ ಗೌರವ ಪದವಿಯನ್ನು ನೀಡುತ್ತಾಬಂದಿದೆ. ಆದಿಕವಿ ಪಂಪನಿಗೆ ಈ ನಾಡವರು ಗೌರವ ಸೂಚಕವಾಗಿ ಸಂಬೋಧಿಸಿದ ’ನಾಡೋಜ’ ಎಂಬ ಬಿರುದನ್ನು ಕರ್ನಾಟಕ ಪರಂಪರೆಯ ಸಾತತ್ಯವನ್ನು ಹಾಗೂ ನಾಡು ನುಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಾಡೋಜ ಗೌರವ ಪದವಿ ನೀಡಲಾಗುವುದು.
 

 

ಮಾನ್ಯತಾ ಸಂಸ್ಥೆಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆ

ಕ್ರ.ಸಂ ಮಾನ್ಯತಾ ಸಂಸ್ಥೆಗಳ ವಿಳಾಸ ದೂರವಾಣಿ ಸಂಖ್ಯೆ ನಡೆಸುತ್ತಿರುವ ಕೋರ್ಸ್‌ಗಳ ವಿವರ
೧.  ಜಗನ್ನಾಥ ಹೆಬ್ಬಾಳೆ ಸಂಯೋಜನಾಧಿಕಾರಿಗಳು  ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಹೈದರಾಬಾದ್ ಕರ್ನಾಟಕ ಸಂಶೋಧನ ಕೇಂದ್ರ ಕರ್ನಾಟಕ ಕಾಲೇಜು ಆವರಣ ಹೈದರಾಬಾದ್ ರಸ್ತೆ, ಬೀದರ – ೫೮೫ ೪೦೧ ಪೋ.ನಂ: ೦೮೪೮೨-೨೨೧೫೫೭ ಮೊ: ೯೪೪೮೫೮೫೩೪೪ ಎಂ.ಫಿಲ್. & ಪಿಎಚ್.ಡಿ. (ಕನ್ನಡ, ಜಾನಪದ, ಚರಿತ್ರೆ)
೨. ಡಾ. ಹೆಚ್. ಕೃಷ್ಣಭಟ್ಟ ಸಂಯೋಜನಾಧಿಕಾರಿಗಳು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಎಂ.ಜಿ.ಎಂ. ಕಾಲೇಜು  ಉಡುಪಿ-೫೭೬೧೦೨ ಪೋ: ೦೮೨೦-೨೫೨೧೧೫೯, ೨೫೨೪೪೫೯ ಮೊ: ೯೪೮೦೫೭೫೭೮೩ ಪೋ: ೦೮೨೦-೨೫೨೧೧೫೯, ೨೫೨೪೪೫೯ ಮೊ: ೯೪೮೦೫೭೫೭೮೩ ಎಂ.ಫಿಲ್. & ಪಿಎಚ್.ಡಿ. (ಕನ್ನಡ, ಚರಿತ್ರೆ)
೩. ಡಾ. ವಿಜಯಾ ಸುಬ್ಬರಾಜ್  ಸಂಯೋಜನಾಧಿಕಾರಿಗಳು ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಬಿ.ಎಂ.ಶ್ರೀ. ಕಲಾಭವನ  ೩ನೇ ಮುಖ್ಯರಸ್ತೆ,  ನರಸಿಂಹರಾಜ ಕಾಲೋನಿ  ಬೆಂಗಳೂರು-೫೬೦೦೧೯ ಪೋ: ೦೮೦-೨೬೬೭೬೭೭೩,  ಮೊ: ೯೪೪೮೬೭೧೦೪೯,ಇ-ಮೇಲ್ : bmsritrust@gmail.com ಎಂ.ಫಿಲ್. & ಪಿಎಚ್.ಡಿ. (ಕನ್ನಡ)
