೧. ಕೋರ್ಸ್‌ಗೆ ಪ್ರವೇಶ

೧.   ಭಾಷಾ ನಿಕಾಯಎಂ.ಎ., ಪಿಎಚ್.ಡಿ. ಸಂಯೋಜಿತ ಪದವಿ ಕೋರ್ಸ್

ವಿಷಯ : ಕನ್ನಡ ಸಾಹಿತ್ಯ

೨. ಅವಧಿ

1   ಇಪ್ಪತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಇದು ೬ ವರ್ಷಗಳ ಕೋರ್ಸ್ ಆಗಿರುತ್ತದೆ. ೨+೪ ವರ್ಷಗಳು ಅಂದರೆ ೨ ವರ್ಷ. ಎಂ.ಎ. ೪ ವರ್ಷ ಪಿಎಚ್.ಡಿ.

೨.  ಎರಡು ವರ್ಷ. ಎಂ.ಎ. ಮುಗಿಸಿ ಹೊರಗೆ ಹೋಗಲು ಈ ಕೋರ್ಸ್‌ನಲ್ಲಿ ಅವಕಾಶ ಇರುತ್ತದೆ. ಆದರೆ ಪಿಎಚ್.ಡಿ. ಅಧ್ಯಯನಕ್ಕೆ ನಡುವೆ ಒಳಬರಲು ಅವಕಾಶ ಇರುವುದಿಲ್ಲ.  ಆರು ವರ್ಷಗಳ ಅವಧಿಯಲ್ಲಿ ಕೋರ್ಸ್ ಮುಗಿಸಬೇಕಾಗುತ್ತದೆ. ವಿಸ್ತರಣೆಗೆ ಅವಕಾಶವಿರುವುದಿಲ್ಲ.

೩.   ಅನಿವಾರ್ಯ ಸಂದರ್ಭಗಳಲ್ಲಿ ಸಕಾರಣ ನೀಡಿ ದಾಖಲೆಗಳೊಡನೆ ಮಾರ್ಗದರ್ಶಕರ ಮೂಲಕ ಮನವಿ ಸಲ್ಲಿಸಿದಲ್ಲಿ ಪಿಎಚ್.ಡಿ. ಸಮಿತಿಯು ವಿಶೇಷ ಪ್ರಕರಣವೆಂದು ಪರಿಗಣಿಸಿ ಆರು ತಿಂಗಳು ವಿಸ್ತರಣೆಗೆ ಮಾನ್ಯ ಕುಲಪತಿಗಳಿಗೆ ಶಿಫಾರಸ್ಸು ಮಾಡಬಹುದು. ಅಂತಿಮ ನಿರ್ಧಾರ ಕುಲಪತಿಗಳದು.

೪.   ಇದರಲ್ಲಿ ಒಟ್ಟು ಹನ್ನೆರಡು ಸೆಮಿಸ್ಟರ್‌ಗಳಿರುತ್ತವೆ. ೧, ೨, ೩, ೪ ಈ ನಾಲ್ಕು ಎಂ.ಎ. ಸೆಮಿಸ್ಟರುಗಳು ಇರುತ್ತವೆ. ಇಲ್ಲಿ ೫, ೬, ೭, ೮, ೯, ೧೦, ೧೧, ೧೨ ಈ ಎಂಟು ಪಿಎಚ್.ಡಿ. ಸೆಮಿಸ್ಟರ್‌ಗಳು. ಎಂ.ಎ. ಹಂತದಲ್ಲಿ ಪ್ರಧಾನ ಪತ್ರಿಕೆ, ಐಚ್ಫಿಕ ಪತ್ರಿಕೆಗಳು ಮತ್ತು ಮುಕ್ತ ಆಯ್ಕೆ ಪತ್ರಿಕೆಗಳು ಎಂಬ ಮೂರು ಕ್ರಮದಲ್ಲಿ ಪಠ್ಯಕ್ರಮವಿರುತ್ತದೆ. ಭಾಷಾ ನಿಕಾಯದ ಯಾವುದೇ ಅಧ್ಯಯನ ವಿಭಾಗದಲ್ಲಿ ಆ ವಿಭಾಗ ನಿರ್ದಿಷ್ಟಗೊಳಿಸಿದ ಕ್ಷೇತ್ರದ ಬಗ್ಗೆ ಪಿಎಚ್.ಡಿ. ಅಧ್ಯಯನ ಕೈಗೊಳ್ಳಬಹುದು. ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ವಿಶ್ವವಿದ್ಯಾಲಯಕ್ಕೆ ನಿಗದಿತ ಪ್ರತಿಗಳನ್ನು ಸಲ್ಲಿಸುವುದು ವಿದ್ಯಾರ್ಥಿಗಳ ಹೊಣೆಯಾಗಿರುತ್ತದೆ.

೫.   ೧ ರಿಂದ ೪ರವರೆಗಿನ ಸೆಮಿಸ್ಟರ್‌ಗಳು ಸಿಬಿಸಿಎಸ್ ನಿಯಮಗಳನ್ವಯ ಪಠ್ಯಕ್ರಮ ಇರುತ್ತದೆ. ನಿಗದಿತ ಪಠ್ಯಕ್ರಮದಂತೆ ಪ್ರತಿ ಪತ್ರಿಕೆಯ ಬೋಧನಾವಧಿಯು ೪೮ ಗಂಟೆಗಳನ್ನು ಒಳಗೊಂಡಿರುತ್ತದೆ.

೬.    ಪಿಎಚ್.ಡಿ. ಅಧ್ಯಯನವು ೫ ರಿಂದ ೧೨ ರವರೆಗಿನ ಸೆಮಿಸ್ಟರ್‌ಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ಆಂತರಿಕ ಪಿಎಚ್.ಡಿ. ನಿಯಮಗಳಂತೆ ಅರ್ಧವಾರ್ಷಿಕ ಪ್ರಗತಿ ಪರಿಶೀಲನೆಯ ಕ್ರಮದಂತೆ ಇರುತ್ತದೆ. ಪಿಎಚ್.ಡಿ. ಪ್ರವೇಶದ ನಂತರ (೫ನೇ ಸೆಮಿಸ್ಟರ್) ಕೋರ್ಸ್‌ವರ್ಕ್, ಪ್ರತಿ ಆರುತಿಂಗಳ ಪಿಎಚ್.ಡಿ. ಅಧ್ಯಯನ ಪ್ರಗತಿ ಪರಿಶೀಲನೆ, ಪಿಎಚ್.ಡಿ. ಪೂರ್ಣಗೊಳಿಸುವ ಕೊನೆಯ ಹಂತದ (ಕಲೋಕ್ವಿಯಂ) ಪೂರ್ವ ಸಂವಾದ, ಪಿಎಚ್.ಡಿ. ಮಹಾಪ್ರಬಂಧ ಸಲ್ಲಿಕೆ, ಮೌಲ್ಯಮಾಪನ ಪ್ರಕ್ರಿಯೆಗಳು – ಈ ಎಲ್ಲಾ ಹಂತಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಕಾಲಕಾಲಕ್ಕೆ ಜಾರಿಯಲ್ಲಿರುವ ಆಂತರಿಕ ಪಿಎಚ್.ಡಿ. ನಿಯಮಗಳೇ ಅನ್ವಯಗೊಳ್ಳುತ್ತವೆ.

೭.   ಪ್ರವೇಶ ಪರೀಕ್ಷೆಯಿಂದ ಹಿಡಿದು ಸೆಮಿಸ್ಟರ್ ಪರೀಕ್ಷೆಯವರಗೆ ಪ್ರತಿ ಸೆಮಿಸ್ಟರ್‌ನ (೧ ರಿಂದ ೪) ಬೋಧನೆಯ ಅವದಿs ೧೮ ವಾರಗಳು.

೩.    ವಿದ್ಯಾರ್ಹತೆ : ಎಂ.ಎ.ಪಿಎಚ್.ಡಿ. ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಇದು ಲಿಖಿತ (೮೦ ಅಂಕಗಳು) ಹಾಗೂ ಮೌಖಿಕ (೨೦ ಅಂಕಗಳು) ರೂಪದಲ್ಲಿರುತ್ತದೆ. ಪ್ರವೇಶ ಪರೀಕ್ಷೆಯಿಂದ ಬರುವ ಅಂಕಗಳ ಶೇ. ೫೦ ಹಾಗೂ ಪದವಿ ತರಗತಿಗಳಲ್ಲಿ ಪಡೆದ ಅಂಕಗಳು ಶೇ. ೫೦ರ ಸರಾಸರಿಯನ್ನು ಪರಿಗಣಿಸುವುದು.

