(Non-Semester)

 

ಕೋರ್ಸನ ವಿಧಾನ

  1. ವಿಭಾಗ : ಸಂಗೀತ ಮತ್ತು ನೃತ್ಯ ವಿಭಾಗ
  2. ವಿಷಯ : ಸಂಗೀತ (ಹಿಂದೂಸ್ತಾನಿ ಗಾಯನ)
  3. ಪದವಿಯ ಹೆಸರು: ಎಂ.ಮ್ಯೂಜಿಕ್ (ಸ್ನಾತಕೋತ್ತರ ಸಂಗೀತ ಪದವಿ) ಅಂದರೆ- Master of Music (Hindustani Vocal)
  4. ನಿಕಾಯ : ಲಲಿತಕಲಾ ನಿಕಾಯ

* ಎಂ.ಮ್ಯೂಜಿಕ್ ವಿಷಯ: ಹಿಂದೂಸ್ತಾನಿ ಗಾಯನ

* ಎಂ.ಮ್ಯೂಜಿಕ್  ಅವಧಿ: ಎರಡು ವರ್ಷಗಳು

* ಎಂ.ಮ್ಯೂಜಿಕ್  ತರಗತಿಗಳು

೧. ಎಂ.ಮ್ಯೂಜಿಕ್ – ಪ್ರಥಮ ವರ್ಷ

೨. ಎಂ.ಮ್ಯೂಜಿಕ್ – ದ್ವಿತೀಯ ವರ್ಷ

 

ಪ್ರವೇಶ ವಿಧಾನ

ಎಂ.ಮ್ಯೂಜಿಕ್ ಪ್ರಥಮ ವರ್ಷದ ಪ್ರವೇಶಾರ್ಹತೆ

  1. ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಮ್ಯೂಜಿಕ್ ಅಥವಾ ಬಿ.ಎ.ಮ್ಯೂಜಿಕ್ ಮೂರು ವರ್ಷಗಳ ಪದವಿ ಪಡೆದಿರಬೇಕು

ಅಥವಾ

ಯು.ಜಿ.ಸಿ.ಯಿಂದ ತತ್ಸಮಾನ ಪದವಿಯೆಂದು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಮೂರು

ವರ್ಷಗಳ ಪದವಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು.

ಅಥವಾ

ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದ ಮೂರು ವರ್ಷಗಳ ಪದವಿಯೊಂದಿಗೆ ಕರ್ನಾಟಕ ಪ್ರೌಢ ಶಿಕ್ಷಣ

ಮಂಡಳಿಯು ನಡೆಸುವ ಸೀನಿಯರ್‌ಗ್ರೇಡ್(ಗಾಯನ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಂಥಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಅಧ್ಯಯನಾಂಗಕ್ಕೆ ಸಲ್ಲಿಸಬಹುದು.

 

  1. ಈ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಇರುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಅನುಸಾರವಾಗಿ ಸೀಟ್ ನೀಡಲಾಗುವುದು.
  2. ಈ ಪರೀಕ್ಷೆಯನ್ನು ಅಧ್ಯಯನಾಂಗ(ಪರೀಕ್ಷಾಂಗ)ವು ಸಂಗೀತ ಮತ್ತು ನೃತ್ಯ ವಿಭಾಗದ ಮೂಲಕ ನಡೆಸುತ್ತದೆ.
  3. ಪ್ರವೇಶ ಮಿತಿ: ಎಂ.ಮ್ಯೂಜಿಕ್ ಪ್ರಥಮ ವರ್ಷದ ತರಗತಿಗೆ ವಿದ್ಯಾರ್ಥಿಗಳ ಪ್ರವೇಶ ಮಿತಿ ಕನಿಷ್ಠ ೫, ಗರಿಷ್ಠ ೨೦.

 

  1. ಪ್ರವೇಶ ಪರೀಕ್ಷಾ ವಿಧಾನ:

ಅಂಕಗಳು – ೧೦೦

 

  1. ಲಿಖಿತ ಪರೀಕ್ಷೆ

ಅಂಕಗಳು : ೨೫

ಅವಧಿ : ೧ ತಾಸು

ವಿವರ : ಅಭ್ಯರ್ಥಿಯು ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಕು.

  1. ಪ್ರಾಯೋಗಿಕ ಪರೀಕ್ಷೆ

ಅಂಕಗಳು : ೫೦

ಅವಧಿ : ಪ್ರತಿಯೊಬ್ಬ ವಿದ್ಯಾರ್ಥಿಗೆ ೧೫ ನಿಮಿಷ

ವಿವರ : ಅಭ್ಯರ್ಥಿಯು ಈ ಪರೀಕ್ಷೆಯಲ್ಲಿ ಗಾಯನ ಮಾಡಿ ತೋರಿಸಬೇಕು.

  1. ಮೌಖಿಕ ಪರೀಕ್ಷೆ

ಅಂಕಗಳು : ೨೫

ಅವಧಿ : ಪ್ರತಿಯೊಬ್ಬ ವಿದ್ಯಾರ್ಥಿಗೆ ೧೦ ನಿಮಿಷ

ವಿವರ : ಅಭ್ಯರ್ಥಿಯು  ಪರೀಕ್ಷಕರು ಕೇಳುವ ಸಂಗೀತ ಸಂಬಂಧಿ ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಬೇಕು.