೪. ಡಾ. ದಿವಾಕರ ಕೆ.  ಸಂಯೋಜನಾಧಿಕಾರಿಗಳು ಡಾ. ಹಾಮಾನಾ ಸಂಶೋಧನ ಕೇಂದ್ರ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ-೫೭೪೨೪೦. ಪೋ: ೦೮೨೫೬-೨೩೬೨೨೧ ಮೊ: ೯೯೦೨೦೩೨೪೮೦, ೯೪೪೮೭೨೪೬೯೭, ೮೭೪೬೮೦೨೦೦೧ಇ-ಮೇಲ್ : ಎಂ.ಫಿಲ್. & ಪಿಎಚ್.ಡಿ. (ಕನ್ನಡ, ಚರಿತ್ರೆ, ಅಭಿವೃದ್ಧಿ ಅಧ್ಯಯನ)
೫. ಡಾ. ಎಂ. ವೆಂಕಟೇಶ  ಸಂಯೋಜನಾಧಿಕಾರಿಗಳು ಕುವೆಂಪು ವಿದ್ಯಾವರ್ಧಕ ಟ್ರಸ್ಟ್  ಕವಿಶೈಲ, ಜಯಲಕ್ಷ್ಮೀಪುರಂ ಮೈಸೂರು-೫೭೦ ೦೧೨ ಪೋ: ೦೮೨೧-೨೫೧೦೧೪೭ ಮೊ: ೯೬೬೩೫೬೩೬೧೬ಇ-ಮೇಲ್ : skvtmysore@gmail.com ಎಂ.ಫಿಲ್.  (ಕನ್ನಡ)
೬. ಡಾ. ಗ್ಲಾಡ್ಸನ್ ಜತ್ತನ್ನ  ಸಂಯೋಜನಾಧಿಕಾರಿಗಳು ಕರ್ನಾಟಕ ಥಿಯೋಲಾಜಿಕಲ್ ಸಂಶೋಧನ ಕೇಂದ್ರ ಬಲ್ಮಠ, ಮಂಗಳೂರು-೫೭೫೦೦೧ ಪೋ: ೦೮೨೪-೨೪೨೮೮೧೯ ಮೊ:  ಇಮೇಲ್ karnatakasanghamandya@gmail.com ಎಂ.ಫಿಲ್. & ಪಿಎಚ್.ಡಿ. (ಕನ್ನಡ, ಚರಿತ್ರೆ, ಅಭಿವೃದ್ಧಿ ಅಧ್ಯಯನ)
೭. ಡಾ. ಜಯಪ್ರಕಾಶಗೌಡ ಸಂಯೋಜನಾಧಿಕಾರಿಗಳು ಕರ್ನಾಟಕ ಸಂಘ, ಆರ್.ಸಿ.ರಸ್ತೆ ಗುರುಭವನದ ಹಿಂಭಾಗ  ಮಂಡ್ಯ-೫೭೧೪೦೧ ಪೋ: ೦೮೨೩೨-೨೨೭೭೫೫ ಮೊ: ೯೪೪೮೧೯೪೪೫೬,ಇ-ಮೇಲ್ kathribalmatta@gmail.com ಎಂ.ಫಿಲ್. & ಪಿಎಚ್.ಡಿ. (ಕನ್ನಡ, ಚರಿತ್ರೆ)