೧.    ಪದವಿ ತರಗತಿಗಳಲ್ಲಿ ಕನ್ನಡವನ್ನು ಐಚ್ಫಿಕ ವಿಷಯವನ್ನಾಗಿ ಓದಿ ಸರಾಸರಿ ಶೇ.೫೫ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು ಅಥವಾ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದ ಪದವಿ ತರಗತಿಗಳಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಓದಿ ಆ ವಿಷಯದಲ್ಲಿ ಸರಾಸರಿ ಶೇ.೫೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.

೨.    ಪ.ಜಾ/ಪ.ಪಂ ಹಾಗೂ ಪ್ರವರ್ಗ-೧ರ ವಿದ್ಯಾರ್ಥಿಗಳು ಕನ್ನಡವನ್ನು ಐಚ್ಛಿಕ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿ ಶೇ.೪೫% ಸರಾಸರಿ ಅಂಕಗಳನ್ನು ಪಡೆದಿರಬೇಕು.

೪.  ಅಧ್ಯಯನ ವಿಧಾನ

೧.   ಪತ್ರಿ ಸೆಮಿಸ್ಟರ್‌ನಲ್ಲಿ ಐದು ಪತ್ರಿಕೆಗಳು (ಪ್ರಧಾನ + ಐಚ್ಛಿಕ + ಮುಕ್ತ ಆಯ್ಕೆ) ಇರುತ್ತವೆ. ಪತ್ರಿಕೆಗೆ ವಾರಕ್ಕೆ ೪ ಗಂಟೆಯಂತೆ ಒಟ್ಟಾರೆ ಪ್ರತಿ ಪತ್ರಿಕೆಗೆ ೪೮ ಗಂಟೆ ಬೋಧನೆ ಇರುತ್ತದೆ.

೨.  ಪ್ರತಿ ಸೆಮಿಸ್ಟರ್‌ನಲ್ಲಿ ಪ್ರಧಾನ, ಐಚ್ಛಿಕ ಮತ್ತು ಮುಕ್ತ ಆಯ್ಕೆ ಪತ್ರಿಕೆಗಳಿರುತ್ತವೆ. ಪ್ರಧಾನ ಪತ್ರಿಕೆ ಕಡ್ಡಾಯವಾಗಿರುತ್ತದೆ.  ಐಚ್ಛಿಕ ಪತ್ರಿಕೆಯನ್ನಾಗಿ ಒಂದು ಪತ್ರಿಕೆಯನ್ನು ಮತ್ತು ಮುಕ್ತ ಆಯ್ಕೆಗೆ ಒಂದು ಪತ್ರಿಕೆಯನ್ನು            ಆಯ್ದುಕೊಳ್ಳಬೇಕು.

೩.    ಪ್ರಧಾನ ಪತ್ರಿಕೆ, ಐಚ್ಛಿಕ ಪತ್ರಿಕೆ ಮತ್ತು ಮುಕ್ತ ಆಯ್ಕೆ ಪತ್ರಿಕೆಯೂ ಸೇರಿ ಒಟ್ಟು ೫ ಪತ್ರಿಕೆಗಳ ಬೋಧನಾವಧಿಯು ವಾರಕ್ಕೆ ೨೦ ಗಂಟೆಗಳು.

೪.    ಆಂತರಿಕ ಪರೀಕ್ಷೆಯ ಸೆಮಿನಾರ್‌ಗಳನ್ನು ಹಮ್ಮಿಕೊಳ್ಳಲು ವಾರಕ್ಕೆ ಆರು ಗಂಟೆಗಳ ಅವಧಿ ಇರುತ್ತದೆ.

೫.   ೪ನೇ ಸೆಮಿಸ್ಟರ್‌ನ ೫ನೇ ಪತ್ರಿಕೆಯ ಅಧ್ಯಯನದ ಪ್ರಬಂಧ ರಚನೆ ಪತ್ರಿಕೆಯಾಗಿರುತ್ತದೆ. ಸಂಪ್ರಬಂಧದ ವಿಷಯಗಳನ್ನು ಅಧ್ಯಯನಾಂಗದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಅವುಗಳಲ್ಲಿ ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ನಂತರ ಭಾಷಾ ನಿಕಾಯ ಅಧ್ಯಾಪಕ ಸದಸ್ಯರೊಬ್ಬರನ್ನು ಮಾರ್ಗದರ್ಶಕರನ್ನಾಗಿ ಆಂತರಿಕ ಅಧ್ಯಯನ ಮಂಡಳಿ ನಿಯೋಜಿಸುತ್ತದೆ. ಸೂಚಿತ ಮಾರ್ಗದರ್ಶಕರಲ್ಲಿ ಸಂಪ್ರಬಂಧವನ್ನು ವಿದ್ಯಾರ್ಥಿಯು ಸಿದ್ಧಪಡಿಸುವುದು. ಸಂಪ್ರಬಂಧಕ್ಕೆ ೭೦ ಅಂಕಗಳು ಹಾಗೂ ೩೦ ಅಂಕಗಳು ಮೌಖಿಕ ಪರೀಕ್ಷೆಗೆ ಇರುತ್ತದೆ. ಮೂರು ಸಂಪ್ರಬಂಧಗಳನ್ನು ಡಿ.ಟಿ.ಪಿ. ಮಾಡಿಸಿ ಪಿಎಚ್.ಡಿ. ಸಂಪ್ರಬಂಧದ ಮಾದರಿಯಲ್ಲಿ ಕನಿಷ್ಠ ೮೦, ಗರಿಷ್ಠ ೧೦೦ ಪುಟಗಳ ವ್ಯಾಪ್ತಿಯಲ್ಲಿ ಸಿದ್ಧಪಡಿಸಿ ಸಲ್ಲಿಸಬೇಕು.

೬.    ವಿದ್ಯಾರ್ಥಿಗಳು ೫ನೇ ಸೆಮಿಸ್ಟರ್‌ನಲ್ಲಿಯೇ ತಮ್ಮ ಸಂಶೋಧನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ೫ನೇಸೆಮಿಸ್ಟರ್‌ಗೆ ಪ್ರವೇಶ ಪಡೆಯುವಾಗ ಪ್ರವೇಶ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಕಡ್ಡಾಯವಾಗಿ ಭಾಗವಹಿಸಬೇಕು. ವಿದ್ಯಾರ್ಥಿಗಳು ಸಂಶೋಧನ ವಿದಿsವಿಧಾನಗಳ ಬಗ್ಗೆ ಇಲ್ಲಿ ತೀವ್ರ ಆಸಕ್ತಿವಹಿಸಬೇಕು. ವಿಷಯದ ಆಯ್ಕೆ ಆಯಾ ವಿಭಾಗದ ಅಧ್ಯಯನ ಶಿಸ್ತಿಗೆ ಅನುಗುಣವಾಗಿ ಇರುವುದು ಅಗತ್ಯ. ೫, ೬, ೭, ೮, ೯, ೧೦, ೧೧ ಹಾಗೂ ೧೨ನೇ ಸೆಮಿಸ್ಟರ್‌ಗಳಿಗೆ ಸಂಬಂದಿsಸಿದಂತೆ ಆಂತರಿಕ ಪಿಎಚ್.ಡಿ. ನಿಯಮಾವಳಿಗಳೇ ಅನ್ವಯಗೊಳ್ಳುತ್ತವೆ. ೧೦ನೇ ಸೆಮಿಸ್ಟರ್ ಪೂರೈಸಿದ ವಿದ್ಯಾರ್ಥಿಗಳು ಮಹಾಪ್ರಬಂಧ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.