  1. ಅಭ್ಯರ್ಥಿಗಳು ಮೌಖಿಕ ಪರೀಕ್ಷೆಗೆ ಹಾಜರಾಗುವಾಗ ತಾವು ಮಾಡಿದ ಸಾಧನೆ ಕುರಿತಾದ ಸಂಗೀತ ಕಾರ್ಯಕ್ರಮ, ಪಡೆದ ಪ್ರಶಸ್ತಿ, ಬಹುಮಾನಗಳ ದಾಖಲೆಗಳನ್ನು ತರಬಹುದಾಗಿದೆ.
  2. ಪ್ರವೇಶ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳನ್ನು ಮತ್ತು ಪದವಿ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳನ್ನು ಕ್ರೋಢೀಕರಿಸಿ ಸರಾಸರಿ ತೆಗೆದು ರ‍್ಯಾಂಕ್ ನೀಡಲಾಗುತ್ತದೆ. ರ‍್ಯಾಂಕ್‌ಗೆ ಅನುಸಾರ ಪ್ರವೇಶ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ ಅಧ್ಯಯನಾಂಗಕ್ಕೆ ಸಲ್ಲಿಸಲಾಗುವುದು. ಅಧ್ಯಯನಾಂಗವು ಸೀಟ್ ಹಂಚಿಕೆಯ ಪ್ರಕ್ರಿಯೆಯನ್ನು ಕೈಗೊಳ್ಳುವುದು. ಸೀಟ್ ಹಂಚಿಕೆಗೆ ಮೀಸಲಾತಿ ನಿಯಮಗಳನ್ನು ಪಾಲಿಸಲಾಗುವುದು.
  3. ಪ್ರವೇಶ ಪರೀಕ್ಷೆಯಲ್ಲಿ ೩೫% ಅಂಕಪಡೆದು ಉತ್ತೀರ್ಣರಾದವರಿಗೆ ಅಧ್ಯಯನಾಂಗವು ನಿಯಮಾನುಸಾರ ಪ್ರವೇಶ ನೀಡುವುದು.
  4. ಶುಲ್ಕ : ವಿಶ್ವವಿದ್ಯಾಲಯದ ನಿಯಮಾನುಸಾರ
  5. ಪ್ರವೇಶ ಪರೀಕ್ಷಾ ಸಮಿತಿ:

ವಿಭಾಗದ ಮುಖ್ಯಸ್ಥರು     –        ಅಧ್ಯಕ್ಷರು

ವಿಭಾಗದ ಪ್ರಾಧ್ಯಾಪಕರು  –        ಸದಸ್ಯರು

ಪ್ರವೇಶ ಸಮಿತಿಯ ಸದಸ್ಯರು ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯ ಪರೀಕ್ಷಕರಾಗಿ ಮತ್ತು ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಾರೆ.

 

ಎಂ.ಮ್ಯೂಜಿಕ್ ದ್ವಿತೀಯ ವರ್ಷದ ಪ್ರವೇಶಾರ್ಹತೆ

  1. ಎಂ.ಮ್ಯೂಜಿಕ್ ಪ್ರಥಮ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ/ನಿ ಎಂ.ಮ್ಯೂಜಿಕ್ ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಹನಾ/ಳಾಗುತ್ತಾನೆ/ಳೆ.
  2. ಎಂ.ಮ್ಯೂಜಿಕ್ ಪ್ರಥಮ ತರಗತಿಯ ಪರೀಕ್ಷೆಯಲ್ಲಿ ಗರಿಷ್ಠ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದವರಿಗೂ ಸಹ ಎಂ.ಮ್ಯೂಜಿಕ್ ದ್ವಿತೀಯ ತರಗತಿಗೆ ಪ್ರವೇಶ ಪಡೆಯಲು ಕ್ಯಾರಿ ಓವರ್ ಪದ್ಧತಿಯಲ್ಲಿ ಅವಕಾಶ ಇರುತ್ತದೆ.
  3. ಕನಿಷ್ಠ ಒಂದು ಶಾಸ್ತ್ರ ಮತ್ತು ಕನಿಷ್ಠ ಒಂದು ಪ್ರಾಯೋಗಿಕ ಪತ್ರಿಕೆಯಲ್ಲಿ ಉತ್ತೀರ್ಣರಾದವರಿಗೆ ಕ್ಯಾರಿ ಓವರ್ ಪದ್ಧತಿ ಸೌಲಭ್ಯ ಅನ್ವಯವಾಗುತ್ತದೆ.
  4. ಎಂ.ಮ್ಯೂಜಿಕ್ ಪ್ರಥಮ ತರಗತಿಯ ಎಲ್ಲಾ ವಿಷಯಗಳಲ್ಲಿ ಉತ್ತಿರ್ಣರಾದವರಿಗೆ ಮಾತ್ರ ದ್ವಿತೀಯ/ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಲಾಗುವುದು. ಅಲ್ಲಿಯವರೆಗೆ ಆ ಫಲಿತಾಂಶವನ್ನು ತಡೆಹಿಡಿಯಲಾಗುತ್ತದೆ (ಊeಟಜ uಠಿ)
  5. ಅನುತ್ತೀರ್ಣವಾದ ವಿಷಯಗಳನ್ನು ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಪರೀಕ್ಷೆಗೆ ತೆಗೆದುಕೊಳ್ಳಲು ಅವಕಾಶವಿದೆ.

 ಎಂ. ಮ್ಯೂಜಿಕ್ ಕೋರ್ಸ್‌ನ ವಿಷಯ ವಿಧಾನ:

ಕ್ರ. ಸಂ. ಕೋರ್ಸ್‌ನ ಹೆಸರು ತರಗತಿ ವಿಷಯ ಪತ್ರಿಕೆಗಳ ಸಂಖ್ಯೆ ಪತ್ರಿಕೆ ಅಂಕಗಳು
ಎಂ.ಮ್ಯೂಜಿಕ್ ಪ್ರಥಮ ಹಿಂದೂಸ್ತಾನಿ ಗಾಯನ ಪತ್ರಿಕೆ-೧= ಪ್ರಾಯೋಗಿಕ-೧, ಪತ್ರಿಕೆ-೨= ಪ್ರಾಯೋಗಿಕ-೨ ಪತ್ರಿಕೆ-೩= ಪ್ರಾಯೋಗಿಕ-೩ ಪತ್ರಿಕೆ-೪= ಸಂಗೀತ ಶಾಸ್ತ್ರ-೧ -(ಲಿಖಿತ) ಪತ್ರಿಕೆ-೫= ಸಂಗೀತ ಶಾಸ್ತ್ರ-೨ -(ಲಿಖಿತ) ೧೦೦ ೧೦೦ ೧೦೦ ೧೦೦ ೧೦೦
ಒಟ್ಟು ಅಂಕಗಳು ೫೦೦
ಎಂ.ಮ್ಯೂಜಿಕ್ ದ್ವಿತೀಯ ಹಿಂದೂಸ್ತಾನಿ ಗಾಯನ ಪತ್ರಿಕೆ-೬= ಪ್ರಾಯೋಗಿಕ-೪ ಪತ್ರಿಕೆ-೭= ಪ್ರಾಯೋಗಿಕ-೫ ಪತ್ರಿಕೆ-೮= ಪ್ರಾಯೋಗಿಕ-೬ ಪತ್ರಿಕೆ-೯= ಸಂಗೀತ ಶಾಸ್ತ್ರ-೩ -(ಲಿಖಿತ) ಪತ್ರಿಕೆ-೧೦= ಸಂಗೀತ ಶಾಸ್ತ್ರ-೪ -(ಲಿಖಿತ) ೧೦೦ ೧೦೦ ೧೦೦ ೧೦೦ ೧೦೦
ಒಟ್ಟು ಅಂಕಗಳು ೫೦೦
      ಒಟ್ಟು ಪತ್ರಿಕೆಗಳ ಸಂಖ್ಯೆ ೧೦ ಒಟ್ಟು ಅಂಕಗಳು ೧೦೦೦