೮. ಡಾ. ವಿ.ಎಸ್. ಮಾಳಿ  ಸಂಯೋಜನಾಧಿಕಾರಿಗಳು ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ  ಶ್ರೀ. ಬಿ.ಆರ್.ದರೂರು ಸಂಶೋಧನ ಕೇಂದ್ರ,  ಹಾರೂಗೇರಿ-೫೯೧೨೨೦.  ರಾಯಭಾಗ ತಾಲ್ಲೂಕು  ಬೆಳಗಾವಿ ಜಿಲ್ಲೆ. ಪೋ: ೦೮೩೩೧-೨೫೭೮೫೩, ೨೫೭೧೧೬ ಮೊ: ೯೪೪೯೧೮೭೯೭೩, ೯೯೧೬೨೭೨೫೩೯ ಎಂ.ಫಿಲ್. & ಪಿಎಚ್.ಡಿ. (ಕನ್ನಡ, ಚರಿತ್ರೆ, ಅಭಿವೃದ್ಧಿ ಅಧ್ಯಯನ)
೯. ಡಾ. ವ್ಹಿ.ಡಿ. ಐಹೊಳ್ಳಿ  ಸಂಯೋಜನಾಧಿಕಾರಿಗಳು ಬಿ.ಎಲ್.ಡಿ. ಸಂಸ್ಥೆಯ ವಚನ ಪಿತಾಮಹ  ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಶ್ರೀಮತಿ ಬಂಗಾರಮ್ಮ ಸಜ್ಜನ ಆವರಣ  ಸೊಲ್ಲಾಪುರ ರಸ್ತೆ, ವಿಜಯಪು-೫೮೬ ೧೦೩. ಪೋ: ೦೮೩೫೨-೨೬೨೭೭೦ ಮೊ: ೯೮೮೦೦೧೧೬೭೬ಇ-ಮೇಲ್ : drpghrc05@gmail.com ಪಿಎಚ್.ಡಿ. (ಕನ್ನಡ, ಚರಿತ್ರೆ)
೧೦. ಡಾ. ಅರ್ಜುನ ಗೊಳಸಂಗಿ ಸಂಯೋಜನಾಧಿಕಾರಿಗಳು ಲಿಂಗಾಯುತ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ತೋಂಟದಾರ‍್ಯ ಸಂಸ್ಥಾನ ಮಠ ಗದಗ – ೫೮೨೧೦೧ ಪೋ: ೦೮೩೭೨-೨೩೬೭೦೧, ೨೩೮೮೨೭ ಮೊ: ೯೪೪೮೭೮೯೩೨೨ ಇ-ಮೇಲ್ : lingahat.phD@gmail.com ಪಿಎಚ್.ಡಿ. (ಕನ್ನಡ)
೧೧. ಸಂಯೋಜನಾಧಿಕಾರಿಗಳು ಸೆಂಟರ್ ಫಾರ್ ಮಲ್ಟಿ ಡಿಸಿಪ್ಲೆನರಿ  ಡೆವಲಪಮೆಂಟ್ ರಿಸರ್ಚ್ (ಸಿಎಂ.ಡಿ.ಆರ್),  ಆರ್.ಎಸ್.ನಂ.೯ಎ೨, ಪ್ಲಾಟ್.೮೨,  ಡಾ.ಬಿ.ಆರ್.ಅಂಬೇಡ್ಕರ್ ನಗರ,  ನಿಯರ್ ಯಾಲಕ್ಕಿ ಶೆಟ್ಟರ್ ಕಾಲೋನಿ ಲಕಮನಹಳ್ಳಿ, ಧಾರವಾಡ-೫೮೦೦೦೪. ಪೋ: ೦೮೩೬-೨೪೬೦೪೫೩, ೨೪೬೫೪೭೨, ೨೪೬೦೪೬೪. ಪೋ: ೦೮೩೬-೨೪೬೦೪೫೩, ೨೪೬೫೪೭೨, ೨೪೬೦೪೬೪. ಪಿಎಚ್.ಡಿ. (ಅಭಿವೃದ್ಧಿ ಅಧ್ಯಯನ)