೫. ಪರೀಕ್ಷೆ ವಿಧಾನ

೧.  ಪ್ರತಿ ಸಿದ್ಧಾಂತ ಪತ್ರಿಕೆಯ ಪ್ರಶ್ನೆ ಪತ್ರಿಕೆಯು ’ಅ’, ’ಬ’ ಮತ್ತು ’ಕ’ ವಿಭಾಗ ಎಂದು ಮೂರು ವಿಭಾಗಗಳನ್ನು ಹೊಂದಿರುತ್ತದೆ. ’ಅ’ ವಿಭಾಗದಲ್ಲಿ ಪ್ರಬಂಧ ಮಾದರಿಯಲ್ಲಿ ಉತ್ತರ ಬರೆಯಬೇಕಾದ ೬ ಪ್ರಶ್ನೆಗಳಿರುತ್ತವೆ. ಅದರಲ್ಲಿ ೪ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕು. ಪ್ರತಿಪ್ರಶ್ನೆಗೆ ೧೦ ಅಂಕಗಳಂತೆ ಒಟ್ಟು ೪೦ ಅಂಕಗಳಿಗೆ ಉತ್ತರಿಸಬೇಕು. ’ಬ’ ಭಾಗದಲ್ಲಿ ೪ ಪ್ರಶ್ನೆಗಳಿರುತ್ತವೆ. ಅದರಲ್ಲಿ ೨ ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಗೆ ೭ ಅಂಕಗಳಂತೆ ೧೪ ಅಂಕಗಳಿಗೆ ಉತ್ತರಿಸಬೇಕು. ’ಕ’ ಭಾಗದಲ್ಲಿ ಟಿಪ್ಪಣಿ ರೂಪದ ೬ ಪ್ರಶ್ನೆಗಳಿರುತ್ತವೆ. ಅವುಗಳಲ್ಲಿ ಟಿಪ್ಪಣಿ ರೂಪದ ೪ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಪ್ರತಿ ಟಿಪ್ಪಣಿಗೆ ೪ ಅಂಕಗಳಂತೆ ಒಟ್ಟು ೧೬ ಅಂಕಗಳಿಗೆ ಉತ್ತರಿಸಬೇಕು. ಇಡೀ ಪತ್ರಿಕೆಯ ಪಠ್ಯಕ್ರಮವನ್ನು ಒಳಗೊಂಡಂತೆಯೇ ಪ್ರಶ್ನೆಪತ್ರಿಕೆಯನ್ನು ರೂಪಿಸಬೇಕು.

೨. ಪ್ರತಿ ಸೆಮಿಸ್ಟರ್‌ನಲ್ಲಿಯೂ ಐದು ಪತ್ರಿಕೆಗಳಿರುತ್ತವೆ. ಪ್ರತಿ ಪತ್ರಿಕೆಗೆ ೧೦೦ ಅಂಕಗಳು. ಅಂದರೆ ಕ್ರಮವಾಗಿ ಸಿದ್ಧಾಂತ ಪತ್ರಿಕೆಗೆ ೭೦ ಮತ್ತು ಆಂತರಿಕ ಮೌಲ್ಯಮಾಪನಕ್ಕೆ ೩೦ ಅಂಕಗಳು.

೩. ಯಾವುದೇ ಪತ್ರಿಕೆಯಲ್ಲಿ ಅಂಕಗಳನ್ನು ಮತ್ತೆ ಉತ್ತಮಗೊಳಿಸಿಕೊಳ್ಳಲು ಅವಕಾಶವಿರುತ್ತದೆ. ಆದರೆ ಮರುಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳು ಪಡೆಯುವ ಅಂಕಗಳು ಆ ಮೊದಲು ಪಡೆದಿದ್ದ ಅಂಕಗಳಿಗಿಂತ ಮತ್ತೆ ಕಡಿಮೆ ಬಂದರೆ ಮೊದಲಿದ್ದ ಅಂಕಗಳೇ ಮುಂದುವರಿಯುತ್ತವೆ. ಮರುಪರೀಕ್ಷೆ ತೆಗೆದುಕೊಂಡವರು ಆಯಾ ಸೆಮಿಸ್ಟರ್ ಪರೀಕ್ಷೆಗಳು ಬಂದಾಗಲೇ ಪರೀಕ್ಷೆಗೆ ಹಾಜರಾಗಬೇಕು.

೪.  ವಿದ್ಯಾರ್ಥಿಗಳು ಯಾವುದೇ ಪತ್ರಿಕೆಯಲ್ಲಿ ಶೇ. ೫೦ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಾಗ ಆ ವಿಷಯದಲ್ಲಿ ಅನುತ್ತೀರ್ಣರಾಗುತ್ತಾರೆ.

೫.  ಉತ್ತೀರ್ಣರಾದ ವಿದ್ಯಾರ್ಥಿಗಳ ವರ್ಗೀಕರಣ: ನಾಲ್ಕು ಸೆಮಿಸ್ಟರ್‌ಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಪಡೆದ ಒಟ್ಟು ಅಂಕಗಳನ್ನು ಕ್ರೋಡೀಕರಿಸಿ ಶ್ರೇಣಿ ಮತ್ತು ವರ್ಗವನ್ನು ಘೋಷಿಸಲಾಗುವುದು. (ಈ ಮೌಲ್ಯಾಂಕ ಸಿ.ಬಿ.ಸಿ.ಎಸ್. ಪಠ್ಯಕ್ರಮಗಳಿಗೆ ಅನ್ವಯಿಸುತ್ತದೆ)

ಶಿಕ್ಷಣ ಕ್ರಮಗಳ ಶ್ರೇಣಿ       ಮೌಲ್ಯಾಂಕ        ಲಿಖಿತ            ಆಂತರಿಕ            ಒಟ್ಟು

ಪತ್ರಿಕೆ ೧                ೦೪            ೭೦            ೩೦            ೧೦೦

ಪತ್ರಿಕೆ ೨                ೦೪            ೭೦            ೩೦            ೧೦೦

ಪತ್ರಿಕೆ ೩                ೦೪            ೭೦            ೩೦            ೧೦೦

ಪತ್ರಿಕೆ ೪                ೦೪            ೭೦            ೩೦            ೧೦೦

ಪತ್ರಿಕೆ ೫                ೦೪            ೭೦            ೩೦            ೧೦೦

ಪತ್ರಿಕೆ ೬                ೦೪            ೭೦            ೩೦            ೧೦೦

೬.  ಅಂತಿಮವಾಗಿ ಶೇ. ೫೦ರಿಂದ ಶೇ. ೫೯ ಅಂಕಗಳು ಬಂದರೆ ದ್ವಿತೀಯ ದರ್ಜೆ, ಶೇ. ೬೦ ರಿಂದ ಶೇ. ೭೪ ಬಂದರೆ ಪ್ರಥಮ ದರ್ಜೆ, ಶೇ.೭೫ರ ಮೇಲೆ ಬಂದರೆ ಶ್ರೇಣಿ ಎಂದು, ಶೇ.೫೦ಕ್ಕಿಂತ ಕಡಿಮೆ ಬಂದರೆ ಅನುತ್ತೀರ್ಣ ಎಂದು ಘೋಷಿಸಬೇಕು.

೬. ಪರೀಕ್ಷಾ ಮಂಡಳಿ (Board of Examination)

೧. ಪರೀಕ್ಷಾ ಮಂಡಳಿಯನ್ನು ಕೋರ್ಸಿನ ಅಧ್ಯಯನ ಮಂಡಳಿ ರಚಿಸಿ, ಆ ನಂತರ ಕುಲಪತಿಗಳಿಂದ ಅನುಮೋದಿತಗೊಂಡು ಕಾರ್ಯರೂಪಕ್ಕೆ ಬರಬೇಕು. ೧ರಿಂದ ೪ನೇ ಸೆಮಿಸ್ಟರ್‌ಗಳ ಪರೀಕ್ಷಾ ಚಟುವಟಿಕೆಯನ್ನು ನಿರ್ವಹಿಸಬೇಕು. ಪ್ರಶ್ನೆಪತ್ರಿಕೆಗಳ ರಚನೆ, ಪರಿಶೀಲನೆ ಮತ್ತು ಮೌಲ್ಯಮಾಪನದ ಪ್ರಕ್ರಿಯೆಗಳನ್ನು ಪರೀಕ್ಷಾ ಮಂಡಳಿ ನಿರ್ವಹಿಸುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿ ಒಪ್ಪಿಗೆ ಕೊಡುತ್ತದೆ.

೨.  ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಮತ್ತು ಮೌಲ್ಯಮಾಪನ ಮಾಡಲು ಪ್ರತಿಸೆಮಿಸ್ಟರ್‌ನಲ್ಲಿಯೂ ಸುಮಾರು ಶೇ.೫೦ರಷ್ಟು ಬಾಹ್ಯ ಮೌಲ್ಯಮಾಪಕರನ್ನು ನೇಮಿಸಲಾಗುತ್ತದೆ.