* ಎಂ.ಮ್ಯೂಜಿಕ್ ಪ್ರಥಮ ಹಾಗೂ ದ್ವಿತೀಯ ವರ್ಷದ ಕೋರ್ಸ್‌ನ ಅಧ್ಯಯನಕ್ಕೆ ತಲಾ ಐದರಂತೆ ಒಟ್ಟು ೧೦ ಪತ್ರಿಕೆಗಳಿರುತ್ತವೆ.

 

ಅಂಕಗಳ ವಿಧಾನ:

ಎಂ.ಮ್ಯೂಜಿಕ್ ಪ್ರಥಮ

ಕ್ರ. ಸಂ. ಪತ್ರಿಕೆ ವಿಷಯಗಳು ಅಧ್ಯಯನ ಅಂಕಗಳು ಆಂತರಿಕ ಅಂಕಗಳು ಒಟ್ಟು ಅಂಕಗಳು
೧. ಪ್ರಾಯೋಗಿಕ-೧ ಹಿಂದೂಸ್ತಾನಿ ಗಾಯನ ೧೦೦ ೧೦೦
೨. ಪ್ರಾಯೋಗಿಕ-೨ ಹಿಂದೂಸ್ತಾನಿ ಗಾಯನ ೧೦೦ ೧೦೦
೩. ಪ್ರಾಯೋಗಿಕ-೩ ಹಿಂದೂಸ್ತಾನಿ ಗಾಯನ ೧೦೦ ೧೦೦
೪. ಶಾಸ್ತ್ರ-೦೧ (ಲಿಖಿತ) ಸಂಗೀತಶಾಸ್ತ್ರ ೮೦ ೨೦ ೧೦೦
೫. ಶಾಸ್ತ್ರ-೦೨ (ಲಿಖಿತ) ಸಂಗೀತಶಾಸ್ತ್ರ ೮೦ ೨೦ ೧೦೦
೬. ಒಟ್ಟು ಅಂಕಗಳು ೫೦೦

 

ಎಂ.ಮ್ಯೂಜಿಕ್ ದ್ವಿತೀಯ  

ಕ್ರ. ಸಂ. ಪತ್ರಿಕೆ ವಿಷಯಗಳು ಅಧ್ಯಯನ ಅಂಕಗಳು ಆಂತರಿಕ ಅಂಕಗಳು ಒಟ್ಟು ಅಂಕಗಳು
೧. ಪ್ರಾಯೋಗಿಕ-೪ ಹಿಂದೂಸ್ತಾನಿ ಗಾಯನ ೧೦೦ ೧೦೦
೨. ಪ್ರಾಯೋಗಿಕ-೫ ಹಿಂದೂಸ್ತಾನಿ ಗಾಯನ ೧೦೦ ೧೦೦
೩. ಪ್ರಾಯೋಗಿಕ-೬ ಹಿಂದೂಸ್ತಾನಿ ಗಾಯನ ೧೦೦ ೧೦೦
೪. ಶಾಸ್ತ್ರ-೦೩ (ಲಿಖಿತ) ಸಂಗೀತಶಾಸ್ತ್ರ ೮೦ ೨೦ ೧೦೦
೫. ಶಾಸ್ತ್ರ-೦೪ (ಲಿಖಿತ) ಸಂಗೀತಶಾಸ್ತ್ರ ೮೦ ೨೦ ೧೦೦
೬. ಒಟ್ಟು ಅಂಕಗಳು ೫೦೦

 

ಎಂ.ಮ್ಯೂಜಿಕ್ ಕೋರ್ಸ್‌ನ ಎರಡು ವರ್ಷಗಳ ವಿಷಯವಾರು ಪತ್ರಿಕೆಗಳು ಮತ್ತು ಅಂಕಗಳು

ಕ್ರ.ಸಂ. ತರಗತಿ ಪ್ರಾಯೋಗಿಕ ಪತ್ರಿಕೆಗಳು ಅಂಕಗಳು ಶಾಸ್ತ್ರ (ಲಿಖಿತ) ಪತ್ರಿಕೆಗಳು ಅಂಕಗಳು * (ಅ)+(ಆಂ) ಒಟ್ಟು ಅಂಕಗಳು
ಎಂ.ಮ್ಯೂಜಿಕ್ ಪ್ರಥಮ ಪ್ರಾಯೋಗಿಕ-೦೧ ಪ್ರಾಯೋಗಿಕ-೦೨ ಪ್ರಾಯೋಗಿಕ-೦೩ ೧೦೦ ೧೦೦ ೧೦೦ ಸಂಗೀತ ಶಾಸ್ತ್ರ-೦೧ ಸಂಗೀತ ಶಾಸ್ತ್ರ-೦೨ ೮೦+೨೦=೧೦೦ ೮೦+೨೦=೧೦೦ ೫೦೦
ಎಂ.ಮ್ಯೂಜಿಕ್ ದ್ವಿತೀಯ ಪ್ರಾಯೋಗಿಕ-೦೪ ಪ್ರಾಯೋಗಿಕ-೦೫ ಪ್ರಾಯೋಗಿಕ-೦೬ ೧೦೦ ೧೦೦ ೧೦೦ ಸಂಗೀತ ಶಾಸ್ತ್ರ-೦೩ ಸಂಗೀತ ಶಾಸ್ತ್ರ-೦೪ ೮೦+೨೦=೧೦೦ ೮೦+೨೦=೧೦೦ ೫೦೦
ಒಟ್ಟು ಪ್ರಾಯೋಗಿಕ ಪತ್ರಿಕೆಗಳು-೦೬ ೬೦೦ ಸಂಗೀತ ಶಾಸ್ತ್ರ ಪತ್ರಿಕೆಗಳು -೦೪ ೪೦೦ ೧೦೦೦

