ಎಂ.ವಿ.ಎ. ಚಿತ್ರಕಲೆ (ಸ್ನಾತಕೋತ್ತರ ದೃಶ್ಯಕಲಾ ಪದವಿ ) ಅಧ್ಯಯನದ ನಿಯಮಾವಳಿ 

(Semester System)

 ೧. ವಿಭಾಗ                 : ದೃಶ್ಯಕಲಾ ವಿಭಾಗ

೨. ವಿಷಯ                  : ಚಿತ್ರಕಲೆ ಅಂದರೆ Painting

೩. ಪದವಿಯ ಹೆಸರು      : ಎಂ.ವಿ.ಎ. ಅಂದರೆ Master of Visual Art

೪. ನಿಕಾಯ                 : ಲಲಿತಕಲಾ ನಿಕಾಯ

 

ಕೋರ್ಸ್‌ನ ವಿಧಾನ

ಎಂ.ವಿ.ಎ. ವಿಷಯ : ಚಿತ್ರಕಲೆ

ಎಂ.ವಿ.ಎ. ಅವಧಿ : ೨ ವರ್ಷಗಳು

 

ಎಂ.ವಿ.ಎ. ತರಗತಿಗಳು    

ಎಂ.ವಿ.ಎ. : ಪ್ರಥಮ ವರ್ಷ (ಒಂದು ಮತ್ತು ಎರಡನೇ ಸೆಮಿಸ್ಟರ್‌ಗಳು)

ಎಂ.ವಿ.ಎ. : ದ್ವಿತೀಯ ವರ್ಷ (ಮೂರು ಮತ್ತು ನಾಲ್ಕನೇ ಸೆಮಿಸ್ಟರ್‌ಗಳು)

ಪ್ರತಿಯೊಂದು ಸೆಮಿಸ್ಟರ್‌ನ ಭೋಧನ ಅವಧಿ ೧೬ ವಾರಗಳು.

 

ಪ್ರವೇಶ ವಿಧಾನ

ಎಂ.ವಿ.ಎ. ಪ್ರಥಮ ವರ್ಷದ ಪ್ರವೇಶಾರ್ಹತೆ :

  1. ಎಂ.ವಿ.ಎ. ಪದವಿ ಕೋರ್ಸ್‌ಗೆ ಪ್ರವೇಶ ಪಡೆಯಲು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎಫ್.ಎ/ಬಿ.ವಿ.ಎ./ಬಿ.ಎ. ಫೈನ್ ಆರ್ಟ್ ಮೂರು ವರ್ಷಗಳ ಪದವಿ ಅಥವಾ ತತ್ಸಮಾನ ಪದವಿಯಲ್ಲಿ ಕನಿಷ್ಠ ಶೇ. ೩೫% ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು.
  2. ಈ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಇರುತ್ತವೆ. ಈ ಪರೀಕ್ಷೆಯನ್ನು ಅಧ್ಯಯನಾಂಗ (ಪರೀಕ್ಷಾಂಗ)ವು ದೃಶ್ಯಕಲಾ ವಿಭಾಗದ ಮೂಲಕ ನಡೆಸುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಶೇ. ೩೫% ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಅನುಸಾರ ಸೀಟ್ ನೀಡುವುದು.

 

ಪ್ರವೇಶ ಪರೀಕ್ಷಾ ವಿಧಾನ :

೧೦೦ ಅಂಕಗಳು

  1. ಲಿಖಿತ ಪರೀಕ್ಷೆ –        ೨೫ ಅಂಕಗಳು   – (೩೦ ನಿಮಿಷಗಳು)
  2. ಪ್ರಾಯೋಗಿಕ ಪರೀಕ್ಷೆ –        ೫೦ ಅಂಕಗಳು   – (೧ ಗಂಟೆ ೩೦ ನಿಮಿಷಗಳು)
  3. ಮೌಖಿಕ ಸಂದರ್ಶನ –        ೨೫ ಅಂಕಗಳು  – (೧೫ ನಿಮಿಷಗಳು : ಪ್ರತಿಯೊಬ್ಬ ವಿದ್ಯಾರ್ಥಿಗೆ)
    • ಅಭ್ಯರ್ಥಿಗಳು ಮೌಖಿಕ ಸಂದರ್ಶನಕ್ಕೆ ಹಾಜರಾಗುವಾಗ ತಾವು ಮಾಡಿದ ಸಾಧನೆಯನ್ನು ದೃಢೀಕರಿಸುವ ಕಲಾಕೃತಿ, ಲೇಖನ, ಪಡೆದ ಪ್ರಶಸ್ತಿ/ಬಹುಮಾನ ಇತ್ಯಾದಿಗಳನ್ನು ತರಬಹುದಾಗಿದೆ.
    • ಪ್ರವೇಶ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳನ್ನು ಮತ್ತು ಪದವಿ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳನ್ನು ಕ್ರೋಢೀಕರಿಸಿ ಸರಾಸರಿ ತೆಗೆದು ರ‍್ಯಾಂಕ್ ನೀಡಲಾಗುತ್ತದೆ. ರ‍್ಯಾಂಕ್‌ಗೆ ಅನುಸಾರ ಪ್ರವೇಶ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ ಅಧ್ಯಯನಾಂಗಕ್ಕೆ ಸಲ್ಲಿಸಲಾಗುವುದು. ಅಧ್ಯಯನಾಂಗವು ಸೀಟ್ ಹಂಚಿಕೆಯ ಪ್ರಕ್ರಿಯೆಯನ್ನು ಕೈಗೊಳ್ಳುವುದು. ಸೀಟ್ ಹಂಚಿಕೆಗೆ ಮೀಸಲಾತಿ ನಿಯಮಗಳನ್ನು ಪಾಲಿಸಲಾಗುವುದು.
    • ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಧ್ಯಯನಾಂಗವು ನಿಯಮಾನುಸಾರ ಪ್ರವೇಶ ನೀಡುವುದು.

ಶುಲ್ಕ : ವಿಶ್ವವಿದ್ಯಾಲಯದ ನಿಯಮಾನುಸಾರ

 ಪ್ರವೇಶ ಪರೀಕ್ಷಾ ಸಮಿತಿ : 

ವಿಭಾಗದ ಮುಖ್ಯಸ್ಥರು                :         ಅಧ್ಯಕ್ಷರು

ವಿಭಾಗದ ಪ್ರಾಧ್ಯಾಪಕರು              :         ಸದಸ್ಯರು

ಪ್ರವೇಶ ಸಮಿತಿಯ ಸದಸ್ಯರು ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯ ಪರೀಕ್ಷಕರಾಗಿ ಮತ್ತು ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಾರೆ.

 ವಿದ್ಯಾರ್ಥಿಗಳ ಪ್ರವೇಶ ಮಿತಿ

  1. ಎಂ.ವಿ.ಎ. ಪದವಿ ಕೋರ್ಸ್‌ನ ತರಗತಿಗೆ ವಿದ್ಯಾರ್ಥಿಗಳ ಪ್ರವೇಶದ ಮಿತಿ ಕನಿಷ್ಟ ೦೫, ಗರಿಷ್ಠ ೨೦ ಆಗಿರುತ್ತದೆ.
  2. ಅಭ್ಯರ್ಥಿಗಳ ಪ್ರವೇಶ ಸಂಖ್ಯೆಯು ವಿಶ್ವವಿದ್ಯಾಲಯವು ನಿಗದಿಪಡಿಸಿದಂತೆ ಇರುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಬಂದಲ್ಲಿ ವಿಶ್ವವಿದ್ಯಾಲಯದಿಂದ ವಿಶೇಷ ಅನುಮತಿ ಪಡೆದು ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳಲಾಗುವುದು.