೩. ಉತ್ತರ ಪತ್ರಿಕೆಗಳನ್ನು ಒಳಗಿನ ಮತ್ತು ಹೊರಗಿನ ಇಬ್ಬರು ಮೌಲ್ಯಮಾಪಕರು ಮೌಲ್ಯಮಾಪನ ಮಾಡುತ್ತಾರೆ.

೪.  ಯಾವುದೇ ಸಿದ್ಧಾಂತ ಪತ್ರಿಕೆಯಲ್ಲಿ ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನದ ಕ್ರಮ ವ್ಯತ್ಯಾಸವಾಗಿ ೧೪ ಅಥವಾ ೧೪ ಅಂಕಗಳಿಗಿಂತ ಹೆಚ್ಚು ಬಂದಿದ್ದರೆ ಮೂರನೇ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಲಾಗುತ್ತದೆ. ಈ ಮೌಲ್ಯಮಾಪನವೇ ಅಂತಿಮವಾಗಿರುತ್ತದೆ.

೫.  ವಿದ್ಯಾರ್ಥಿಗಳು ಯಾವುದೇ ಪತ್ರಿಕೆಯಲ್ಲಿ ಮರುಪರೀಕ್ಷೆಗೆ (ಮೇಲಿನ ೬.೪ರನ್ವಯ) ಹಾಜರಾಗಲು ಬಯಸಿದರೆ ಅವರು ಫಲಿತಾಂಶ ಬಂದ ೩೦ ದಿನಗಳೊಳಗೆ ವಿಶ್ವವಿದ್ಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ. ವಿದ್ಯಾರ್ಥಿಗಳು ಹೀಗೆ ಮರುಪರೀಕ್ಷೆ ಬಯಸಿದಾಗ ತಮ್ಮ ಮೂಲ ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಬೇಕು.

೬.  ಕೃಪಾಂಕ ನೀಡುವಿಕೆ ವಿದ್ಯಾರ್ಥಿಯು ಯಾವುದೇ ಒಂದು ಪತ್ರಿಕೆಯಲ್ಲಿ ಅನುತ್ತೀರ್ಣನಾಗಿದ್ದರೆ, ಗರಿಷ್ಠ ೧೦೦ ಅಂಕಗಳಿಗೆ ೦೫ ಅಂಕಗಳಂತೆ, ೭೦ ಅಂಕಗಳಿಗೆ ೪ ಅಂಕಗಳನ್ನು ಕೃಪಾಂಕವಾಗಿ ನೀಡಬಹುದು. ಕೃಪಾಂಕ ಸೌಲಭ್ಯವು ಮೊದಲ ಸಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಮರುಪರೀಕ್ಷೆ ಸಂಬಂಧಿಸಿದ ಸಂದರ್ಭದಲ್ಲಿ ಕೃಪಾಂಕಗಳ ಸೌಲಭ್ಯ ನೀಡಲು ಬರುವುದಿಲ್ಲ.

೭. ಆಂತರಿಕ ಮೌಲ್ಯಮಾಪನ (Internal Assessment)

೧.   ಸೆಮಿಸ್ಟರ್ ಕೊನೆಯಲ್ಲಿ ನಡೆಸುವ ಪರೀಕ್ಷೆಗಳಷ್ಟೇ ಮಹತ್ವ, ಬೋಧನೆಯ ಅವದಿsಯಲ್ಲಿ ಅಧ್ಯಾಪಕರು ನಡೆಸುವ ಆಂತರಿಕ ಮೌಲ್ಯಮಾಪನಕ್ಕೂ ಇರುತ್ತದೆ. ಈ ಇನ್ ಕೋರ್ಸ್ ಮೌಲ್ಯಮಾಪನಕ್ಕೆ ಪ್ರತಿ ಪತ್ರಿಕೆಗೂ ೩೦ ಅಂಕಗಳು  ಇರುತ್ತವೆ.

೨. ವಿದ್ಯಾರ್ಥಿಯು ಪ್ರತಿ ಪತ್ರಿಕೆಯಲ್ಲಿಯೂ ಆಂತರಿಕ ಮೌಲ್ಯಮಾಪನಕ್ಕಾಗಿ ಕಿರುಪರೀಕ್ಷೆ ಬರೆಯಬೇಕು. ಇದಕ್ಕೆ ೧೫ ಅಂಕಗಳು. ತರಗತಿಯಲ್ಲಿ ವಿಚಾರ ಸಂಕಿರಣ, ಚರ್ಚೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಇದಕ್ಕೆ ೧೫ ಅಂಕಗಳು. ಪ್ರತಿ ಪತ್ರಿಕೆಗೂ ವಿದ್ಯಾರ್ಥಿಯು ಕಿರುಪರೀಕ್ಷೆ ಮತ್ತು ಸೆಮಿನಾರ್‌ಗಳನ್ನು ಆಂತರಿಕ ಮೌಲ್ಯಮಾಪನಕ್ಕಾಗಿ ಒಪ್ಪಿಸಬೇಕು. ಎರಡೂ ಚಟುವಟಿಕೆಗಳನ್ನು ತಲಾ ೧೫ ಅಂಕಗಳಂತೆ ಮೌಲ್ಯಮಾಪನ ಮಾಡಲಾಗುವುದು. ಇವೆರಡರಿಂದ ಒಟ್ಟು ೩೦ ಅಂಕಗಳಿಗೆ ಸರಾಸರಿ ಶೇ.೫೦ರಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕು.

೩. ಪ್ರತಿ ಉತ್ತರ ಪತ್ರಿಕೆಗಳಲ್ಲಿಯೂ ವಿದ್ಯಾರ್ಥಿಯು ೭೦ ಅಂಕಗಳಿಗೆ ಕನಿಷ್ಠ ಶೇ.೫೦ರಷ್ಟು ಅಂಕಗಳನ್ನು ಪಡೆಯಬೇಕು. ಉತ್ತರ ಪತ್ರಿಕೆ ಮತ್ತು ಅದಕ್ಕೆ ಸಂಬಂದಿsಸಿದ ಆಂತರಿಕ ಮೌಲ್ಯಮಾಪನದ ಪತ್ರಿಕೆ ಎರಡನ್ನೂ ಕೂಡಿಸಿದಾಗ ಆ ಪತ್ರಿಕೆಯಲ್ಲಿ ಸರಾಸರಿ ಶೇ.೫೦ ಅಂಕಗಳು ಬರಲೇಬೇಕು.

೪.  ವಿದ್ಯಾರ್ಥಿಯು ತನ್ನ ಆಂತರಿಕ ಅಂಕಗಳ ಚಟುವಟಿಕೆಗಳನ್ನು ಸಿದ್ಧಾಂತ ಪರೀಕ್ಷೆಯ ಒಂದು ವಾರದ ಮುಂಚೆ ಸಲ್ಲಿಸಬೇಕು.

೮. ಹಾಜರಾತಿ

೧. ಪ್ರತಿ ಸೆಮಿಸ್ಟರ್‌ನಲ್ಲಿಯೂ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ.

೨. ಪ್ರತಿ ಸೆಮಿಸ್ಚರ್‌ನಲ್ಲಿಯೂ ಶೇ.೭೫ಕ್ಕಿಂತಲೂ ಕಡಿಮೆ ಹಾಜರಾತಿ ಹೊಂದಿದ್ದಲ್ಲಿ, ಶೇ.೫% ಕೊರತೆ ಹಾಜರಾತಿ ಹೊಂದಿದ್ದರೆ ಕೋರ್ಸಿನ ಸಂಚಾಲಕರ ಶಿಫಾರಸ್ಸಿನ ಮೇರೆಗೆ ವಿಶ್ವವಿದ್ಯಾಲಯದ ಅನುಮತಿ ಪಡೆದು ಕೊರತೆ ಹಾಜರಾತಿ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕು.

೩. ಆವಶ್ಯಕವಾದ ಮತ್ತು ತೃಪ್ತಿಕರವಾದ ಹಾಜರಾತಿ ಇಲ್ಲದಿದ್ದರೆ ವಿದ್ಯಾರ್ಥಿಯು ಸಂಬಂದಿsಸಿದ ಸೆಮಿಸ್ಟರ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುವುದಿಲ್ಲ. ವಿದ್ಯಾರ್ಥಿಯು ಅವಶ್ಯಕವಾದ ಹಾಜರಾತಿಯನ್ನು ಸಂಬಂಧಿಸಿದ ಸೆಮಿಸ್ಟರ್‌ನಲ್ಲಿ ಹೊಂದಿಲ್ಲದಿದ್ದರೆ ಅವರು ಮತ್ತೆ ಹೊಸದಾಗಿ ಆ ಸೆಮಿಸ್ಟರ್ ಕೋರ್ಸ್‌ಗೆ ಮರುಪ್ರವೇಶ ಪಡೆಯಬೇಕು. ಆಗಲೂ ಗೈರು ಹಾಜರಾತಿಗೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ.