* ಅ = ಅಧ್ಯಯನ/ಅಭ್ಯಾಸದ ಅಂಕಗಳು

* ಆಂ = ಆಂತರಿಕ ಅಂಕಗಳು

ಅಂಕಗಳ ಅನುಸಾರ ಕಾರ್ಯ ನಿರ್ವಹಣೆ :

  1. ೧೦೦ ಅಂಕಗಳ ಪ್ರಾಯೋಗಿಕ ಪತ್ರಿಕೆಗೆ ೧೦೦ ಅಂಕಗಳ ಬೋಧನೆಯು ಪಠ್ಯಕ್ರಮದ (Syllabus) ಅನುಸಾರ ನಡೆಯುತ್ತದೆ. ಪಠ್ಯಕ್ರಮದಲ್ಲಿ ವಿವಿಧ ಅಧ್ಯಾಯಗಳು ಇರುತ್ತವೆ.
  2. ೧೦೦ ಅಂಕಗಳ ಪ್ರಾಯೋಗಿಕ ಪರೀಕ್ಷೆಯು ಪಠ್ಯಕ್ರಮದ (Syllabus) ಅನುಸಾರ ನಡೆಯುತ್ತದೆ.
  3. ೧೦೦ ಅಂಕಗಳ ಶಾಸ್ತ್ರ ಪರೀಕ್ಷೆಗೆ ೧೦೦ ಅಂಕಗಳ ಬೋಧನೆಯು ಪಠ್ಯಕ್ರಮದ (Syllabus) ಅನುಸಾರ ನಡೆಯುತ್ತದೆ.

ಆಂತರಿಕ ಅಂಕಗಳು:

ಅಂತರಿಕ ಅಂಕಗಳು ಪ್ರತಿಯೊಂದು ಶಾಸ್ತ್ರ (ಲಿಖಿತ) ಪತ್ರಿಕೆಗೆ ಮಾತ್ರ ಅನ್ವಯಿಸುತ್ತವೆ. ಈ ಅಂಕಗಳು ೨೦% ರಷ್ಟು ಇರುತ್ತವೆ.

ಹಾಜರಾತಿ

  1. ಒಟ್ಟು ಶೈಕ್ಷಣಿಕ ಅವಧಿಯು ೨೯೦ ದಿನಗಳು. ವಿದ್ಯಾರ್ಥಿಯು ವಾರ್ಷಿಕ ಪರೀಕ್ಷೆಗೆ ಅರ್ಹರಾಗಲು ಪ್ರತಿಯೊಂದು ವಿಷಯದಲ್ಲಿ ಶೇಕಡಾ ೭೫% ಹಾಜರಾತಿ ಪಡೆಯಬೇಕು. ಪರಂತು ೧೦೦% ವಾರ್ಷಿಕ ಹಾಜರಾತಿ ಪ್ರಮಾಣ ಇರಬೇಕಾದದ್ದು ಅಶಯವಾಗಿರುತ್ತದೆ. ೧೦%ರವರೆಗೆ ಅನಾರೋಗ್ಯ, ವೈದ್ಯಕೀಯ ರಜೆಗಳ ಸೌಲಭ್ಯವಿರುತ್ತದೆ.
  2. ವಿಭಾಗದ ಪ್ರತಿಯೊಂದು ತರಗತಿಯ ಪ್ರತಿಯೊಬ್ಬ ಪ್ರಾಧ್ಯಾಪಕರು ಹಾಜರಿ ಪುಸ್ತಕವನ್ನು ನಿರ್ವಹಿಸುತ್ತಾರೆ. ವಿದ್ಯಾರ್ಥಿಯು ತನ್ನ ತರಗತಿಯ ಪ್ರತಿಯೊಂದು ಪಿರಿಯಡ್‌ನಲ್ಲಿ ತನ್ನ ಹಾಜರಾತಿಯನ್ನು ಸಹಿ ಮೂಲಕ ದಾಖಲಿಸಬೇಕು. ವಿದ್ಯಾರ್ಥಿಯ ಗೈರು ಹಾಜರಿಯನ್ನು ಪ್ರಾಧ್ಯಾಪಕರು ದಾಖಲಿಸಬೇಕು.
  3. ವಿಭಾಗದ ಪ್ರತಿಯೊಂದು ತರಗತಿಯ ಪ್ರತ್ಯೇಕ ಹಾಜರಿ ಪುಸ್ತಕಗಳು ವಿಭಾಗದ ಮುಖ್ಯಸ್ಥರ ಬಳಿ ಇರುತ್ತವೆ. ವಿದ್ಯಾರ್ಥಿಗಳು ಹಾಜರಾತಿಯನ್ನು ಸಹಿಯ ಮೂಲಕ ಈ ಪುಸ್ತಕದಲ್ಲಿ ದಾಖಲಿಸಬೇಕು.
  4. ತರಗತಿಯಲ್ಲಿ ಶೇ. ೭೫%ಕ್ಕಿಂತ ಕಡಿಮೆ ಹಾಜರಾತಿಯನ್ನು ಹೊಂದಿದ ವಿದ್ಯಾರ್ಥಿಗಳ ಪಟ್ಟಿಯನ್ನು ಪರೀಕ್ಷೆ ಅವಧಿಯ ಮೊದಲು ಅಧ್ಯಯನಾಂಗಕ್ಕೆ ಕಳುಹಿಸಬೇಕು.
  5. ಪರೀಕ್ಷಾ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಆಯಾ ತರಗತಿಯಲ್ಲಿ ೭೫%ಕ್ಕಿಂತ ಕಡಿಮೆ ಹಾಜರಾತಿಯ ವಿದ್ಯಾರ್ಥಿಗಳ ಹೆಸರುಗಳನ್ನು ಸೂಚನಾ ಫಲಕದಲ್ಲಿ ಪರೀಕ್ಷಾ ಅರ್ಜಿಸಲ್ಲಿಸುವ ಮುಂಚೆ ಪ್ರಕಟಿಸಬೇಕು.
  6. ಅವಶ್ಯಕವಾದ ಮತ್ತು ತೃಪ್ತಿಕರವಾದ ಹಾಜರಾತಿ ಇಲ್ಲದಿದ್ದರೆ ಅಂತಹ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗುವುದಿಲ್ಲ.
  7. ಪ್ರತಿಯೊಂದು ತರಗತಿಯಲ್ಲಿ ಆಂತರಿಕ ಮೌಲ್ಯಮಾಪನಕ್ಕಾಗಿ ನಿಯೋಜಿಸಿದ / ಒಪ್ಪಿಸಿದ ಕೆಲಸ / ಸೆಮಿನಾರ್ / ಅಸೈನ್‌ಮೆಂಟ್ ಇತ್ಯಾದಿ ಕೆಲಸಗಳನ್ನು ನಿರ್ದಿಷ್ಟಪಡಿಸಿದ ದಿನಾಂಕದೊಳಗೆ ಒಪ್ಪಿಸದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಲಾಗುವುದಿಲ್ಲ.