 ಎಂ.ವಿ.ಎ. ದ್ವಿತೀಯ ವರ್ಷದ ಪ್ರವೇಶಾರ್ಹತೆ

  1. ಪ್ರಥಮ ಸೆಮಿಸ್ಟರ್‌ನ ಪ್ರಾಯೋಗಿಕ ಪತ್ರಿಕೆ ಮತ್ತು ಒಂದು ಸಿದ್ದಾಂತ ಪತ್ರಿಕೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದ್ವಿತೀಯ ಸೆಮಿಸ್ಟರ್‌ಗೆ ಪ್ರವೇಶ ನೀಡಲಾಗುವುದು.
  2. ದ್ವಿತೀಯ ಸೆಮಿಸ್ಟರ್‌ನ ಒಂದು ಪ್ರಾಯೋಗಿಕ ಪತ್ರಿಕೆ ಮತ್ತು ಒಂದು ಸಿದ್ಧಾಂತ ಪತ್ರಿಕೆ ಉತ್ತೀರ್ಣರಾದವರಿಗೆ ತೃತೀಯ ಸೆಮಿಸ್ಟರ್‌ಗೆ ಪ್ರವೇಶ ನೀಡಲಾಗುವುದು.
  3. ತೃತೀಯ ಸೆಮಿಸ್ಟರ್‌ನ ಒಂದು ಪ್ರಾಯೋಗಿಕ ಪತ್ರಿಕೆ ಮತ್ತು ಒಂದು ಸಿದ್ಧಾಂತ ಪತ್ರಿಕೆಯಲ್ಲಿ ಉತ್ತೀರ್ಣರಾದವರಿಗೆ ಚತುರ್ಥ ಸೆಮಿಸ್ಟರ್‌ಗೆ ಪ್ರವೇಶ ನೀಡಲಾಗುವುದು.
  4. ಹಿಂದಿನ ಎಲ್ಲಾ ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣವಾದ ವಿಷಯಗಳಲ್ಲಿ ಉತ್ತೀರ್ಣರಾದರೆ ಮಾತ್ರ ನಾಲ್ಕನೇ ಸೆಮಿಸ್ಟರ್‌ನ ಫಲಿತಾಂಶವನ್ನು ಪ್ರಕಟಿಸುವುದು. ಅಲ್ಲಿಯವರೆಗೆ ಆ ಫಲಿತಾಂಶವನ್ನು (Wih heಟಜ) ತಡೆಹಿಡಿಯಲಾಗುವುದು.

 ಅಧ್ಯಯನ ವಿಧಾನ

  1. ಪಠ್ಯಕ್ರಮದ ವಿಷಯಗಳ ಬೋಧನೆಯು ಕನ್ನಡ ಅಥವಾ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಇರುತ್ತದೆ. ವಿದ್ಯಾರ್ಥಿಯು ಕನ್ನಡವನ್ನು ಹೊರತುಪಡಿಸಿ ಇತರೆ ಭಾಷೆಯಲ್ಲಿ ಪರೀಕ್ಷೆಯನ್ನು ಉತ್ತರಿಸುವ ಸಂದರ್ಭವಿದ್ದಲ್ಲಿ ಪರೀಕ್ಷಾ ಅರ್ಜಿಯಲ್ಲಿ ಆ ಕುರಿತು ಸ್ಪಷ್ಟವಾಗಿ ನಮೂದಿಸಬೇಕು.
  2. ಕಿವುಡ ಮತ್ತು ಮೂಗ ವಿದ್ಯಾರ್ಥಿಗಳಿಗೆ ಲಿಖಿತ ವಿಷಯಗಳಿಂದ ವಿನಾಯಿತಿ ಇದ್ದು, ಲಿಖಿತ ವಿಷಯಗಳಿಗೆ ಬದಲಾಗಿ ಪ್ರಾಯೋಗಿಕ ಕಲಾಕೃತಿಗಳನ್ನು ರಚಿಸಲು ಪರೀಕ್ಷೆಯಲ್ಲಿ ವ್ಯವಸ್ಥೆ ಮಾಡಲಾಗುವುದು. (ಪ್ರವೇಶ ಪರೀಕ್ಷೆಯಿಂದ ಹಿಡಿದು ಎಲ್ಲ ಸೆಮಿಸ್ಟರ್ ಪರೀಕ್ಷೆಗಳಿಗೂ ಈ ಸೌಲಭ್ಯ ಮುಂದುವರಿಯುತ್ತದೆ.)
  3. ಚಿತ್ರಕಲೆ ವಿಷಯದ ಸ್ನಾತಕೋತ್ತರ ಪದವಿಯ ಅಧ್ಯಯನವು ಒಂದು ಪ್ರಾಯೋಗಿಕ (ಕಲಾಕೃತಿ ರಚನೆ) ಮತ್ತು ಎರಡು ಸಿದ್ದಾಂತ (ಲಿಖಿತ) ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಸೆಮಿಸ್ಟರ್‌ನಲ್ಲಿರುವ ವಿಷಯಗಳಿಗೆ ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಲಾಗಿದೆ.

 ವಾರ್ಷಿಕ ಕಲಾ ಪ್ರದರ್ಶನ

  1. ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ಗಳ ಕೊನೆಯಲ್ಲಿ ನಡೆಸುವ ವಾರ್ಷಿಕ ಕಲಾಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಬೇಕಾಗುತ್ತದೆ ಮತ್ತು ವಿದ್ಯಾರ್ಥಿಗಳು ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
  2. ರಾಜ್ಯದ ವಿವಿಧ ಭಾಗಗಳಲ್ಲ್ಲಿ ನಡೆಯುವ ಕಲಾಪ್ರದರ್ಶನ, ಕಾರ್ಯಾಗಾರ, ಕಲಾಶಿಬಿರ ಹಾಗೂ ವಿಚಾರ ಸಂಕಿರಣಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ವಿಭಾಗದ ಮುಖ್ಯಸ್ಥರ ಪೂರ್ವಭಾವಿ ಅನುಮತಿ ಪಡೆಯಬೇಕು. ಮುಖ್ಯಸ್ಥರು, ಕುಲಸಚಿವರ ಅನುಮತಿಯನ್ನು ಪಡೆದು ಅಗತ್ಯ ಕ್ರಮಕೈಗೊಳ್ಳುತ್ತಾರೆ.
  3. ವಿದ್ಯಾರ್ಥಿಗಳು ತರಗತಿಯಲ್ಲಿ ರಚಿಸಿದ ಕಲಾಕೃತಿಗಳನ್ನು ತಿಂಗಳ ಪ್ರದರ್ಶನಗಳಲ್ಲಿ ಪ್ರದರ್ಶನ ಮಾಡಬೇಕು.
  4. ವಿಭಾಗದಲ್ಲಿ ಪ್ರತಿ ತಿಂಗಳ ಪ್ರಗತಿಪರಿಶೀಲನಾ ಸಭೆಯು ಜರುಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಪಾಲಕರನ್ನು ಕರೆಯಲಾಗುವುದು.

 ಹಾಜರಾತಿ

  1. ಒಂದು ಸೆಮಿಸ್ಟರ್ ಅವಧಿಯು ೮೬ ದಿನಗಳಾಗಿದ್ದು, ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗಲು ಎಲ್ಲಾ ವಿಷಯಗಳಲ್ಲಿ ಶೇಕಡಾ ೭೫%ರಷ್ಟು ಹಾಜರಾತಿ ಇರಬೇಕು. ಆದರೆ ೧೦೦% ಹಾಜರಾತಿ ಪ್ರಮಾಣ ಇರಬೇಕಾದದ್ದು ಆಶಯವಾಗಿರುತ್ತದೆ. ೧೦% ರವರೆಗೆ ವೈದ್ಯಕೀಯ ರಜಾ ಸೌಲಭ್ಯವಿರುವುದು.
  2. ವಿಭಾಗದ ಪ್ರತಿಯೊಂದು ತರಗತಿಯ ಪ್ರತಿಯೊಬ್ಬ ಅಧ್ಯಾಪಕರು ಹಾಜರಿ ಪುಸ್ತಕವನ್ನು ನಿರ್ವಹಿಸುತ್ತಾರೆ.  ವಿದ್ಯಾರ್ಥಿಯು ತನ್ನ ತರಗತಿಯ ಪ್ರತಿಯೊಂದು ಪಿರಿಯಡ್‌ನಲ್ಲಿ ತನ್ನ ಹಾಜರಾತಿಯನ್ನು ಸಹಿ ಮೂಲಕ ದಾಖಲಿಸಬೇಕು. ವಿದ್ಯಾರ್ಥಿಯ ಗೈರು ಹಾಜರಿಯನ್ನು ಅಧ್ಯಾಪಕರು ದಾಖಲಿಸಬೇಕು.
  3. ವಿಭಾಗದ ಪ್ರತಿಯೊಂದು ತರಗತಿಯ ಪ್ರತ್ಯೇಕ ಹಾಜರಿ ಪುಸ್ತಕಗಳು ವಿಭಾಗದ ಮುಖ್ಯಸ್ಥರ ಬಳಿ ಇರುತ್ತವೆ. ವಿದ್ಯಾರ್ಥಿಗಳು ಹಾಜರಾತಿಯನ್ನು ಸಹಿಯ ಮೂಲಕ ಈ ಪುಸ್ತಕದಲ್ಲಿ ದಾಖಲಿಸಬೇಕು.
  4. ವಿಭಾಗದಿಂದ ಪೂರ್ವಾನುಮತಿ ಪಡೆದು ಕಲಾಪ್ರದರ್ಶನ, ಕಲಾಶಿಬಿರ, ವಿಚಾರಸಂಕಿರಣ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಆ ದಿನಗಳ ಹಾಜರಾತಿಯನ್ನು ವಿಭಾಗವು ನೀಡುತ್ತದೆ. ವಿವಿಧ ವಿಶ್ವವಿದ್ಯಾಲಯ, ಸಂಘ ಸಂಸ್ಥೆಗಳು ಅಥವಾ ಅಕಾಡೆಮಿಗಳು ಸಂಘಟಿಸುವ ಯಾವುದೇ ಕಾರ್ಯಕ್ರಮಗಳಿಗೆ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದ ಪಕ್ಷದಲ್ಲಿ ಅವರಿಗೆ ಅನ್ಯಕಾರ್ಯ ನಿಮಿತ್ತ ರಜೆಯನ್ನು ನೀಡುವುದು. ಅದರೆ ಮುಂಚಿತವಾಗಿ ವಿಶ್ವವಿದ್ಯಾಲಯದಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಪ್ರಾಧ್ಯಾಪಕರು ಹಾಜರಾತಿ ಪ್ರಮಾಣ ಪತ್ರ ಮತ್ತಿತರ ದಾಖಲೆಗಳನ್ನು ವಿಭಾಗಕ್ಕೆ ಸಲ್ಲಿಸಬೇಕು.
  5. ತರಗತಿಯಲ್ಲ್ಲಿ ಶೇ. ೭೫% ಹಾಜರಾತಿಯನ್ನು ಹೊಂದಿದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹರಾಗುತ್ತಾರೆ.