೩.  ವಿಶೇಷ ರಜೆ ಅಗತ್ಯಗಳಿಗೆ ಅನುಗುಣವಾಗಿ ಮೇಲಿನ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯ. ನಂತರದಲ್ಲಿ ಹಾಗೂ ಪೂರಕವಾಗಿ ಅಧಿಕೃತ ದಾಖಲೆಗಳನ್ನು ಒದಗಿಸಬೇಕು.

೯. ಶಿಕ್ಷಣ ಶುಲ್ಕ

೧. ಅರ್ಜಿ ಮತ್ತು ನಿಯಮಾವಳಿಗಾಗಿ ವಿಶ್ವವಿದ್ಯಾಲಯ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು.

೨. ನೋಂದಣಿ ಶುಲ್ಕ, ಅಧ್ಯಯನ  ಶುಲ್ಕ, ಪರೀP ಶುಲ್ಕಗಳನ್ನು ವಿಶ್ವವಿದ್ಯಾಲಯವು ನಿಯಮಾನುಸಾರ ಕಾಲಕಾಲಕ್ಕೆ ನಿಗದಿ ಮಾಡಿರುವುದು ಅನ್ವಯವಾಗುತ್ತದೆ.

೧೦. ಅಧ್ಯಯನ ಮಂಡಳಿ

ಮೂರು ವರ್ಷಗಳ ಕಾಲಮಿತಿಗೆ ಮಾನ್ಯ ಕುಲಪತಿಗಳಿಂದ ಅನುಮೋದಿತಗೊಂಡ ಅಧ್ಯಯನ ಮಂಡಳಿ ಇರುತ್ತದೆ. ಈ ಮಂಡಳಿಯಲ್ಲಿ ಕೆಳಕಂಡ ಸದಸ್ಯರು ಇರುತ್ತಾರೆ.

೧. ಡೀನ್, ಭಾಷಾ ನಿಕಾಯ                                               ಅಧ್ಯಕ್ಷರು

೨. ನಿರ್ದೇಶಕರು, ಅಧ್ಯಯನಾಂಗ                                        ಸದಸ್ಯರು

೩. ಭಾಷಾ ನಿಕಾಯದ ಎಲ್ಲ ವಿಭಾಗಗಳ ಮುಖ್ಯಸ್ಥರು                  ಸದಸ್ಯರು

೪. ಬಾಹ್ಯ ವಿಷಯ ತಜ್ಞರು (ಇಬ್ಬರು)                                     ಸದಸ್ಯರು

5. ಎಂ.ಎ.ಪಿಎಚ್.ಡಿ ಕೋರ್ಸ್ ಸಂಚಾಲಕರು                           ಸದಸ್ಯ ಸಂಚಾಲಕರು

ಸಮಿತಿಯ ಕೆಲಸ ಕಾರ್ಯಗಳು

೧. ಪ್ರವೇಶ ಪರೀಕ್ಷೆಯನ್ನು ಒಳಗೊಂಡಂತೆ ಪರೀಕ್ಷಾ ಚಟುವಟಿಕೆಯ ಎಲ್ಲಾ ಪ್ರಕ್ರಿಯೆಯಗಳನ್ನು ನಡೆಸುವುದು.

೨. ಬೋಧನಾ ಪ್ರಕ್ರಿಯೆಗಳನ್ನು ನಡೆಸಲು ಮಾರ್ಗದರ್ಶನ ಮಾಡುವುದು.

೩. ಕೋರ್ಸ್‌ನ ಸಂಚಾಲಕರು ಅಧ್ಯಯನ ಮಂಡಳಿಯ ಸಂಚಾಲಕರಾಗಿರುತ್ತಾರೆ. ನಿಕಾಯದ ಡೀನ್‌ರು

ಅಧ್ಯಕ್ಷರಾಗಿರುತ್ತಾರೆ. ಡೀನ್ ಇಲ್ಲದ ಪಕ್ಷದಲ್ಲಿ ಹಿರಿಯ ಪ್ರಾಧ್ಯಾಪಕರು ಅಧ್ಯಕ್ಷರಾಗಿರುತ್ತಾರೆ.

ಪಿಎಚ್.ಡಿ. ಅಧ್ಯಯನ :

೧.    ಎಂ.ಎ.ಹಂತವನ್ನು ಪೂರ್ಣಗೊಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಮೂಲಕ ೫ನೇ ಸೆಮಿಸ್ಟರ್‌ಗೆ ಪಿಎಚ್.ಡಿ. ಅಧ್ಯಯನಕ್ಕಾಗಿ ಪ್ರವೇಶ ಪಡೆಯುತ್ತಾರೆ.

೨.    ೫ನೇ ಸೆಮಿಸ್ಟರ್: ಮಾರ್ಗದರ್ಶಕರೊಡನೆ ಸಮಾಲೋಚನೆ, ವಿಷಯದ ಆಯ್ಕೆ, ಕೋರ್ಸ್‌ವರ್ಕ್ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.

೩.    ೬ನೇ ಸೆಮಿಸ್ಟರ್: ಪ್ರೌಢ ಪ್ರಬಂಧ ರಚನೆಯ ಮೊದಲ ಹಂತ. ಇದುವರೆಗಿನ ಅಧ್ಯಯನಗಳ ಸಮೀಕ್ಷೆ, ಅಧ್ಯಯನಗಳ ವರ್ಗೀಕರಣ, ಮಾಹಿತಿ ಸಂಗ್ರಹಣೆ.

೪.    ೭ನೇ ಸೆಮಿಸ್ಟರ್: ಪ್ರೌಢ ಪ್ರಬಂಧ ರಚನೆಯ ಎರಡನೆಯ ಹಂತ. ಮಾಹಿತಿ ಸಂಗ್ರಹಣೆ, ಬರವಣಿಗೆ ಮುಂದುವರಿಕೆ.

೫.    ೮ನೇ ಸೆಮಿಸ್ಟರ್ : ಮೂರನೆಯ ಹಂತ – ಬರವಣಿಗೆ ಮುಂದುವರಿಕೆ.

೬.    ೯ನೇ ಸೆಮಿಸ್ಟರ್: ಮೂರನೆಯ ಹಂತ – ಬರವಣಿಗೆ ಮುಂದುವರಿಕೆ. ಒಂದು ವೇಳೆ ವಿದ್ಯಾರ್ಥಿಯು ಅಧ್ಯಯನ ಪೂರ್ಣಗೊಳಿಸಲು ಬಯಸಿದ್ದಲ್ಲಿ ಕಲೋಕ್ವಿಯಂಗೆ ಮಹಾಪ್ರಬಂಧದ ಕರಡುಪ್ರತಿ ಸಲ್ಲಿಸಬಹುದು.

೭.    ೧೦ನೇ ಸೆಮಿಸ್ಟರ್: ಎರಡನೆಯ ಹಂತದ ಪ್ರೌಢ ಪ್ರಬಂಧ ಅಂತಿಮ ಸಿದ್ಧತೆ.

೮.    ಪ್ರತಿ ಹಂತದಲ್ಲಿ ಮಾರ್ಗದರ್ಶಕರ ಮೇಲ್ವಿಚಾರಣೆಯಲ್ಲಿ ಕೆಲಸ ನಿರ್ವಹಿಸುವುದು. ಕಾಲಕಾಲಕ್ಕೆ ಮಾರ್ಗದರ್ಶಕರಿಂದ ಈ ಬಗೆಗೆ ನಿರ್ದಿಷ್ಟ ಸೂಚನೆಗಳನ್ನು ಪಡೆಯುವುದು. ಸೆಮಿಸ್ಟರ್‌ನ ಕೊನೆಗೆ ಬರವಣಿಗೆಯನ್ನು ಮಾರ್ಗದರ್ಶಕರಿಗೆ ಸಲ್ಲಿಸುವುದಲ್ಲದೆ ವಿಭಾಗದ ಪಿಎಚ್.ಡಿ. ಸಮಿತಿ ಮುಂದೆ ಮಂಡಿಸುವುದು ಕಡ್ಡಾಯ.