ಹಾಸ್ಟೆಲ್ ಹಾಜರಾತಿ ವಿಧಾನ: (ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ)

  1. ಹಾಸ್ಟೆಲ್ ವಿದ್ಯಾರ್ಥಿಯ ವಿಭಾಗದ ಹಾಜರಾತಿಗೂ ಮತ್ತು ಹಾಸ್ಟೆಲ್ ಹಾಜರಾತಿಗೂ ಸಂಬಂದವಿರುತ್ತದೆ. ಹಾಸ್ಟೆಲ್ ಹಾಜರಾತಿಗೂ ಕೂಡಾ ಅಂಕಗಳು ಇರುತ್ತವೆ. ಈ ಅಂಕಗಳನ್ನು ಪರೀಕ್ಷೆಗೆ ಹಾಜರಾಗಲು ಪರಿಗಣಿಸಲಾಗುವುದು.
  2. ಪರೀಕ್ಷಾ ಅರ್ಜಿಸಲ್ಲಿಸುವ ಸಂದರ್ಭದಲ್ಲಿ ಹಾಸ್ಟೆಲ್ ಹಾಜರಾತಿ ಪ್ರಮಾಣಪತ್ರವನ್ನು ವಿದ್ಯಾರ್ಥಿಯು ವಿಭಾಗಕ್ಕೆ ಸಲ್ಲಿಸಬೇಕು.
  3. ಹಾಸ್ಟೆಲ್ ಹಾಜರಾತಿ ಪ್ರಮಾಣವು ಕನಿಷ್ಠ ೭೫% ಇರಬೇಕು. ಕಡಿಮೆಯಾದಲ್ಲಿ ೧೦% ವೈದ್ಯಕೀಯ ರಜಾ ಸೌಲಭ್ಯವಿರುತ್ತದೆ.
  4. ಒಂದು ವೇಳೆ ಹಾಸ್ಟೆಲ್ ವಿದ್ಯಾರ್ಥಿಯು ಹಲವು ಸಂದರ್ಭಗಳಲ್ಲಿ ಹಾಸ್ಟೆಲ್ ಹೊರತುಪಡಿಸಿ, ವಿಭಾಗಕ್ಕೆ ನೇರವಾಗಿ ಹಾಜರಾಗುತ್ತಿದ್ದಲ್ಲಿ, ವಿಭಾಗದ ಹಾಜರಾತಿಯನ್ನು ಹಾಸ್ಟೆಲ್ ಹಾಜರಾತಿಯೆಂದು ಪರಿಗಣಿಸಲಾಗುವುದು.

ಬೋಧನಾ ವಿಧಾನ (ಪ್ರಾಯೋಗಿಕ ತರಗತಿ ಮತ್ತು ಶಾಸ್ತ್ರ ಲಿಖಿತ ತರಗತಿ)