ಶೇ. ೭೫% ಕಿಂತ ಕಡಿಮೆ ಹಾಜರಾತಿಯನ್ನು ಹೊಂದಿದ ವಿದ್ಯಾರ್ಥಿಗಳ ಪಟ್ಟಿಯನ್ನು ವಿಶ್ವವಿದ್ಯಾಲಯದ ಅಧ್ಯಯನಾಂಗಕ್ಕೆ ಕಳುಹಿಸಬೇಕು. ಶೇ. ೧೦%ರಷ್ಟು ಹಾಜರಾತಿ ಮನ್ನಾವನ್ನು ಸಕಾರಣಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಬೇಕು.

  1. ಆಯಾ ತರಗತಿಗಳಲ್ಲಿನ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳ ಹೆಸರುಗಳನ್ನು ಆಯಾ ವಿದ್ಯಾರ್ಥಿಗಳ ಗಮನಕ್ಕೆ ತಂದು ಸೂಚನಾ ಫಲಕದಲ್ಲಿ ಪರೀಕ್ಷಾ ಪ್ರಕ್ರಿಯೆಗಳು ಪ್ರಾರಂಭವಾಗುವ ಮುಂಚೆಯೇ ಪ್ರಕಟಿಸಬೇಕು.
  2. ಅವಶ್ಯಕವಾದ ಮತ್ತು ತೃಪ್ತಿಕರವಾದ ಹಾಜರಾತಿ ಇಲ್ಲದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗುವುದಿಲ್ಲ.
  3. ಪ್ರತಿ ತರಗತಿಯಲ್ಲಿ ಆಂತರಿಕ ಮೌಲ್ಯಮಾಪನಕ್ಕಾಗಿ ನಿಯೋಜಿಸಿದ ಕೆಲಸ / ಸೆಮಿನಾರ್ / ಕಲಾಕೃತಿಗಳ ಸಲ್ಲಿಕೆ ಇತ್ಯಾದಿಗಳನ್ನು ನಿರ್ದಿಷ್ಟ ಪಡಿಸಿದ ದಿನಾಂಕದೊಳಗೆ ಒಪ್ಪಿಸದಿರುವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅನರ್ಹರಾಗುತ್ತಾರೆ.

ಹಾಸ್ಟೆಲ್ ಹಾಜರಾತಿ ವಿಧಾನ: (ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ)

  1. ಹಾಸ್ಟೆಲ್ ವಿದ್ಯಾರ್ಥಿಯ ವಿಭಾಗದ ಹಾಜರಾತಿಗೂ ಮತ್ತು ಹಾಸ್ಟೆಲ್ ಹಾಜರಾತಿಗೂ ಸಂಬಂದವಿರುತ್ತದೆ. ಹಾಸ್ಟೆಲ್ ಹಾಜರಾತಿಗೂ ಕೂಡಾ ಅಂಕಗಳು ಇರುತ್ತವೆ. ಈ ಅಂಕಗಳನ್ನು ಪರೀಕ್ಷೆಗೆ ಹಾಜರಾಗಲು ಪರಿಗಣಿಸಲಾಗುವುದು.
  2. ಪರೀಕ್ಷಾ ಅರ್ಜಿಸಲ್ಲಿಸುವ ಸಂದರ್ಭದಲ್ಲಿ ಹಾಸ್ಟೆಲ್ ಹಾಜರಾತಿ ಪ್ರಮಾಣಪತ್ರವನ್ನು ವಿದ್ಯಾರ್ಥಿಯು ವಿಭಾಗಕ್ಕೆ ಸಲ್ಲಿಸಬೇಕು.
  3. ಹಾಸ್ಟೆಲ್ ಹಾಜರಾತಿ ಪ್ರಮಾಣವು ಕನಿಷ್ಠ ೭೫% ಇರಬೇಕು. ಕಡಿಮೆಯಾದಲ್ಲಿ ೧೦% ವೈದ್ಯಕೀಯ ರಜಾ ಸೌಲಭ್ಯವಿರುತ್ತದೆ.
  4. ಒಂದು ವೇಳೆ ಹಾಸ್ಟೆಲ್ ವಿದ್ಯಾರ್ಥಿಯು ಹಲವು ಸಂದರ್ಭಗಳಲ್ಲಿ ಹಾಸ್ಟೆಲ್ ಹೊರತುಪಡಿಸಿ, ವಿಭಾಗಕ್ಕೆ ನೇರವಾಗಿ ಹಾಜರಾಗುತ್ತಿದ್ದಲ್ಲಿ, ವಿಭಾಗದ ಹಾಜರಾತಿಯನ್ನು ಹಾಸ್ಟೆಲ್ ಹಾಜರಾತಿಯೆಂದು ಪರಿಗಣಿಸಲಾಗುವುದು.

ಶುಲ್ಕಗಳು:

ವಿಶ್ವವಿದ್ಯಾಲಯದ ನಿಯಮಾನುಸಾರ ವಿವಿಧ ಶುಲ್ಕಗಳು ಇರುತ್ತವೆ.

ಪರೀಕ್ಷೆ ಮತ್ತು ಮೌಲ್ಯಮಾಪನ :

ಎಂ.ವಿ.ಎ. ಪದವಿಯ (ಎರಡು ವರ್ಷಗಳ) ನಾಲ್ಕು ಸೆಮಿಸ್ಟರ್ ಪರೀಕ್ಷೆಗಳು ಆಂತರಿಕ ಅಧ್ಯಯನ ಮತ್ತು ಪರೀಕ್ಷಾ ಮೌಲ್ಯಮಾಪನ ಎಂದು ಎರಡು ವಿಧಾನಗಳನ್ನು ಒಳಗೊಂಡಿರುತ್ತದೆ.