೯.    ೧೧ನೇ ಸೆಮಿಸ್ಟರ್: ಕಲೋಕ್ವಿಯಂ ಕರಡುಪ್ರತಿ ಸಲ್ಲಿಕೆ

೧೦.   ೧೨ನೇ ಸೆಮಿಸ್ಟರ್: ಪ್ರೌಢಪ್ರಬಂಧ ಸಲ್ಲಿಕೆ

ಎಂ.ಎ.,ಪಿಎಚ್.ಡಿ. ಸಂಯೋಜಿತ ಪದವಿ ಕನ್ನಡ ಸಾಹಿತ್ಯ ೫, , , , ೯  ಮತ್ತು ೧೦ನೇ ಸೆಮಿಸ್ಟರ್‌ಗಳ ನಿಯಮಾವಳಿ

೧. ಐದನೆಯ ಸೆಮಿಸ್ಟರ್‌ಗೆ ಪ್ರವೇಶ:

೧.  ಪ್ರವೇಶ ಪರೀಕ್ಷೆಯ ಪ್ರಕ್ರಿಯೆಯ ಮೂಲಕ ಐದನೆಯ ಸೆಮಿಸ್ಟರ್‌ಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು.  ಇಲ್ಲಿ ನಾಲ್ಕು ಸೆಮಿಸ್ಟರ್‌ಗಳನ್ನು ಪೂರ್ಣವಾಗಿ ಮುಗಿಸಿದ ವಿದ್ಯಾರ್ಥಿಗಳಿಗೆ ಒಮ್ಮೆ ಪ್ರವೇಶ ಪ್ರಕ್ರಿಯೆಗೆ       ಅವಕಾಶವಿರುತ್ತದೆ.

೨.  ನಾಲ್ಕು ಸೆಮಿಸ್ಟರ್‌ಗಳ ಒಟ್ಟು ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಒಟ್ಟಾರೆ ಎಲ್ಲ ವಿಷಯಗಳಿಂದ    ಶೇ.೫೫ ಅಂಕಗಳನ್ನು ಪ್ರವೇಶ ಪ್ರಕ್ರಿಯೆಗೆ ಹಾಜರಾಗಲು ವಿದ್ಯಾರ್ಥಿ ಅವಶ್ಯವಾಗಿ ಪಡೆದುಕೊಂಡಿರಬೇಕು.   ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ.೫೦ ಅಂಕಗಳು ಅಗತ್ಯವಾಗಿರುತ್ತವೆ.

೩.  ಪ್ರವೇಶ ಪರೀಕ್ಷೆಯಲ್ಲಿ ೪೦ ಅಂಕಗಳು ಸಾಮಾನ್ಯ ವಿಷಯಗಳ ಪ್ರಶ್ನೆಗಳಿಗೂ ಮತ್ತು ೪೦ ಅಂಕಗಳು ಐಚ್ಛಿಕ ವಿಷಯದ ಪ್ರಶ್ನೆಗಳಿಗೂ ಮೀಸಲಾಗಿರಬೇಕು. ಉಳಿದ ೨೦ ಅಂಕಗಳು ಮೌಖಿಕ ಪರೀಕ್ಷೆಗೆ ಮೀಸಲಾಗಿರುತ್ತವೆ.

೪.  ಪ್ರತಿಯೊಬ್ಬ ವಿದ್ಯಾರ್ಥಿಯು ತಾನು ಮೂರು ಮತ್ತು ನಾಲ್ಕನೆಯ ಸೆಮಿಸ್ಟರ್‌ನಲ್ಲಿ ಆರಿಸಿಕೊಂಡು ಅಧ್ಯಯನ  ಮಾಡಿರುವ ಮೂರು ಐಚ್ಛಿಕ ವಿಷಯಗಳಲ್ಲಿಯೇ ಯಾವುದಾದರೂ ಒಂದು ವಿಷಯವನ್ನು ಸಂಶೋಧನ    ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬೇಕು.

೫.  ಈಗಿನ ನಿಯಮಾನುಸಾರ ವಿಷಯಗಳು ಆರು. ಅವು ಹೀಗಿವೆ;

೧. ಭಾಷಾಧ್ಯಯನ                  –        ೧ ಮತ್ತು ೨

೨. ಭಾಷಾಂತರ ಅಧ್ಯಯನ         –        ೧ ಮತ್ತು ೨

೩. ದ್ರಾವಿಡ ಅಧ್ಯಯನ              –        ೧ ಮತ್ತು ೨

೪. ಮಹಿಳಾ ಅಧ್ಯಯನ              –        ೧ ಮತ್ತು ೨

೫. ಆಕರಶಾಸ್ತ್ರ                      –        ೧ ಮತ್ತು ೨

೬. ಸಾಹಿತ್ಯಾಧ್ಯಯನ               –        ೧ ಮತ್ತು ೨

ವಿದ್ಯಾರ್ಥಿಯು ತಾನು ಅಧ್ಯಯನ ಮಾಡಿರುವ ಯಾವುದಾದರೂ ಎರಡು ಐಚ್ಛಿಕ ವಿಷಯಗಳಲ್ಲಿ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.

೨. ಪ್ರವೇಶ ಪರೀಕ್ಷೆಯ ಅನಂತರದಲ್ಲಿ ವಿದ್ಯಾರ್ಥಿ ಅನುಸರಿಸಬೇಕಾದ ನಿಯಮಗಳು:

೧.   ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ನಿರ್ದಿಷ್ಟ ಸಂಶೋಧನ ಕ್ಷೇತ್ರವನ್ನು ಆರಿಸಿಕೊಂಡು ಸಂಬಂಧಿಸಿದ ವಿಭಾಗದಲ್ಲಿ ತಾತ್ಕಾಲಿಕ ನೋಂದಣಿ ಮಾಡಿಸಿಕೊಳ್ಳಬೇಕು. ಭಾಷಾ ನಿಕಾಯದ ಆಯ್ಕೆ ಮಾಡಿಕೊಂಡ ವಿಭಾಗದ ಮಾರ್ಗದರ್ಶಕರ ಅಡಿಯಲ್ಲಿ ಸಂಶೋಧನ ಅಧ್ಯಯನ ಮಾಡಲು ವಿದ್ಯಾರ್ಥಿಗೆ ಅವಕಾಶವಿರುತ್ತದೆ.

೨.   ೫ನೆಯ ಸೆಮಿಸ್ಟರ್‌ಗೆ ಪ್ರವೇಶ ಪಡೆದ ಮೇಲೆ ವಿದ್ಯಾರ್ಥಿಗಳು ಈ ಕೆಳಕಂಡ ವಿಷಯಗಳಲ್ಲಿ ಅಧ್ಯಯನವನ್ನು ಕೈಗೊಳ್ಳಬೇಕು.

ಅ. ಸಂಶೋಧನ ವಿಧಿ-ವಿಧಾನಗಳು (ಇದು ಬೋಧನೆಯ ವಿಷಯವಾಗಿರುತ್ತದೆ).

ಆ. ಸಂಶೋಧನ ಕೃತಿಗಳ ಅಧ್ಯಯನ

ಇ. ಆಯಾ ಕ್ಷೇತ್ರದಲ್ಲಿ ಉತ್ತಮವೂ ಪ್ರೌಢವೂ ಶಾಸ್ತ್ರೀಯವೂ ಆದ ಕನಿಷ್ಠ ೧೦ ಪ್ರಧಾನ ಪಠ್ಯಗಳ ಅಧ್ಯಯನ ಮಾಲೆ ಅನಂತರ ಒಂದು ಪಠ್ಯವನ್ನು ಕುರಿತು ಪ್ರಬಂಧ ರಚನೆ ಮಾಡಬೇಕು.

ಈ. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಗಿರುವ ಅತ್ಯುತ್ತಮವಾದ ಸಂಶೋಧನ ಮಹಾಪ್ರಬಂಧಗಳಲ್ಲಿ ಕನಿಷ್ಠ ಎರಡನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು. ಅವುಗಳ ವಿಶಿಷ್ಟತೆಯನ್ನು ಗುರುತಿಸಿ ಎರಡು ಪ್ರಬಂಧಗಳನ್ನು ಬರೆದು ಮಾರ್ಗದರ್ಶಕರಿಗೆ ಒಪ್ಪಿಸಬೇಕು. ಈ ಪ್ರಬಂಧವು ಅಧ್ಯಯನ ಕ್ರಮ, ವಿಮರ್ಶೆ ಮತ್ತು ವರದಿಗಳನ್ನು ಗಮನಿಸಬೇಕು.