  1. ಪಠ್ಯಕ್ರಮದ ವಿಷಯಗಳ ಬೋಧನೆಯು ಕನ್ನಡ ಅಥವಾ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ನಡೆಯುತ್ತದೆ. ನಿಗದಿತ ಪಠ್ಯಕ್ರಮದ ಅನುಸಾರ ಬೋಧನಾ ಕಾರ್ಯವನ್ನು ವಿಭಾಗದ ಪ್ರಾಧ್ಯಾಪಕರು ನಿರ್ವಹಿಸುವರು.
  2. ನಿಗದಿತ ಪಠ್ಯಕ್ರಮದ ಅನುಸಾರ ಬೋಧನಾ ಕಾರ್ಯವನ್ನು ವಿಭಾಗದ ಪ್ರಾಧ್ಯಾಪಕರು ಪ್ರಾಧ್ಯಾಪಕರು ನಿರ್ವಹಿಸುವರು.
  3. ಪ್ರಾಯೋಗಿಕ ತರಗತಿಯಲ್ಲಿ ಪ್ರಾಧ್ಯಾಪಕರು ಹಾಡುಗಾರಿಕೆಯನ್ನು ಕಲಿಸುತ್ತಾರೆ. ಈ ಅವಧಿಯಲ್ಲಿ ವಿಭಾಗದ ಹಾರ‍್ಮೋನಿಯಂ ಸಾಥಿದಾರರು ಮತ್ತು ತಬಲಾ ಸಾಥಿದಾರರು ಸಾಥಿಮಾಡುತ್ತಾರೆ. ತಂಬೂರಿಯನ್ನು ವಿದ್ಯಾರ್ಥಿಗಳು ನುಡಿಸಿಕೊಳ್ಳುತಾರೆ.
  4. ತರಗತಿಯಲ್ಲಿ ಕನಿಷ್ಠ ೦೫, ಗರಿಷ್ಠ ೨೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು ಬಂದಲ್ಲಿ ವಿಶ್ವವಿದ್ಯಾಲಯದ ಅನುಮತಿ ಪಡೆದು ಆಯಾ ತರಗತಿಯ ಪ್ರತ್ಯೇಕ ವರ್ಗ, ಕೊಠಡಿ (Seಠಿಚಿಡಿಚಿಣe ಅಟಚಿss ಚಿಟಿಜ ಅಟಚಿss ಖooms) ಮತ್ತು ಅಧ್ಯಾಪಕರ ವ್ಯವಸ್ಥೆ ಮಾಡಿ ಬೋಧನೆ ಮಾಡಲಾಗುವುದು.
  5. ಪ್ರಾಧ್ಯಾಪಕರು ಒಂದು ಅವಧಿಯ ತರಗತಿಯಲ್ಲಿ ಎರಡು ಭಾಗ ಮಾಡಿ ಮಹಿಳೆಯರ ಗುಂಪಿಗೆ ಮಹಿಳೆಯರ ಶೃತಿ (Piಣಛಿh) ಯಲ್ಲಿ ಹಾಗೂ ಪುರುಷರ ಗುಂಪುಗಳಿಗೆ ಪುರುಷರ ಶೃತಿ (Piಛಿಣh) ಯಲ್ಲಿ ಪ್ರತ್ಯೇಕವಾಗಿ ಪಾಠಮಾಡಬೇಕು. ಆದರೆ ಇಡಿ ಪೀರಿಯಡ್‌ನಲ್ಲಿ iಹಿಳಾ ವಿದ್ಯಾರ್ಥಿಗಳು ಹಾಗೂ ಪುರುಷ ವಿದ್ಯಾರ್ಥಿಗಳು ಹಾಜರಿರಬೇಕು.
  6. ೧೦೦ ಅಂಕಗಳ ಒಂದು ಪತ್ರಿಕೆಗೆ ಒಂದು ದಿನಕ್ಕೆ ೧ ಪಿರಿಯಡ್ ನಿಗದಿಯಾಗಿರುತ್ತದೆ. ಇದು ಪ್ರಾಯೋಗಿಕ ಪತ್ರಿಕೆ ಹಾಗೂ ಸಂಗೀತಶಾಸ್ತ್ರ(ಲಿಖಿತ) ಪತ್ರಿಕೆಗೆ ಅನ್ವಯವಾಗುತ್ತದೆ.
  7. ತರಗತಿಗಳಲ್ಲಿ ಉಪಯೋಗಿಸುವಂತಹ ವಾದ್ಯಗಳು : ಹಾರ‍್ಮೋನಿಯಂ, ತಬಲಾ, ತಂಬೂರಿ, ಶೃತಿ ಪೆಟ್ಟಿಗೆ, ತಬಲಾ ತಾಳಮಾಲ, ಸ್ವರಮಂಡಲ ಮುಂತಾದವುಗಳು
  8. ರಿಯಾಜ್ ತರಗತಿ, ಶ್ರವಣ ತರಗತಿ, ವಾರದ ವೇದಿಕೆ ಕಾರ್ಯಕ್ರಮಗಳು ಮತ್ತು ಸಂಗೀತಯಾತ್ರೆ ಕಾರ್ಯಕ್ರಮ ಇವುಗಳನ್ನು ಪ್ರಾಯೋಗಿಕ ಪಿರಿಯಡ್‌ಗಳು ಎಂದು ಪರಿಗಣಿಸಲಾಗುವುದು.
  • ರಿಯಾಜ್ ತರಗತಿ : ಈ ತರಗತಿಯಲ್ಲಿ ವಿದ್ಯಾರ್ಥಿಗಳು ರಿಯಾಜ್ (ಸಂಗೀತ ಸಾಧನೆ) ಮಾಡುತ್ತಾರೆ. ಈ ಸಂದರ್ಭದಲ್ಲಿ ಒಬ್ಬ ಪ್ರಾಧ್ಯಾಪಕರು ಮೇಲ್ವಿಚಾರಣೆಯ ಹಾಗೂ ಹಾರ‍್ಮೋನಿಯಂ ಮತ್ತು ತಬಲಾ ಸಾಥಿದಾರರು ವಾದ್ಯಸಾಥಿಯ ಕಾರ್ಯ ನಿರ್ವಹಿಸುತ್ತಾರೆ. ರಿಯಾಜ್ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಗಳನ್ನು ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ನಿರ್ಧರಿಸುತ್ತಾರೆ.
  • ಶ್ರವಣ ತರಗತಿ: ಈ ತರಗತಿಯಲ್ಲಿ ವಿದ್ಯಾರ್ಥಿಯು ನವ ತಂತ್ರಜ್ಞಾನದ ಸಲಕರಣೆಗಳ ಮೂಲಕ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಲಿಸುವುದು.
  • ವಾರದ ವೇದಿಕೆ ಕಾರ್ಯಕ್ರಮ: ವಿಭಾಗವು ಪ್ರತಿ ಶುಕ್ರವಾರ ವಾರದ ವೇದಿಕೆ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭಾಗವಹಿಸುತ್ತಾರೆ.
  • ಸಂಗೀತ ಯಾತ್ರೆ ಕಾರ್ಯಕ್ರಮ: ವಿಭಾಗವು ವಿವಿದೆಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ವಿಭಾಗದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಂದ ಏರ್ಪಡಿಸುತ್ತದೆ.

 