ಆಂತರಿಕ ಮೌಲ್ಯಮಾಪನ

  1. ಪ್ರತಿಯೊಂದು ಸೆಮಿಸ್ಟರ್‌ನ ಪ್ರತಿ ಸಿದ್ಧಾಂತ ಪತ್ರಿಕೆಗೆ ೪೦ ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ. ಪ್ರತಿಯೊಂದು ಪ್ರಾಯೋಗಿಕ ಪತ್ರಿಕೆಗೆ ೧೨೦ ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ. ಇವುಗಳಲ್ಲಿ ಉತ್ತೀರ್ಣ ಹೊಂದಬೇಕಾದರೆ ಶೇ. ೩೫ ರಷ್ಟು ಅಂಕಗಳನ್ನು ಪಡೆಯಬೇಕು.
  2. ಸಿದ್ಧಾಂತ ಪತ್ರಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯು ಆಂತರಿಕ ಮೌಲ್ಯಮಾಪನಕ್ಕಾಗಿ ಎರಡು ನಿಯೋಜಿತ ಲೇಖನ (ಅಸೈನ್‌ಮೆಂಟ್)ಗಳನ್ನು ಸಲ್ಲಿಸಬೇಕು ಹಾಗೂ ವಿಚಾರ ಸಂಕಿರಣ(ಸೆಮಿನಾರ್), ಕಿರುಪರೀಕ್ಷೆ, ತರಗತಿಗಳಲ್ಲಿ ಕಾಲಕಾಲಕ್ಕೆ ನಡೆಸುವ ಚರ್ಚೆ/ಸಂವಾದ, ಕಲಾಪ್ರದರ್ಶನ ಮತ್ತು ಕಮ್ಮಟಗಳಲ್ಲಿ ಭಾಗವಹಿಸಬೇಕು. ಇವುಗಳಿಗನುಗುಣವಾಗಿ ೪೦ ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಮಾಡಲಾಗುತ್ತದೆ. ಇಲ್ಲಿ ೪೦ಕ್ಕೆ ಶೇ.೩೫% ಅಂಕಗಳನ್ನು ಪಡೆದಲ್ಲಿ ಮಾತ್ರ ಉತ್ತೀರ್ಣರಾಗುತ್ತಾರೆ.
  3. ಪ್ರತಿಯೊಂದು ಸೆಮಿಸ್ಟರ್‌ನ ಪ್ರಾಯೋಗಿಕ ಪತ್ರಿಕೆಗೆ ವಿದ್ಯಾರ್ಥಿಗಳು ಕನಿಷ್ಟ ೧೦ ಕಲಾಕೃತಿಗಳನ್ನು ಆಂತರಿಕ ಮೌಲ್ಯಮಾಪನಕ್ಕಾಗಿ ವಿಭಾಗದಲ್ಲಿ ವ್ಯವಸ್ಥೆಗೊಳಿಸಿ (ಡಿಸ್‌ಪ್ಲೇ) ಒಪ್ಪಿಸಬೇಕಾಗುತ್ತದೆ. ಇದರನ್ವಯ ೧೨೦ ಅಂಕಗಳಿಗೆ ಆಂತರಿಕ ಮೌಲ್ಯಮಾಪನವನ್ನು ಮುಖ್ಯಸ್ಥರು ಮತ್ತು ವಿಭಾಗದ ಪ್ರಾಧ್ಯಾಪಕರು ನಿರ್ವಹಿಸುವರು. ಇದರಲ್ಲಿ ಕನಿಷ್ಠ ಶೇ. ೩೫% ಅಂಕಗಳನ್ನು ಪಡೆದಲ್ಲಿ ಮಾತ್ರ ಉತ್ತೀರ್ಣರಾಗುತ್ತಾರೆ.
  4. ವಿದ್ಯಾರ್ಥಿಗಳು ಪ್ರತಿ ಸಿದ್ದಾಂತ ಪತ್ರಿಕೆಗೆ ಸಂಬಂಧಿಸಿದಂತೆ ಸಲ್ಲಿಸಬೇಕಾಗಿರುವ ಎರಡು ನಿಯೋಜಿತ ಲೇಖನ (ಅಸೈನ್‌ಮೆಂಟ್)ಗಳನ್ನು ಮತ್ತು ಪ್ರಾಯೋಗಿಕ ಪತ್ರಿಕೆಗೆ ಸಂಬಂಧಿಸಿದಂತಹ ೧೦ ಕಲಾಕೃತಿಗಳನ್ನು ಪರೀಕ್ಷೆಯ ದಿನಾಂಕಕ್ಕೆ ಒಂದು ವಾರ ಮುಂಚಿತವಾಗಿ ವಿಭಾಗಕ್ಕೆ ಒಪ್ಪಿಸಬೇಕು. ಮತ್ತು ಕಲಾಕೃತಿಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಾಗದಲ್ಲಿ ಪ್ರದರ್ಶನ (ಡಿಸ್‌ಪ್ಲೇ) ಮಾಡಬೇಕು.
  5. ವಿದ್ಯಾರ್ಥಿಗಳು ಡೆಸರ್ಟೇಶನ್‌ನ ಐದು ಪ್ರತಿಗಳನ್ನು ಪರೀಕ್ಷೆಯ ಒಂದು ವಾರದ ಮುಂಚಿತವಾಗಿ ವಿಭಾಗಕ್ಕೆ ಸಲ್ಲಿಸಬೇಕು. ಒಂದು ವೇಳೆ ಡೆಸರ್ಟೇಶನ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಪುನಃ ಡೆಸರ್ಟೇಶನ್ ಸಲ್ಲಿಸಲು ಅವಕಾಶವಿರುತ್ತದೆ. ಮತ್ತು ಈ ಸಂದರ್ಭದಲ್ಲಿ ಡೆಸರ್ಟೇಶನ್‌ನ ಶೀರ್ಷಿಕೆಯನ್ನು ಬದಲಾಯಿಸಿಕೊಳ್ಳಲು ಬಯಸಿದಲ್ಲಿ ವಿಭಾಗದ ಮುಖ್ಯಸ್ಥರು ಮತ್ತು ಮಾರ್ಗದರ್ಶಕರ ಅನುಮತಿ ಪಡೆಯಬೇಕಾಗುತ್ತದೆ. ಡೆಸರ್ಟೇಶನ್ ಸಲ್ಲಿಸಿದ ಬಳಿಕ ಮೌಲ್ಯಮಾಪನ ಮಾಡಿ, ಫಲಿತಾಂಶವನ್ನು ಪ್ರಕಟಿಸಲಾಗುವುದು.
  6. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಸೆಮಿಸ್ಟರ್ ಪರೀಕ್ಷೆ ಆರಂಭವಾಗುವುದಕ್ಕೆ ಒಂದು ವಾರ ಮುಂಚಿತವಾಗಿ ಅಧ್ಯಾಪಕರ ಮೂಲಕ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಬೇಕು.

 

  1. ಆಂತರಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಪುನಃ ಆಂತರಿಕ ಪರೀಕ್ಷೆಗೆ ಕಲಾಕೃತಿಗಳು, ನಿಯೋಜಿತ ಲೇಖನಗಳನ್ನು ಸಲ್ಲಿಸಬೇಕಾಗುತ್ತದೆ. ಆಗ ಪುನಃ ಆಂತರಿಕ ಮೌಲ್ಯಮಾಪನ ಮಾಡಲು ಅವಕಾಶವಿರುತ್ತದೆ. ಆಂತರಿಕ ಮರು ಮೌಲ್ಯಮಾಪನದಲ್ಲಿ ಅಂಕಗಳು ಮೊದಲನೇ ಮೌಲ್ಯಮಾಪನದಲ್ಲಿ ಪಡೆದ ಅಂಕಗಳಿಗಿಂತ ಕಡಿಮೆ ಬಂದಲ್ಲಿ ಮೊದಲನೇ ಆಂತರಿಕ ಮರುಮೌಲ್ಯಮಾಪನದಲ್ಲಿ ಪಡೆದ ಅಂಕಗಳೇ ವಿದ್ಯಾರ್ಥಿಯ ಆಂತರಿಕ ಮರುಮೌಲ್ಯಮಾಪನದಲ್ಲಿ ಪರಿಗಣಿಸಲಾಗುತ್ತದೆ.
  2. ಮೂರನೇ ಸೆಮಿಸ್ಟರ್ ಅವಧಿಯಲ್ಲಿ ವಿದ್ಯಾರ್ಥಿಗಳು ಡೆಸರ್ಟೇಶನ್ ವಿಷಯ ಮತ್ತು ಮಾರ್ಗದರ್ಶಕರನ್ನು ಆಯ್ಕೆಮಾಡಿಕೊಳ್ಳಬೇಕು.
  3. ವಿದ್ಯಾರ್ಥಿಗಳು ನಿಯೋಜಿತ ಲೇಖನ, ವಿಚಾರ ಮಂಡನೆ, ಇತ್ಯಾದಿ ಚಟುವಟಿಕೆಗಳ ದಾಖಲೆಗಳನ್ನು ಆಯಾ ವಿಷಯದ ಪ್ರಾಧ್ಯಾಪಕರಿಗೆ ಸಲ್ಲಿಸಿ, ರುಜು ಮಾಡಿಸಿ, ಮುಖ್ಯಸ್ಥರಿಗೆ ಸಲ್ಲಿಸುವುದು. ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಆಂತರಿಕ ಮೌಲ್ಯಮಾಪನ ಮಾಡುವರು.