ಉ. ಆಯಾ ಕ್ಷೇತ್ರದಲ್ಲಿ ಆಗಬೇಕಾದ ಸಂಶೋಧನೆಗಳನ್ನು ಗುರುತಿಸಿ ವಿದ್ಯಾರ್ಥಿಗಳು ಸ್ವತಂತ್ರವಾಗಿ ಒಂದು ಅಥವಾ ಎರಡು ಪ್ರಬಂಧಗಳನ್ನು ಬರೆಯಬೇಕು.

೩. ಮುಖ್ಯ ನಿಯಮಗಳು:

೧. ಸಂಶೋಧನ ವಿಧಾನ ಕುರಿತಂತೆ ನಡೆಯುವ ತರಗತಿಗಳಲ್ಲಿ ಆ ಕುರಿತು ಬೋಧಿಸುವ ಅಧ್ಯಾಪಕರು ಮತ್ತು  ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಇದ್ದು ವಿಷಯ ಮಂಡನೆ ಮತ್ತು ಚರ್ಚೆಯನ್ನು ನಡೆಸಿಕೊಡಬೇಕು.

೨.  ಐದನೆಯ ಸೆಮಿಸ್ಟರ್‌ನ ಕೊನೆಯ ಹೊತ್ತಿಗೆಲ್ಲ ವಿದ್ಯಾರ್ಥಿಗಳು ತಂತಮ್ಮ ಸಂಶೋಧನ ವಿಷಯ ಮತ್ತು ಮಾರ್ಗದರ್ಶಕರನ್ನು ಅಂತಿಮಗೊಳಿಸಿಕೊಂಡಿರಬೇಕು. ವಿದ್ಯಾರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ     ಸಂಪೂರ್ಣ ಸ್ವಾತಂತ್ರ್ಯ ಮಾರ್ಗದರ್ಶಕರಿಗೆ ಇರುತ್ತದೆ. ಆಯಾ ವಿಭಾಗದ ಸಮಿತಿ ಈ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತದೆ.

೩.   ವಿದ್ಯಾರ್ಥಿಯು ಸಲ್ಲಿಸುವ ವರದಿಯನ್ನು ಇಡೀ ವಿಭಾಗವೇ ಮೌಲ್ಯಮಾಪನ ಮಾಡಬೇಕು.

೪.  ಪ್ರತಿಯೊಬ್ಬ ಸಂಶೋಧನ ವಿದ್ಯಾರ್ಥಿಯು ಪ್ರತಿ ತಿಂಗಳೂ ತನ್ನ ಅಧ್ಯಯನ ವರದಿಯನ್ನು ತಪ್ಪದೇ ವಿಭಾಗಕ್ಕೆ ಸಲ್ಲಿಸಬೇಕು.

೫.  ಅರ್ಧವಾರ್ಷಿಕ ವರದಿಗಳನ್ನು ಆಯಾ ವಿಭಾಗಗಳು ಅಧ್ಯಯನಾಂಗಕ್ಕೆ ಸಲ್ಲಿಸುವ ಮೊದಲು ಆಯಾ ವಿಭಾಗ ಸಮಿತಿಯ ಮುಂದೆ ಚರ್ಚಿಸಬೇಕು.

೬.   ವಿಭಾಗದ ವರದಿಯನ್ನು ಆಧರಿಸಿಯೇ ಆಯಾ ವಿದ್ಯಾರ್ಥಿಗೆ ೬ನೆಯ ಸೆಮಿಸ್ಟರ್‌ಗೆ ಪ್ರವೇಶಾವಕಾಶ ನೀಡಬೇಕು.

೪. ಆರನೆಯ ಸೆಮಿಸ್ಟರ್ ಅವಧಿಯಲ್ಲಿ ವಿದ್ಯಾರ್ಥಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು:

೧.  ವಿದ್ಯಾರ್ಥಿಯು ಆರನೆಯ ಸೆಮಿಸ್ಟರ್‌ಗೆ ಪ್ರವೇಶ ಪಡೆದ ನಂತರ ತನ್ನ ಸಂಶೋಧನ ವಿಷಯಕ್ಕೆ ಸಂಬಂಧಿಸಿದ ಸಾರಲೇಖವನ್ನು ಮಾರ್ಗದರ್ಶಕರಿಗೆ ಸಲ್ಲಿಸಬೇಕು. ಮಾರ್ಗದರ್ಶಕರು ಆ ಸಾರಲೇಖವನ್ನು ವಿಭಾಗದ ಸದಸ್ಯರ ಸಭೆಯಲ್ಲಿ ಇಡಬೇಕು. ಆ ಸಭೆಗೆ ವಿದ್ಯಾರ್ಥಿಯನ್ನು ಆಹ್ವಾನಿಸಿ ಚರ್ಚಿಸಿ ಅಂತಿಮಗೊಳಿಸಬೇಕು. ಅಂತಿಮಗೊಂಡ   ಸಾರಲೇಖವನ್ನು ಅಧ್ಯಯನಾಂಗಕ್ಕೆ ಸಲ್ಲಿಸಿ ನೋಂದಣಿಯನ್ನು ಖಾಯಂ ಆಗಿ ಸ್ಥಿರೀಕರಣಗೊಳಿಸಿಕೊಂಡು ಅನಂತರ ಅಧ್ಯಯನ ಕೈಗೊಳ್ಳಬೇಕು. ವಿದ್ಯಾರ್ಥಿಗೆ ಸಂಶೋಧನ ವಿಷಯ ಬದಲಾವಣೆಗೆ ಆರನೆಯ ಸೆಮಿಸ್ಟರ್‌ನ   ಒಳಗಡೆ ಒಮ್ಮೆ ಮಾತ್ರ ಅವಕಾಶವಿರುತ್ತದೆ.

೨.   ಆ ನಂತರದಲ್ಲಿ ವಿದ್ಯಾರ್ಥಿಯು ಸಂಬಂಧಿತ ಸಂಶೋಧನ ಕ್ಷೇತ್ರದ ಗ್ರಂಥಸೂಚಿಯೊಂದನ್ನು ಸಿದ್ಧಪಡಿಸಬೇಕು.

೩.   ಈ ಅವಧಿಯಲ್ಲಿ ಅಧ್ಯಯನ ಸಮೀಕ್ಷೆ ಮಾಡುವುದರೊಂದಿಗೆ ಎರಡು ಪತ್ರಿಕೆಗಳನ್ನು ಸಿದ್ಧಪಡಿಸಿ        ಮಂಡಿಸಬೇಕು.

೪.   ಸಂಬಂಧಿತ ವಿಷಯದ ಬಗ್ಗೆ ಬೇರೆ ಬೇರೆ ಕಡೆ ನಡೆಯುವ ಅಧ್ಯಯನ ಗೋಷ್ಠಿಗಳಲ್ಲಿ ಭಾಗವಹಿಸಿ ಆ ಬಗ್ಗೆ   ಕನಿಷ್ಠ ಎರಡು ವರದಿಗಳನ್ನು ಆರನೆಯ ಸೆಮಿಸ್ಟರ್ ಮುಗಿಯುವುದರೊಳಗೆ ಸಲ್ಲಿಸಬೇಕು.

೫.   ಬೇರೆ ಬೇರೆ ಪತ್ರಿಕೆಗಳಲ್ಲಿ ಆಯಾ ಸಂಶೋಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರುವ ಪುಸ್ತಕ ವಿಮರ್ಶೆ, ಚರ್ಚೆಗಳನ್ನು ವಿದ್ಯಾರ್ಥಿಯು ಸಂಗ್ರಹಿಸಬೇಕು.

೬.  ಈ ಅವಧಿಯ ಮೇಲ್ವಿಚಾರಣೆ ಸಂಪೂರ್ಣವಾಗಿ ಮಾರ್ಗದರ್ಶಕರಿಗೆ ಇರುತ್ತದೆ. ಅವರ ಮೂಲಕ ಮುಖ್ಯಸ್ಥರು ಕಾಲಕಾಲಕ್ಕೆ ವಿದ್ಯಾರ್ಥಿಯ ಅಧ್ಯಯನ ಪ್ರಗತಿಯನ್ನು ಪಡೆದು ಅಧ್ಯಯನಾಂಗಕ್ಕೆ ಕಳುಹಿಸಬೇಕು. ಈ ವರದಿಗಳನ್ನು ಅಂತಿಮವಾಗಿ ಕಳುಹಿಸುವಾಗ ನಿಕಾಯದ ಡೀನ್ ಅವರ ಗಮನಕ್ಕೆ ತರಬೇಕು.