ಪರೀಕ್ಷಾ ವಿಧಾನ

  1. ಪರೀಕ್ಷಾ ಕಾರ್ಯವನ್ನು ಅಧ್ಯಯನಾಂಗವು ನಿರ್ವಹಿಸುತ್ತದೆ.
  2. ಎಂ.ಮ್ಯೂಜಿಕ್ ಕೋರ್ಸ್‌ನ ಎರಡು ವರ್ಷಗಳ ಪರೀಕ್ಷೆಗಳನ್ನು ಆಂತರಿಕ ಮೌಲ್ಯಮಾಪನ ಮತ್ತು ಅಧ್ಯಯನ ಪರೀಕ್ಷಾ ಮೌಲ್ಯಮಾಪನ ಎಂಬ ಎರಡು ವಿಧಾನಗಳಿಂದ ನಡೆಸಲಾಗುವುದು. ಪ್ರತಿ ಲಿಖಿತಶಾಸ್ತ್ರ ಪತ್ರಿಕೆಗೆ ೨೦ ಆಂತರಿಕ ಹಾಗೂ ೮೦ ಅಧ್ಯಯನ ಪರೀಕ್ಷೆಯ ಅಂಕಗಳು ನಿಗದಿಯಾಗಿರುತ್ತವೆ. ಎರಡರಲ್ಲಿಯೂ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕು.
  3. ಲಿಖಿತ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯು ಸತತವಾಗಿ ಮೂರು ಸಲ ಮರುಪರೀಕ್ಷೆಗೆ ಹಾಜರಾಗಲು ಅವಕಾಶವಿದೆ. ಅದಾಗ್ಯೂ ಪಾಸಾಗದಿದ್ದರೆ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿದೆ.
  4. ವಿದ್ಯಾರ್ಥಿಯು ಕೋರ್ಸ್‌ನ್ನು ಮಧ್ಯದಲ್ಲಿ ನಿಲ್ಲಿಸಿದರೆ, ಅವನಿಗೆ ಮರುಪ್ರವೇಶಕ್ಕೆ ೦೬ ವರ್ಷಗಳ ಅವಧಿಯ ಅವಕಾಶವಿರುತ್ತದೆ. ಈ ಅವಧಿಯೊಳಗಾಗಿ ವಿದ್ಯಾರ್ಥಿಯು ತನ್ನ ಕೋರ್ಸ್‌ನ್ನು ಪೂರ್ಣಗೊಳಿಸಿಕೊಳ್ಳಬೇಕು.
  5. ಎಂ.ಮ್ಯೂಜಿಕ್ ಕೋರ್ಸ್‌ನ ಪ್ರತಿಯೊಂದು ತರಗತಿಯ ವಾರ್ಷಿಕ ಪರೀಕ್ಷೆಯು ೧. ಪ್ರಾಯೋಗಿಕ ಪತ್ರಿಕೆಗಳ ಪರೀಕ್ಷ(Pಡಿಚಿಛಿಣiಛಿಚಿಟ ಇxಚಿmiಟಿಚಿಣioಟಿ) ಮತ್ತು ೨. ಶಾಸ್ತ್ರ-ಲಿಖಿತ (ಖಿheoಡಿಥಿ ಇxಚಿmiಟಿಚಿಣioಟಿ) ಪರೀಕ್ಷೆ ಹೀಗೆ ಎರಡು ರೀತಿಯಲ್ಲಿ ನಡೆಯುತ್ತದೆ.
  6. ಪ್ರತಿಯೊಂದು ಪತ್ರಿಕೆಯ ಪರೀಕ್ಷೆಗೆ ೧೦೦ ಅಂಕಗಳು. ಪಠ್ಯಕ್ರಮದ ಅನುಸಾರ ಪರೀಕ್ಷೆಗಳು ನಡೆಯುತ್ತವೆ. ೧೦೦ ಅಂಕಗಳ ಪ್ರಾಯೋಗಿಕ ಪರೀಕ್ಷೆಯ ಅವಧಿಯು ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ತಾಸು ಇರುತ್ತದೆ. ಪ್ರಾಯೋಗಿಕ ಪರೀಕ್ಷೆಗೆ ಪತ್ರಿಕೆವಾರು ಪ್ರಶ್ನೆ ಪತ್ರಿಕೆ ಇರುತ್ತದೆ. ಪರೀಕ್ಷೆಗೆ ೧೦ ನಿಮಿಷ ಮುಂಚಿತವಾಗಿ ಪ್ರಶ್ನೆ ಪತ್ರಿಕೆಯನ್ನು ಸರತಿಯನುಸಾರ ವಿದ್ಯಾರ್ಥಿಗೆ ಕೊಡಲಾಗುತ್ತದೆ. ಪ್ರಾಯೋಗಿಕ ಪ್ರಶ್ನೆ ಪತ್ರಿಕೆಯ ಪ್ರತಿಯೊಂದು ಪ್ರಶ್ನೆಗೆ ಅವಧಿ ಮತ್ತು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಪ್ರಶ್ನೆಪತ್ರಿಕೆಯ ಅನುಸಾರ ಪರೀಕ್ಷಾ ಮಂಡಳಿಯ ಸದಸ್ಯರು ಪ್ರಶ್ನೆಕೇಳಿ ವಿದ್ಯಾರ್ಥಿಯ ಹಾಡುಗಾರಿಕೆಯನ್ನು ಪರೀಕ್ಷಿಸಿ ಅಂಕ ನೀಡುತ್ತಾರೆ.
  7. ಪ್ರಶ್ನೆ ಪತ್ರಿಕೆಯಲ್ಲಿ ವಿದ್ಯಾರ್ಥಿಯ ಆಯ್ಕೆಯ ಒಂದು ಪ್ರಶ್ನೆ ಇರುತ್ತದೆ. ಈ ಪ್ರಶ್ನೆಯಲ್ಲಿ ವಿದ್ಯಾರ್ಥಿಯು ಬಹು ಆಯ್ಕೆಯ ರಾಗಗಳಿದ್ದು, ವಿದ್ಯಾರ್ಥಿಯು ಅವುಗಳಲ್ಲಿ ಯಾವುದಾದರೂ ಒಂದು ರಾಗವನ್ನು ಹಾಡಬೇಕು. ಇದು ಕಡ್ಡಾಯ ಪ್ರಶ್ನೆಯಾಗಿರುತ್ತದೆ. ಈ ಪ್ರಶ್ನೆಗೆ ಉಳಿದ ಪ್ರಶ್ನೆಗಳಿಗಿಂತ ಅಂಕಗಳು ಹೆಚ್ಚಿಗಿರುತ್ತದೆ.
  8. ಪ್ರತಿಯೊಂದು ಪತ್ರಿಕೆಗೆ ನಿಗದಿಯಾಗಿರುವ ೧೦೦ ಅಂಕಗಳನ್ನು ಪ್ರಶ್ನೆವಾರು ವಿಂಗಡಿಸಲಾಗಿರುತ್ತದೆ.
  9. ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ತಂಬೂರಿ, ತಬಲಾ, ಹಾರ‍್ಮೋನಿಯಂ ವಾದ್ಯಗಳ ಸಾಥಿ ಇರುತ್ತದೆ. ತಬಲಾ ಮತ್ತು ಹಾರ‍್ಮೋನಿಯಂ ಸಾಥಿಯನ್ನು ವಿಭಾಗದ ತಬಲಾ ಮತ್ತು ಹಾರ‍್ಮೋನಿಯಂ ಸಾಥಿದಾರರು ನೀಡುತ್ತಾರೆ. ತಂಬೂರಿಯನ್ನು ಪರೀಕ್ಷಾರ್ಥಿ ಅಥವಾ ಅವರ ಸಹಪಾಠಿ ನುಡಿಸುತ್ತಾರೆ.
  10. ಪರೀಕ್ಷಾ ಕೊಠಡಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಇವರು ಅಧ್ಯಯನಾಂಗದ ಸಿಬ್ಬಂದಿಯಾಗಿರುತ್ತಾರೆ. ಇವರು ಪರೀಕ್ಷಾರ್ಥಿಗಳ ಹಾಜರಿಯನ್ನು ತೆಗೆದುಕೊಂಡು ಪರೀಕ್ಷಾ ಕೊಠಡಿಗೆ ಕಳಿಸುತ್ತಾರೆ.
  11. ಪ್ರಾಯೋಗಿಕ ಪರೀಕ್ಷಾ ಸಮಯದಲ್ಲಿ ಒಂದು ವೇಳೆ ವಿದ್ಯಾರ್ಥಿಯು ತನಗೆ ನಿಗದಿಯಾದ ಒಂದು ತಾಸು ಅವಧಿಗೆ ಮುಂಚೆಯೇ ಪರೀಕ್ಷೆ ಮುಗಿಸಿದರೆ ಕೂಡಲೇ ಪರೀಕ್ಷಕರು ಮುಂದಿನ ಅಭ್ಯರ್ಥಿಯ ಪರೀಕ್ಷೆಯನ್ನು ಆರಂಭಿಸುತ್ತಾರೆ.
  12. ಪ್ರಾಯೋಗಿಕ ಪರೀಕ್ಷಕರು ಪರೀಕ್ಷೆ ನಡೆಯುವ ಪತ್ರಿಕೆಯ ಪಠ್ಯಕ್ರಮ(Sಥಿಟಟಚಿbus) ಮತ್ತು ಪ್ರಶ್ನೆಪತ್ರಿಕೆಯನ್ನು ಮುಂದಿಟ್ಟುಕೊಂಡು ಪರೀಕ್ಷೆ ನಡೆಸುತ್ತಾರೆ.
  13. ಪ್ರಾಯೋಗಿಕ ಪರೀಕ್ಷಾಮಂಡಳಿಯಲ್ಲಿ ಒಬ್ಬರು ಅಧ್ಯಕ್ಷರು ಮತ್ತು ಇಬ್ಬರು ಅಥವಾ ಮೂವರು ಸದಸ್ಯರಿರುತ್ತಾರೆ.
  14. ಪ್ರತಿಯೊಂದು ಪ್ರಾಯೋಗಿಕ ಪತ್ರಿಕೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಉತ್ತೀರ್ಣವಾಗಲು ಕನಿಷ್ಠ ೩೫% ಅಂಕಗಳನ್ನು ಪಡೆದಿರಬೇಕು.
  15. ಅಂಧ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಬರಹ ಸಹಾಯಕರನ್ನು ಪಡೆದು ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ. ಬರಹ ಸಹಾಯಕರು ಅಭ್ಯರ್ಥಿಯ ವಿಷಯದವರಾಗಿರಬಾರದು. ಅವರು ಅಭ್ಯರ್ಥಿಯ ಶಿಕ್ಷಣ ಮಟ್ಟಕ್ಕಿಂತ ಕಡಿಮೆ ಶಿಕ್ಷಣ ಮಟ್ಟದವರಾಗಿರಬೇಕು.