 

ಎಂ.ವಿ.ಎ. (ಚಿತ್ರಕಲೆ) ನಾಲ್ಕು ಸೆಮಿಸ್ಟರ್‌ಗಳ ಅಂಕಗಳು

ಸಿದ್ಧಾಂತ ಪತ್ರಿಕೆಯ ಆಂತರಿಕ ಅಂಕಗಳ ವಿಂಗಡಣೆ

  1. ವಿದ್ಯಾರ್ಥಿಯ ಹಾಜರಾತಿ                        –        ೧೦ ಅಂಕಗಳು
  2. ನಿಯೋಜಿತ ಲೇಖನಗಳು                        –        ೧೦ ಅಂಕಗಳು
  3. ಸೆಮಿನಾರ್                                        –         ೧೦ ಅಂಕಗಳು
  4. ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ            –         ೦೫ ಅಂಕಗಳು
  5. ವಿದ್ಯಾರ್ಥಿಯ ನಡವಳಿಕೆ                         –         ೦೫ ಅಂಕಗಳು

ಒಟ್ಟು    ೪೦ ಅಂಕಗಳು

ಸಿದ್ಧಾಂತ ಪತ್ರಿಕೆ ೪.೩ ವಿಷಯ : ಡೆಸರ್ಟೇಶನ್‌ನ ಆಂತರಿಕ ಮೌಲ್ಯಮಾಪನ ಅಂಕಗಳು

  1. ವಿದ್ಯಾರ್ಥಿಯ ಹಾಜರಾತಿ                        –        ೦೫ ಅಂಕಗಳು
  2. ಮೌಖಿಕ ಸಂದರ್ಶನ                          –           ೧೦ ಅಂಕಗಳು
  3. ಡೆಸರ್ಟೇಶನ್‌ನ ಅಚ್ಚುಕಟ್ಟುತನ              –          ೦೫ ಅಂಕಗಳು

                                                          ಒಟ್ಟು     ೨೦ ಅಂಕಗಳು

ಪ್ರಾಯೋಗಿಕ ಪತ್ರಿಕೆ (ಸೃಜನಾತ್ಮಕ ಸಂಯೋಜನೆ)ಗಳ ಆಂತರಿಕ ಮೌಲ್ಯಮಾಪನ ಅಂಕಗಳ ವಿಂಗಡಣೆ

  1. ವಿದ್ಯಾರ್ಥಿಯ ಹಾಜರಾತಿ                                  –       ೧೦ ಅಂಕಗಳು
  2. ವಿಷಯ ಆಯ್ಕೆ ಮತ್ತು ಶೈಲಿ                              –        ೨೦ ಅಂಕಗಳು
  3. ವರ್ಣವಿನ್ಯಾಸ ಮತ್ತು ಮೈವಳಿಕೆ                          –        ೨೦ ಅಂಕಗಳು
  4. ಸ್ಪೇಸ್ ಹಂಚಿಕೆ, ಸಂಯೋಜನೆ                            –        ೩೦ ಅಂಕಗಳು
  5. ಸೃಜನಾತ್ಮಕ ರಚನೆ ಮತ್ತು ತಂತ್ರಗಾರಿಕೆ               –        ೨೦ ಅಂಕಗಳು
  6. ಕಲಾಕೃತಿಯ ಸಂಖ್ಯೆ (ಕನಿಷ್ಠ ೧೦ ಕಲಾಕೃತಿಗಳು)      –        ೨೦ ಅಂಕಗಳು

ಒಟ್ಟು     –        ೧೨೦ ಅಂಕಗಳು

ಪ್ರಾಯೋಗಿಕ ಪತ್ರಿಕೆ (ಸೃಜನಾತ್ಮಕ ಸಂಯೋಜನೆ)ಗಳ ಪರೀಕ್ಷಾ ಮೌಲ್ಯಮಾಪನ ಅಂಕಗಳ ವಿಂಗಡಣೆ

  1. ಕರಡು ಚಿತ್ರಗಳು                                –       ೨೦ ಅಂಕಗಳು
  2. ವಿಷಯ ಆಯ್ಕೆ ಮತ್ತು ಶೈಲಿ                    –       ೨೦ ಅಂಕಗಳು
  3. ಸೃಜನಾತ್ಮಕ ರಚನೆ ಮತ್ತು ತಂತ್ರಗಾರಿಕೆ    –       ೧೦೦ ಅಂಕಗಳು
  4. ಸ್ಪೇಸ್ ಹಂಚಿಕೆ, ಸಂಯೋಜನೆ                 –        ೨೦ ಅಂಕಗಳು
  5. ವರ್ಣವಿನ್ಯಾಸ ಮತ್ತು ಮೈವಳಿಕೆ               –        ೨೦ ಅಂಕಗಳು

ಒಟ್ಟು    –        ೧೮೦ ಅಂಕಗಳು

ಪರೀಕ್ಷಾ ಮೌಲ್ಯಮಾಪನ

  1. ಪ್ರತಿಯೊಂದು ಸಿದ್ಧಾಂತ ಪರೀಕ್ಷೆಗೆ ೪೦ ಆಂತರಿಕ ಅಂಕಗಳಿರುತ್ತವೆ. ಲಿಖಿತ ಪರೀಕ್ಷೆಗೆ ೬೦ ಅಂಕಗಳಿರುತ್ತವೆ. ೬೦ ಅಂಕಗಳ ಪ್ರತಿ ಸಿದ್ಧಾಂತ ಪ್ರಶ್ನೆಪತ್ರಿಕೆಯು ’ಅ’ ಮತ್ತು ’ಬ’ ಎರಡು ವಿಭಾಗಗಳನ್ನು ಹೊಂದಿರುತ್ತದೆ. ’ಅ’ ವಿಭಾಗದಲ್ಲಿ ಪ್ರಬಂಧ ಮಾದರಿಯ ಪ್ರಶ್ನೆಗಳಿರುತ್ತವೆ. ’ಬ’ ವಿಭಾಗವು ಟಿಪ್ಪಣಿ ರೂಪದ ಪ್ರಶ್ನೆಗಳನ್ನು ಹೊಂದಿರುತ್ತದೆ. ಪ್ರಬಂಧ ಮಾದರಿಯ ಪ್ರಶ್ನೆಗೆ ೧೨ ಅಂಕಗಳಂತೆ ನಾಲ್ಕು ಪ್ರಶ್ನೆಗಳಿಗೆ ಒಟ್ಟು ೪೮ ಅಂಕಗಳು ಇರುತ್ತವೆ. ಟಿಪ್ಪಣಿ ರೂಪದ ಪ್ರಶ್ನೆಗೆ ೦೬ ಅಂಕಗಳಂತೆ ಎರಡು ಪ್ರಶ್ನೆಗಳಿಗೆ ಒಟ್ಟು ೧೨ ಅಂಕಗಳು ಇರುತ್ತವೆ.
  2. ಪ್ರತಿ ಸೆಮಿಸ್ಟರ್‌ನಲ್ಲಿಯೂ ಎರಡು ಸಿದ್ಧಾಂತ ಪತ್ರಿಕೆಗಳಲ್ಲದೇ ಒಂದು ಪ್ರಾಯೋಗಿಕ ಪತ್ರಿಕೆಯು ಇರುತ್ತದೆ. ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್‌ನ ಪ್ರಾಯೋಗಿಕ ವಿಷಯವನ್ನೇ ಕೊನೆಯ (ನಾಲ್ಕನೇ) ಸೆಮಿಸ್ಟರ್‌ನವರೆಗೆ ಮುಂದುವರಿಸಿ, ವಿಶೇಷ ಅಧ್ಯಯನ ಮಾಡಬೇಕಾಗುತ್ತದೆ. ಪ್ರಾಯೋಗಿಕ ವಿಷಯಕ್ಕೆ ಪ್ರತಿ ಸೆಮಿಸ್ಟರ್‌ನಲ್ಲಿ ಆಂತರಿಕ ಮೌಲ್ಯಮಾಪನಕ್ಕೆ ೧೨೦ ಅಂಕಗಳು ಹಾಗೂ ಪರೀಕ್ಷೆಗೆ ೧೮೦ ಅಂಕಗಳಿರುತ್ತವೆ. ಹೀಗೆ ಒಟ್ಟು ೩೦೦ ಅಂಕಗಳಿರುತ್ತವೆ.
  3. ನಾಲ್ಕನೇ ಸೆಮಿಸ್ಟರ್‌ನಲ್ಲಿ ಒಂದು ಸಿದ್ಧಾಂತ ಪತ್ರಿಕೆ ಇರುತ್ತದೆ. ಇನ್ನೊಂದು ಸಿದ್ದಾಂತ ಪತ್ರಿಕೆಯ ಬದಲಾಗಿ ಡೆಸರ್ಟೇಶನ್ ಪತ್ರಿಕೆ ಇರುತ್ತದೆ. ಈ ಪತ್ರಿಕೆಯು ೨೦ ಮೌಖಿಕ ಪರೀಕ್ಷೆ (ಆಂತರಿಕ) ಅಂಕಗಳನ್ನು ಹಾಗೂ ೮೦ ಪರೀಕ್ಷಾ ಮೌಲ್ಯಮಾಪನ ಅಂಕಗಳನ್ನು ಒಳಗೊಂಡಿರುತ್ತದೆ. ಪ್ರತಿ ಸೆಮಿಸ್ಟರ್‌ನಲ್ಲಿ ಒಂದು ಪ್ರಾಯೋಗಿಕ ಪತ್ರಿಕೆಗೆ ೩೦೦ ಅಂಕಗಳು ಹಾಗೂ ೨ ಸಿದ್ಧಾಂತ (ಲಿಖಿತ) ಪತ್ರಿಕೆಗಳಿಗೆ ೨೦೦ ಅಂಕಗಳು ಇರುತ್ತವೆ. ಹೀಗೆ ಪ್ರತಿ ಸೆಮಿಸ್ಟರ್‌ನಲ್ಲಿ ಒಟ್ಟು ೫೦೦ ಅಂಕಗಳಿರುತ್ತವೆ.
  4. ೧. ಸಿದ್ಧಾಂತ ಪತ್ರಿಕೆಯ ಪರೀಕ್ಷೆಯ ಕಾಲಾವಧಿ ೨ ತಾಸುಗಳು