೧೨. ಡಾ. ಚಿತ್ತಯ್ಯ ಪೂಜಾರ  ಸಂಯೋಜನಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ, ಬೆಂಗಳೂರು-೫೬೦೦೧೮ ಪೋ: ೦೮೦-೨೬೬೧೨೯೯೧, ೨೬೬೨೩೫೮೪ ಮೊ: ೯೮೪೫೬೩೭೨೪೭, ೮೮೮೦೩೫೨೦೮೭,   ೯೮೪೪೦೯೧೦೪೭ಇಮೇಲ್ kannadaparishattu@gmail.com ಎಂ.ಫಿಲ್ & ಪಿಎಚ್.ಡಿ. (ಕನ್ನಡ)
೧೩. ಪ್ರೊ. ಬಿ.ಕೆ. ಮೊರಬದ ಸಂಯೋಜನಾಧಿಕಾರಿಗಳು  ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ  ಬಾಗಲಕೋಟ-೫೮೭ ೧೦೧ ಪೋ: ೦೮೩೫೪-೨೨೦೫೪೯ ಮೊ: ೯೪೪೯೩೭೬೪೭೭ (ಸಂಯೋಜನಾಧಿಕಾರಿಗಳು) ಮೊ: ೯೯೭೨೩೫೫೫೧೫, ೯೪೪೮೪೧೮೮೬೮ ಪಿಎಚ್.ಡಿ. (ಕನ್ನಡ, ಚರಿತ್ರೆ)
೧೪. ಡಾ. ಜೆ.ಎ. ಹಡಗಲಿ  ಸಂಯೋಜನಾಧಿಕಾರಿಗಳು ಜೆ.ಎಸ್.ಎಸ್.ನ ಡಾ. ವೀರೇಂದ್ರ ಹೆಗಡೆ  ಸಂಶೋಧನ ಕೇಂದ್ರ ವಿದ್ಯಾಗಿರಿ, ಧಾರವಾಡ – ೦೪ ಪೋ: ೦೮೩೬-೨೪೬೮೪೭೮ ಮೊ: ೯೯೪೫೭೧೯೨೩೫ ಪೋ: ೦೮೩೬-೨೪೬೮೪೭೮ ಮೊ: ೯೯೪೫೭೧೯೨೩೫  ಇ-ಮೇಲ್ dr.ajithaprasad@rediffmail.com ಪಿಎಚ್.ಡಿ. (ಕನ್ನಡ, ಚರಿತ್ರೆ)
೧೫. ಸಂಯೋಜನಾಧಿಕಾರಿಗಳು  ಸರ್ಕಾರಿ ಕಲಾ ಮಹಾವಿದ್ಯಾಲಯ ಚಿತ್ರದುರ್ಗ ದೂ: ೦೮೧೯೪-೨೩೫೯೦೮ ಎಂ.ಫಿಲ್. &  ಪಿಎಚ್.ಡಿ. (ಕನ್ನಡ, ಚರಿತ್ರೆ, ಅಭಿವೃದ್ಧಿ ಅಧ್ಯಯನ)
೧೬. ಸಂಯೋಜನಾಧಿಕಾರಿಗಳು  ವೀರಶೈವ ವಿದ್ಯಾವರ್ಧಕ ಸಂಘ  ವೀರಶೈವ ಮಹಾವಿದ್ಯಾಲಯ  ಬಳ್ಳಾರಿ – ೫೮೩ ೧೦೪ ದೂ: ೦೮೩೯೨-೨೪೨೧೮೫, ೨೪೨೧೮೩ ಮೊ: ೯೪೪೯೫೧೦೪೬೫ ಎಂ.ಫಿಲ್. &  ಪಿಎಚ್.ಡಿ. (ಕನ್ನಡ, ಚರಿತ್ರೆ, ಅಭಿವೃದ್ಧಿ ಅಧ್ಯಯನ)
೧೭. ಸಂಯೋಜನಾಧಿಕಾರಿಗಳು  ಭರತೇಶ ಶಿಕ್ಷಣ ಸಂಸ್ಥೆ ಬಿ.ಸಿ. ೧೮೮, ಕೋಟೆ ಹತ್ತಿರ, ಹಳೆ ಪಿ.ಬಿ. ರಸ್ತೆ ಬೆಳಗಾವಿ-೫೯೦ ೦೧೬ ದೂ: ೦೮೩೧-೨೪೨೧೫೧೩, ೨೪೨೬೯೮೪ ಮೊ: ೯೬೮೬೧೯೦೨೫೩ ಎಂ.ಫಿಲ್. &  ಪಿಎಚ್.ಡಿ. (ಕನ್ನಡ, ಚರಿತ್ರೆ, ಅಭಿವೃದ್ಧಿ ಅಧ್ಯಯನ)