೫. ಏಳನೆಯ ಮತ್ತು ಎಂಟನೆಯ ಸೆಮಿಸ್ಟರ್ ಅವಧಿ:

೧. ಏಳನೆಯ ಸೆಮಿಸ್ಟರ್ ಅವಧಿಯಲ್ಲಿ ವಿದ್ಯಾರ್ಥಿಯು ಅಧ್ಯಯನ ಮತ್ತು ಬರವಣಿಗೆಗೆ ಮಾತ್ರ ತನ್ನ ಸಮಯವನ್ನು           ಮೀಸಲಿಡಬೇಕು. ಪಿಎಚ್.ಡಿ. ಅಧ್ಯಯನದ ಕರಡನ್ನು ಸಿದ್ಧಪಡಿಸಬೇಕು.

೨.  ಎಂಟನೆಯ ಸೆಮಿಸ್ಟರ್ ಅವಧಿಯಲ್ಲಿ ವಿದ್ಯಾರ್ಥಿಯು ಸಂಶೋಧನ ಮಹಾಪ್ರಬಂಧದ ಅಧ್ಯಾಯಗಳನ್ನು ಬರೆದು          ಆಯಾ ಅಧ್ಯಾಯಗಳ ಪೂರ್ಣ ಪರಾಮರ್ಶೆ ಮಾಡಬೇಕು. ಅಧ್ಯಾಯಗಳ ಪರಿಶೀಲನೆ ಆಗಬೇಕು.

೬. ಒಂಬತ್ತು ಮತ್ತು ಹತ್ತನೇ ಸೆಮಿಸ್ಟರ್ ಅವಧಿ:

೧. ೮ನೇ ಸೆಮಿಸ್ಟರ್ ಮುಗಿದ ಬಳಿಕ ೯ನೇ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಯು ಮೊದಲ ಕರಡನ್ನು ಪರಿಷ್ಕರಿಸುವುದು ಅಪೇಕ್ಷಣೀಯ. ಅಂದರೆ ಅಧ್ಯಾಯಗಳ ಪುನಃ ಪರಿಷ್ಕಾರ, ತಿದ್ದುಪಡಿಗಳು ಮಾರ್ಗದರ್ಶಕರ ಮೂಲಕ            ನಡೆಯುವಂತಿರಬೇಕು.

೨. ೧೦ನೇ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಯು ಬರವಣಿಗೆಯನ್ನು ಮುಗಿಸಿ ಅಂತಿಮ ಕರಡನ್ನು ವಿಭಾಗದ ಸಮಿತಿಯ ಮುಂದೆ ಮಂಡಿಸಬೇಕು. ನಂತರ ಸಾರಲೇಖವನ್ನು ವಿಭಾಗದ ಮೂಲಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. (ಈ ಅವಧಿಯಲ್ಲಿ ಅವಶ್ಯವಿದ್ದಲ್ಲಿ ವಿದ್ಯಾರ್ಥಿಯು ಮಾರ್ಗದರ್ಶಕರ ಶಿಫಾರಸ್ಸಿನ ಮೂಲಕ ವಿಸ್ತರಣೆಯನ್ನು ನಿಬಂಧನೆಗೊಳಪಟ್ಟು ಕೋರಬಹುದು)

೩. ಯಾವುದೇ ಕಾರಣಕ್ಕೂ ಅಂಶಿಕ ಅವಶ್ಯಕತೆಗಾಗಿ ಸಲ್ಲಿಸುವ ಡೆಸೆರ್ಟೇಶನ್‌ನ್ನು ಪಿಎಚ್.ಡಿ.ಯ ಪದವಿಗೆ ಸಲ್ಲಿಸಕೂಡದು. ಪೂರ್ಣ ಪ್ರಮಾಣದ ಪ್ರಬಂಧವನ್ನೇ ಪಿಎಚ್.ಡಿ. ಪದವಿಗೆ ಸಲ್ಲಿಸಲು ಸ್ಪಷ್ಟ ಸೂಚನೆಗಳಿರಬೇಕು.

೭. ಎಂ.ಎ.ಪಿಎಚ್.ಡಿ. ಶಿಕ್ಷಣದ ಪಿಎಚ್.ಡಿ. ನೋಂದಣಿಯನ್ನು ಬಾಹ್ಯ ಪಿಎಚ್.ಡಿ.ಯಾಗಿ ಪರಿವರ್ತಿಸುವ ಕ್ರಮ:

೧. ಎಂ.ಎ.ಪಿಎಚ್.ಡಿ.ಯ ಅಡಿಯಲ್ಲಿ ಪಿಎಚ್.ಡಿ. ನೋಂದಣಿ ಪಡೆದ ವಿದ್ಯಾರ್ಥಿಗಳು ಬಾಹ್ಯ ಪಿಎಚ್.ಡಿ.ಗೆ ಅನಿವಾರ‍್ಯ ಸಂದರ್ಭದಲ್ಲಿ ಬದಲಾವಣೆ ಬಯಸುವವರು ತಮಗೆ ಸಂಬಂಧಿಸಿದ ವಿಭಾಗದ ಮೂಲಕ ಮಾರ್ಗದರ್ಶಕರ ಅನುಮೋದನೆಯೊಂದಿಗೆ ಅಧ್ಯಯನಾಂಗಕ್ಕೆ ಅರ್ಜಿ ಸಲ್ಲಿಸಬೇಕು.

೨. ಎಂ.ಎ.ಪಿಎಚ್.ಡಿ ಅಡಿಯಲ್ಲಿ ಪಡೆದ ನೋಂದಣಿಯ ದಿನಾಂಕವನ್ನೇ ಬಾಹ್ಯ ಪಿಎಚ್.ಡಿಗೆ ಪರಿವರ್ತಿಸುವಾಗ ನೋಂದಣಿ ದಿನಾಂಕವನ್ನಾಗಿ ಪರಿಗಣಿಸಬೇಕು.

೩. ಎಂ.ಎ.ಪಿಎಚ್.ಡಿಯ ನೋಂದಣಿಯಾದ ಬಾಹ್ಯ ಪಿಎಚ್.ಡಿ ನೋಂದಣಿಯಾಗಿ ಪರಿವರ್ತಿಸಿದ ದಿನಾಂಕದಿಂದ ಪ್ರತಿ ಆರು ತಿಂಗಳಿಗೊಮ್ಮೆ ಪ್ರಗತಿ ವರದಿಯನ್ನು ಮಾರ್ಗದರ್ಶಕರ ಮೂಲಕ ವಿಭಾಗದ ಸಮಿತಿಗೆ ಸಲ್ಲಿಸಬೇಕು.

೪. ಎಂ.ಎ.ಪಿಎಚ್.ಡಿ ವಿದ್ಯಾರ್ಥಿ ಮೂಲದಲ್ಲಿ ಪಡೆದ ನೋಂದಣಿ ದಿನಾಂಕದಿಂದ ನಾಲ್ಕು ವರ್ಷಗಳ ಕಾಲ ಅಧ್ಯಯನ ಅವಧಿ ಇರುತ್ತದೆ. ನೋಂದಣಿ ಪಡೆದ ಮೂರು  ವರ್ಷಗಳ ನಂತರ ಮಹಾಪ್ರಬಂಧ ಸಲ್ಲಿಸಬಹುದು. ಮೂರು ವರ್ಷದ ನಂತರ ಮಾನ್ಯ ಕುಲಪತಿ ಅವರ ಅನುಮೋದನೆಯೊಂದಿಗೆ ಒಂದು ವರ್ಷ ವಿಸ್ತರಣೆ ಪಡೆದುಕೊಳ್ಳಬಹುದು.

೫. ಪರೀಕ್ಷಾ ಮೌಲ್ಯಮಾಪನ ಹಾಗೂ ಉಳಿದ ನಿಯಮಗಳು ಬಾಹ್ಯ ಪಿಎಚ್.ಡಿ.ಯಲ್ಲಿರುವಂತೆ ಇರುತ್ತವೆ.