೨. ಪ್ರಾಯೋಗಿಕ ಪತ್ರಿಕೆಯ ಪರೀಕ್ಷೆಯ ಕಾಲಾವಧಿ ೨೦ ತಾಸುಗಳು (೪ ದಿನಗಳು)

ಪರೀಕ್ಷಾ (ಕೊಠಡಿ) ನಿಯಮಗಳು

  1. ಪ್ರತಿಯೊಬ್ಬ ವಿದ್ಯಾರ್ಥಿಯು ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ೧೫ ನಿಮಿಷಗಳ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ಬಂದು ತಮ್ಮ ಪ್ರವೇಶ ಪತ್ರದ (ಹಾಲ್‌ಟಿಕೆಟ್) ಸಂಖ್ಯೆಯನ್ನು ಗುರುತಿಸಿ ಹಾಜರಾಗಬೇಕು.
  2. ವಿದ್ಯಾರ್ಥಿಯು ಪರೀಕ್ಷಾ ಪ್ರವೇಶ ಪತ್ರವನ್ನು ಕೊಠಡಿಯ ಮೇಲ್ವಿಚಾರಕರಿಗೆ ತೋರಿಸಬೇಕು.
  3. ಪರೀಕ್ಷೆ ಪ್ರಾರಂಭವಾದ ಸಮಯದಿಂದ ೩೦ ನಿಮಿಷಗಳವರೆಗೆ ಮಾತ್ರ ವಿದ್ಯಾರ್ಥಿಗಳು ಆಕಸ್ಮಿಕವಾಗಿ ತಡವಾಗಿ ಬಂದಲ್ಲಿ ಅವರಿಗೆ ಅವಕಾಶವಿರುತ್ತದೆ.
  4. ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾದ ೩೦ ನಿಮಿಷಗಳ ಒಳಗಾಗಿ ಪತ್ರಿಕೆಯನ್ನು ಒಪ್ಪಿಸಿ ಹೋಗುವಂತಿಲ್ಲ.
  5. ಪ್ರಾಯೋಗಿಕ ಪತ್ರಿಕೆಯು ೨೦ ತಾಸುಗಳ ಅಂದರೆ ನಾಲ್ಕು ದಿನಗಳ ಪತ್ರಿಕೆಯಾಗಿದ್ದು, ಯಾವುದೇ ವಿದ್ಯಾರ್ಥಿ ಕನಿಷ್ಠ ೨ ದಿನ (೧೦ ತಾಸು) ಗಳಾದರೂ ಹಾಜರಾಗತಕ್ಕದ್ದು. ಎರಡು ಅಥವಾ ಮೂರನೇ ದಿನ ಪತ್ರಿಕೆಯನ್ನು ಪೂರ್ಣಗೊಳಿಸಿದಲ್ಲಿ ಆ ಪತ್ರಿಕೆಯನ್ನು ಮೇಲ್ವಿಚಾರಕರಿಗೆ ಒಪ್ಪಿಸಿ ಹೋಗಬಹುದು. ಆದರೆ ಒಂದು ಸಲ ಉತ್ತರ ಪತ್ರಿಕೆಯನ್ನು ಒಪ್ಪಿಸಿದ ನಂತರ ಮತ್ತೆ ಬಂದು ಆ ಪತ್ರಿಕೆಗೆ ಹಾಜರಾಗುವಂತಿಲ್ಲ.
  6. ಕಿವುಡ ಮತ್ತು ಮೂಗ ವಿದ್ಯಾರ್ಥಿಗಳು ಸಿದ್ಧಾಂತ ಪತ್ರಿಕೆಗೆ ಬದಲಾಗಿ ಈ ಕೆಳಕಂಡ ರೀತಿಯಲ್ಲಿ ಪ್ರಾಯೋಗಿಕ ಪತ್ರಿಕೆಯ ಪರೀಕ್ಷೆ ತೆಗೆದುಕೊಳ್ಳಬಹುದು.

ಸೆಮಿಸ್ಟರ್-೧      ಸಿದ್ಧಾಂತ ಪತ್ರಿಕೆ ೧.೨ ಬದಲಾಗಿ ಸ್ಮರಣ ಚಿತ್ರಣದ ಪತ್ರಿಕೆ

ಸಿದ್ಧಾಂತ ಪತ್ರಿಕೆ ೧.೩. ಬದಲಾಗಿ ನಿಸರ್ಗ ಚಿತ್ರಣದ ಪತ್ರಿಕೆ

ಸೆಮಿಸ್ಟರ್-೨      ಸಿದ್ಧಾಂತ ಪತ್ರಿಕೆ ೨.೨ ಬದಲಾಗಿ ಸ್ಮರಣ ಚಿತ್ರಣದ ಪತ್ರಿಕೆ

ಸಿದ್ಧಾಂತ ಪತ್ರಿಕೆ ೨.೩. ಬದಲಾಗಿ ನಿಸರ್ಗ ಚಿತ್ರಣದ ಪತ್ರಿಕೆ

 

ಸೆಮಿಸ್ಟರ್-೩      ಸಿದ್ಧಾಂತ ಪತ್ರಿಕೆ ೩.೨. ಬದಲಾಗಿ ಸ್ಮರಣ ಚಿತ್ರಣದ ಪತ್ರಿಕೆ

ಸಿದ್ಧಾಂತ ಪತ್ರಿಕೆ ೩.೩. ಬದಲಾಗಿ ನಿಸರ್ಗ ಚಿತ್ರಣದ ಪತ್ರಿಕೆ

ಸೆಮಿಸ್ಟರ್-೪      ಸಿದ್ಧಾಂತ ಪತ್ರಿಕೆ ೪.೨. ಬದಲಾಗಿ ಸಂಯೋಜನ ಚಿತ್ರಣ ಪತ್ರಿಕೆ

ಸಿದ್ಧಾಂತ ಪತ್ರಿಕೆ ೪.೩. (ಡೆಸರ್ಟೇಶನ್) ಬದಲಾಗಿ ಎಂಟು ಕಲಾಕೃತಿಗಳನ್ನು ರಚಿಸಿ ಒಪ್ಪಿಸಬೇಕು. ಉಳಿದಂತೆ ಸಾಮಾನ್ಯ ವಿದ್ಯಾರ್ಥಿಗಳಿಗಿರುವ ಪರೀಕ್ಷೆಯ ನಿಯಮಗಳು ಇವರಿಗೂ ಅನ್ವಯಿಸುತ್ತವೆ.