೧೮. ಡಾ. ವಸಂತ ಬನ್ನಾಡಿ  ಸಂಯೋಜನಾಧಿಕಾರಿಗಳು ರಂಗ ಅಧ್ಯಯನ ಕೇಂದ್ರ ಬಂಡಾರ್ಕಾರ್ಸ್ ಕಾಲೇಜ್ ಕುಂದಾಪುರ ಉಡುಪಿ ಜಿಲ್ಲೆ- ೫೭೬೨೦೧ ಪೋ: ೦೮೨೫೪-೨೩೦೩೬೯, ೨೩೦೪೬೯ ಮೊ: ೯೪೪೯೧೦೫೦೫೨ ನಾಟಕ ಡಿಪ್ಲೊಮಾ
೧೯. ಸಂಯೋಜನಾಧಿಕಾರಿಗಳು  ವಿಸ್ತಾರ ಟ್ರಸ್ಟ್ ಬಾಂಧವಿ, ಹೊನ್ನುಣಸಿ ಕ್ರಾಸ್,  ಚಿಕ್ಕಬಿದನಾಳ, ಯಲಬುರ್ಗಾ ಮೊ: ೯೮೪೪೯೦೪೪೩೪, ೭೪೦೬೨೨೪೦೦೨ ನಾಟಕ ಡಿಪ್ಲೊಮಾ
೨೦. ಸಂಯೋಜನಾಧಿಕಾರಿಗಳು  ಸತ್ವರೂಪ ಪೌಂಡೇಶನ್ಸ್  ಸಂಸ್ಕೃತಿ ಕಾಲೇಜು ಆಫ್ ಮಿಜ್ಯುವಲ್  ಆಂಡ್ ಪರ್ಫಾಮಿಂಗ್ ಆರ್ಟ್ ಹುಬ್ಬಳ್ಳಿ ದೂ: ೦೮೩೬-೨೩೩೭೧೧೧ ಮೊ: ೮೦೯೫೪೫೪೧೧೧ ನಾಟಕ ಡಿಪ್ಲೊಮಾ
೨೧. ಸಂಯೋಜನಾಧಿಕಾರಿಗಳು,  ನಾಟಕ ಕರ್ನಾಟಕ ರಂಗಾಯಣ  ಕಲಾಮಂದಿರ, ವಿನೋಬಾ ರಸ್ತೆ ಮೈಸೂರು-೫೭೦ ೦೦೫ ನಾಟಕ ಡಿಪ್ಲೊಮಾ
೨೨. ಕಾರ್ಯದರ್ಶಿಗಳು ಹಂಸಲೇಖ ದೇಸಿ ವಿದ್ಯಾ ಸಂಸ್ಥೆ (ರಿ) ೧೦೯೨/೯೩, ೧೦ನೇ ಸಿ ಕ್ರಾಸ್ ೧೧ನೇ ಮುಖ್ಯರಸ್ತೆ, ೨ನೇ ಹಂತ ಮಹಾಲಕ್ಷ್ಮಿಪುರಂ, ಬೆಂಗಳೂರು-೮೬ ದೂ: ೯೮೮೬೭೦೫೪೭೯,  ೭೨೦೪೫೫೦೫೯೨ ಬಿ.ಮ್ಯೂಜಿಕ್ ಮತ್ತು ಎಂ.ಮ್ಯೂಜಿಕ್

ನಿರ್ದೇಶಕರು

ಅಧ್ಯಯನಾಂಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ – ೫೮೩ ೨೭೬

ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ

ದೂರವಾಣಿ ಸಂಖ್ಯೆ : ೦೮೩೯೪ ೨೪೧೪೬೪

ವೆಬ್‌ಸೈಟ್ : www.kannadauniversity.org

ಇ-ಮೇಲ್ : director.studieskuh@gmail.com

* * *