  1. ಯಾವುದೇ ಪತ್ರಿಕೆಯಲ್ಲಿ ಶೇ. ೬೦ಕ್ಕಿಂತ ಕಡಿಮೆ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರೆ ಅಂಥ ಪತ್ರಿಕೆಯ ಅಂಕಗಳನ್ನು ಪುನಃ ಉತ್ತಮಗೊಳಿಸಿಕೊಳ್ಳುವ (Imಠಿಡಿovemeಟಿಣ) ಅವಕಾಶವಿದೆ. ಈ ಅವಕಾಶ ಒಂದು ಬಾರಿ ಮಾತ್ರ ಇರುತ್ತದೆ. ವಿದ್ಯಾರ್ಥಿಯ ಅಂಕಗಳು ಮೊದಲು ತೆಗೆದುಕೊಂಡಿದ್ದ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗಿಂತ ಕಡಿಮೆ ಇದ್ದರೆ, ಮೊದಲು ಪಡೆದ ಅಂಕಗಳೇ ಪರಿಗಣಿಸಲ್ಪಡುತ್ತವೆ.

ಪರೀಕ್ಷಾ ಮಂಡಳಿ ಮತ್ತು ಮೌಲ್ಯಮಾಪನ ವಿಧಾನ

  1. ಪರೀಕ್ಷಾ ಮಂಡಳಿಯು ಕರಡು ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿ ಒಪ್ಪಿಗೆ ನೀಡುವುದು.
  2. ಸಿದ್ಧಾಂತ ಮತ್ತು ಪ್ರಾಯೋಗಿಕ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಮತ್ತು ಮೌಲ್ಯಮಾಪನ ಮಾಡುವ ಕಾರ್ಯವನ್ನು ಆಂತರಿಕ ಮತ್ತು ಬಾಹ್ಯ ಪ್ರಾಧ್ಯಾಪಕರು ನಿರ್ವಹಿಸುತ್ತಾರೆ.
  3. ಯಾವುದೇ ಸಿದ್ಧಾಂತ ಪತ್ರಿಕೆಯಲ್ಲಿ ಪ್ರಥಮ (ಆಂತರಿಕ ಮೌಲ್ಯಮಾಪಕರು) ಮತ್ತು ದ್ವಿತೀಯ (ಬಾಹ್ಯ ಮೌಲ್ಯಮಾಪಕರು) ಮೌಲ್ಯಮಾಪನದ ಅಂಕಗಳಲ್ಲಿ ೧೨ ಅಂಕಗಳಿಗಿಂತ ಹೆಚ್ಚು ಅಂತರ ಬಂದಿದ್ದರೆ ಅದನ್ನು ಮೂರನೇ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸುವ ಅಧಿಕಾರ ಪರೀಕ್ಷಾ ಮಂಡಳಿಯ ಅಧ್ಯಕ್ಷರಿಗಿರುತ್ತದೆ.
  4. ಲಿಖಿತ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯು ಸತತವಾಗಿ ಮೂರು ಸಲ ಮರುಪರೀಕ್ಷೆಗೆ ಹಾಜರಾಗಲು ಅವಕಾಶವಿದೆ. ಅದಾಗ್ಯೂ ಪಾಸಾಗದಿದ್ದರೆ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿದೆ.
  5. ವಿದ್ಯಾರ್ಥಿಯು ಕೋರ್ಸ್‌ನ್ನು ಮಧ್ಯದಲ್ಲಿ ನಿಲ್ಲಿಸಿದರೆ, ಅವನಿಗೆ ಮರುಪರೀಕ್ಷೆಗೆ ೦೬ ವರ್ಷಗಳ ಅವಧಿಯ ಅವಕಾಶವಿರುತ್ತದೆ. ಈ ಅವಧಿಯೊಳಗಾಗಿ ವಿದ್ಯಾರ್ಥಿಯು ತನ್ನ ಕೋರ್ಸ್‌ನ್ನು ಪೂರ್ಣಗೊಳಿಸಿ
  6. ಕೊಳ್ಳಬೇಕು.
  7. ಪರೀಕ್ಷಾ ಕೊಠಡಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಇವರು ಅಧ್ಯಯನಾಂಗದ ಸಿಬ್ಬಂದಿಯಾಗಿರುತ್ತಾರೆ. ಇವರು ಪರೀಕ್ಷಾರ್ಥಿಗಳ ಹಾಜರಿಯನ್ನು ತೆಗೆದುಕೊಂಡು ಅವರನ್ನು ಪರೀಕ್ಷಾ ಕೊಠಡಿಗೆ ಕಳಿಸುತ್ತಾರೆ.
  8. ಪ್ರಾಯೋಗಿಕ ಪರೀಕ್ಷಕರು ಪರೀಕ್ಷೆ ನಡೆಯುವ ಪತ್ರಿಕೆಯ ಪಠ್ಯಕ್ರಮ(Sಥಿಟಟಚಿbus) ಮತ್ತು ಪ್ರಶ್ನೆಪತ್ರಿಕೆಯನ್ನು ಮುಂದಿಟ್ಟುಕೊಂಡು ಪರೀಕ್ಷೆ ನಡೆಸುತ್ತಾರೆ.
  9. ಪ್ರಾಯೋಗಿಕ ಪರೀಕ್ಷಾಮಂಡಳಿಯಲ್ಲಿ ಒಬ್ಬರು ಅಧ್ಯಕ್ಷರು ಮತ್ತು ಇಬ್ಬರು ಅಥವಾ ಮೂವರು ಸದಸ್ಯರಿರುತ್ತಾರೆ.

ಕೃಪಾಂಕ ನೀಡುವಿಕೆ

  1. ಒಬ್ಬ ವಿದ್ಯಾರ್ಥಿಗೆ ಒಂದು ಕೋರ್ಸನ ಒಂದು ತರಗತಿಯ ಒಟ್ಟು ಪರೀಕ್ಷೆಗೆ ೦೫ ಕೃಪಾಂಕಗಳಿರುತ್ತವೆ.
  2. ಒಬ್ಬ ವಿದ್ಯಾರ್ಥಿಯು ಎಲ್ಲಾ ಪತ್ರಿಕೆಗಳಲ್ಲಿ ಉತ್ತೀರ್ಣವಾಗಿ ಒಂದು ಪತ್ರಿಕೆಯಲ್ಲಿ ಮಾತ್ರ ಉತ್ತೀರ್ಣವಾಗಲು ೦೫ ಅಂಕಗಳು ಕಡಿಮೆ ಬಿದ್ದರೆ, ಗರಿಷ್ಠ ೦೫ ಕೃಪಾಂಕಗಳನ್ನು ನೀಡಲಾಗುವುದು.
  3. ಈ ಕೃಪಾಂಕಗಳನ್ನು ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್)ಯ ಸಿದ್ಧತಾಕಾರ್ಯದಲ್ಲಿ ತೊಡಗಿರುವ ಟ್ಯಾಬುಲೇಟರ್ ಅಧ್ಯಯನಾಂಗದ ನಿರ್ದೇಶಕರ ಗಮನಕ್ಕೆ ತಂದು ಸಮಾಲೋಚಿಸಿ ಸೇರಿಸುತ್ತಾರೆ.

ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿ:

  1. ಅಧ್ಯಯನ ಮಂಡಳಿಯು ಹಾಗೂ ಪರೀಕ್ಷಾ ಮಂಡಳಿಯು ಕನ್ನಡ ವಿಶ್ವವಿದ್ಯಾಲಯದ ನಿಯಮಾನುಸಾರ ಕಾರ್ಯ ನಿರ್ವಹಿಸುವುದು.
  2. ಈ ಮಂಡಳಿಗಳಲ್ಲಿ ಭಾಗವಹಿಸಿದ ಬಾಹ್ಯ ಪರೀಕ್ಷಕರಿಗೆ ವಿಶ್ವವಿದ್ಯಾಲಯದ ನಿಯಮಾನುಸಾರ ಸೌಲಭ್ಯಗಳಿರುತ್ತವೆ.

ಅಧ್ಯಯನ ಮಂಡಳಿ

೧. ವಿಭಾಗದ ಮುಖ್ಯಸ್ಥರು                              : ಅಧ್ಯಕ್ಷರು

೨. ಪ್ರಾಧ್ಯಾಪಕರು         (ಚಿತ್ರಕಲೆ ವಿಷಯದವರು)  : ಸದಸ್ಯರು

೩. ಪ್ರಾಧ್ಯಾಪಕರು         (ಚಿತ್ರಕಲೆ ವಿಷಯದವರು)  : ಸದಸ್ಯರು

* ಅಧ್ಯಯನ ಮಂಡಳಿಯಲ್ಲಿ ಆಂತರಿಕ ಹಾಗೂ ಬಾಹ್ಯ ಪ್ರಾಧ್ಯಾಪಕರು ಸದಸ್ಯರಾಗಿರುತ್ತಾರೆ.

ಪರೀಕ್ಷಾ ಮಂಡಳಿಯ ಸದಸ್ಯರನ್ನು ಅಧ್ಯಯನ ಮಂಡಳಿಯ (B.O.S) ಸಭೆಯಲ್ಲಿ ನೇಮಿಸಲಾಗುತ್ತದೆ.

ಪರೀಕ್ಷಾ ಮಂಡಳಿ

೧. ವಿಭಾಗದ ಮುಖ್ಯಸ್ಥರು                        : ಅಧ್ಯಕ್ಷರು

೨. ಪರೀಕ್ಷಕರು (ಚಿತ್ರಕಲೆ ವಿಷಯದವರು)    : ಸದಸ್ಯರು

೩. ಪರೀಕ್ಷಕರು (ಚಿತ್ರಕಲೆ ವಿಷಯದವರು)    : ಸದಸ್ಯರು

  1. ಪರೀಕ್ಷಾ ಮಂಡಳಿಯ ಸದಸ್ಯರ ಸಂಬಂಧಿಕರು ಪರೀಕ್ಷಾರ್ಥಿಯಾಗಿದ್ದರೆ ಅಂತಹ ಸದಸ್ಯರು ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಆ ಸದಸ್ಯರ ಬದಲಾಗಿ ಇನ್ನೊಬ್ಬ ಸದಸ್ಯರನ್ನು ವಿಭಾಗದ ಮುಖ್ಯಸ್ಥರು ಆಡಳಿತದೊಂದಿಗೆ ಸಮಾಲೋಚಿಸಿ, ನೇಮಿಸುವರು.
  2. ಪರೀಕ್ಷಾ ಅವಧಿಯು ಸುದೀರ್ಘವಾಗಿದ್ದು, ಪರೀಕ್ಷಾ ಮಂಡಳಿಯ ಸದಸ್ಯರು ಅಷ್ಟು ದಿನ ಕಾರ್ಯ ನಿರ್ವಹಿಸಲು ಸಾಧ್ಯವಾಗದಿರುವಾಗ ಒಂದಕ್ಕಿಂತ ಹೆಚ್ಚಿನ ಪರೀಕ್ಷಾ ಮಂಡಳಿ ರಚಿಸಲು ಅವಕಾಶ ಇರುವುದು.
  3. ಪರೀಕ್ಷಾ ಮಂಡಳಿಯಲ್ಲಿ ಆಂತರಿಕ ಹಾಗೂ ಬಾಹ್ಯ ಪ್ರಾಧ್ಯಾಪಕರು ಸದಸ್ಯರಾಗಿರುತ್ತಾರೆ.

ಘಟಿಕೋತ್ಸವ (Convocation Certificate) ಪ್ರಮಾಪತ್ರ

ಶೀರ್ಷಿಕೆ : ಎಂ.ವಿ.ಎ. (ಚಿತ್ರಕಲೆ)

ವಿಶ್ವವಿದ್ಯಾಲಯವು ನೀಡುವ ಘಟಿಕೋತ್ಸವ ಪ್ರಮಾಣಪತ್ರವು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳೆರಡನ್ನೂ ಒಳಗೊಂಡಿರುತ್ತದೆ. ಎಂ.ವಿ.ಎ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ನಿಗದಿತ ಶುಲ್ಕವನ್ನು ಪಾವತಿಸಿ ಘಟಿಕೋತ್ಸವ ಪ್ರಮಾಣಪತ್ರ ಪಡೆಯಬಹುದು.

ಘಟಿಕೋತ್ಸವ (Convocation Certificate) ಮತ್ತು ಅಂಕಪಟ್ಟಿ ಪ್ರಮಾಣ ಪತ್ರ

  1. ಘಟಿಕೋತ್ಸವ ಅಂಕಪಟ್ಟಿ ಶೀರ್ಷಿಕೆ : ಎಂ.ವಿ.ಎ. (ಚಿತ್ರಕಲೆ)
  2. ವಿಶ್ವವಿದ್ಯಾಲಯವು ನೀಡುವ ಅಂಕಪಟ್ಟಿಗಳು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳೆರಡನ್ನೂ ಒಳಗೊಂಡಿರುತ್ತದೆ.
  3. ಎಂ.ವಿ.ಎ ಸ್ನಾತಕೋತ್ತರ ಪದವಿಯ ಅಂಕಪಟ್ಟಿಯ ಜೊತೆಗೆ ಉತ್ತೀರ್ಣ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದೂ ಕೂಡ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಇರುತ್ತದೆ.
  4. ಮೂಲ ಅಂಕಪಟ್ಟಿಗಳನ್ನು ಕಳೆದುಕೊಂಡು ಪುನಃ ಅಂಕಪಟ್ಟಿಯನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಕೇಳುವ ದಾಖಲೆಗಳನ್ನು ಸಲ್ಲಿಸಬೇಕು. ಹಾಗೂ ನಿಗದಿತ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ಪಾವತಿಸಿ ಅಂಕಪಟ್ಟಿ ಪಡೆಯಬಹುದು.
  5. ಕನಿಷ್ಠ ಎರಡಕ್ಕಿಂತ ಹೆಚ್ಚು ಬಾರಿ ತಿದ್ದುಪಡಿಗೆ ಒಳಪಡಿಸಿ, ಅಂಕಪಟ್ಟಿಗಳನ್ನು ಪಡೆಯುವ ವಿದ್ಯಾರ್ಥಿಗಳು ನಿಗಧಿತ ಶುಲ್ಕವನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಪಾವತಿಸಿ ಅಂಕಪಟ್ಟಿಯನ್ನು ಪಡೆಯಬಹುದು.
  6. ಅಂಕಪಟ್ಟಿಯಲ್ಲಿ ಯಾವುದೇ ತಿದ್ದುಪಡಿಗಳಿದ್ದಲ್ಲಿ ಫಲಿತಾಂಶ ಪ್ರಕಟವಾದ ಆರು ತಿಂಗಳೊಳಗಾಗಿ ದಾಖಲೆಗಳನ್ನು ಒದಗಿಸಿ ಸರಿಪಡಿಸಿಕೊಳ್ಳಲು ಒಂದು ಸಲ ಅವಕಾಶವಿದೆ. ಇಂತಹ ಸಂದರ್ಭಗಳಲ್ಲಿ ಮುಖ್ಯಸ್ಥರ ಅಧಿಕೃತ ದೃಢೀಕರಣ ಅವಶ್ಯವಾಗಿರುತ್ತದೆ. ಆರು ತಿಂಗಳ ನಂತರದಲ್ಲಿ ವಿಶ್ವವಿದ್ಯಾಲಯದ ನಿಯಮಾನುಸಾರ ಶುಲ್ಕ ಪಾವತಿಸಬೇಕಾಗುತ್ತದೆ.

 

ಹಣಕಾಸು ವ್ಯವಹಾರ

ವಿಶ್ವವಿದ್ಯಾಲಯದ ಎಲ್ಲಾ ಹಣಕಾಸು ವ್ಯವಹಾರಗಳು “ಹಣಕಾಸು ಅಧಿಕಾರಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ. ವಿದ್ಯಾರಣ್ಯ ೫೮೩೨೭೬ ಹೊಸಪೇಟೆ, ತಾಲೂಕು ಬಳ್ಳಾರಿ ಜಿಲ್ಲೆ” ಇವರ ಹೆಸರಿನಲ್ಲಿ ಇರುತ್ತದೆ.

 

ಶೈಕ್ಷಣಿಕ ವರ್ಷದ ವೇಳಾಪಟ್ಟಿ

ಶೈಕ್ಷಣಿಕ ವರ್ಷದ ವೇಳಾಪಟ್ಟಿಯು ವಿಶ್ವವಿದ್ಯಾಲಯದ ನಿಯಮಾನುಸಾರ ಇರುತ್ತದೆ.

 

ಫಲಿತಾಂಶಗಳ ದರ್ಜೆವಾರು

* ಸಾಮಾನ್ಯ ದರ್ಜೆ ಶೇ. ೩೫ರಿಂದ ಶೇ. ೫೪ ರವರೆಗೆ

* ದ್ವಿತೀಯ ದರ್ಜೆ ಶೇ. ೫೫ ರಿಂದ ಶೇ. ೫೯ ರವರೆಗೆ

* ಪ್ರಥಮ ದರ್ಜೆ ಶೇ. ೬೦ ರಿಂದ ಶೇ. ೭೦ ರವರೆಗೆ

* ಉನ್ನತ ಶ್ರೇಣಿ (Distinction) ಶೇ. ೭೧ ಕ್ಕಿಂತ ಮೇಲ್ಪಟ್ಟದ್ದು.