ಶಾಸ್ತ್ರ ಪರೀಕ್ಷೆ:

  1. ಶಾಸ್ತ್ರ ಪರೀಕ್ಷೆಯು ೧. ಅಭ್ಯಾಸ ಪರೀಕ್ಷೆ (ಖಿeಚಿಛಿhiಟಿg) ಮತ್ತು ಆಂತರಿಕ ಪರೀಕ್ಷೆ (Iಟಿಣeಡಿಟಿಚಿಟ) ಗಳನ್ನು ಒಳಗೊಂಡಿರುತ್ತದೆ. ಅಭ್ಯಾಸ ಪರೀಕ್ಷೆಗೆ ೮೦ ಅಂಕಗಳು, ಆಂತರಿಕ ಪರೀಕ್ಷೆಗೆ ೨೦ ಅಂಕಗಳು ಹೀಗೆ ಒಟ್ಟು ೧೦೦ ಅಂಕಗಳು ಇರುತ್ತವೆ.
  2. ಪ್ರತಿಯೊಂದು ಶಾಸ್ತ್ರ ಪತ್ರಿಕೆಯ ಪರೀಕ್ಷೆಯಲ್ಲಿ ಹಾಗೂ ಆಂತರಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಉತ್ತೀರ್ಣವಾಗಲು ಕನಿಷ್ಠ ೩೫% ಅಂಕಗಳನ್ನು ಪಡೆದಿರಬೇಕು. ಶಾಸ್ತ್ರ ಪರೀಕ್ಷೆ ಮತ್ತು ಆಂತರಿಕ ಪರೀಕ್ಷೆಯ ಫಲಿತಾಂಶವು ಪ್ರತ್ಯೇಕವಾಗಿರುತ್ತದೆ. ಈ ಎರಡರಲ್ಲೂ ವಿದ್ಯಾರ್ಥಿಯು ಉತ್ತೀರ್ಣವಾಗಬೇಕು. ಶಾಸ್ತ್ರ ಮತ್ತು ಆಂತರಿಕ ಪರೀಕ್ಷೆ ಈ ಯಾವುದಾದರೂ ಒಂದರಲ್ಲಿ ವಿದ್ಯಾರ್ಥಿಯು ಅನುತ್ತೀರ್ಣನಾದರೆ ಅನುತ್ತೀರ್ಣವಾದ ಪರೀಕ್ಷೆಗೆ ಮಾತ್ರ ಮುಂದಿನ ಪರೀಕ್ಷಾ ಅವಧಿಯಲ್ಲಿ ಪುನಃ ಹಾಜರಾಗಬಹುದು.
  3. ಶಾಸ್ತ್ರ ಪತ್ರಿಕೆಯಲ್ಲಿ ವಿದ್ಯಾರ್ಥಿಯು ಕನ್ನಡವನ್ನು ಹೊರತುಪಡಿಸಿ ಇತರೆ ಭಾಷೆಯಲ್ಲಿ ಉತ್ತರಿಸುವ ಸಂದರ್ಭ ಬಂದಲ್ಲಿ ಪರೀಕ್ಷಾ ಅರ್ಜಿಯಲ್ಲಿ ಆ ಕುರಿತು ನಮೂದಿಸಬೇಕು.

ಕೃಪಾಂಕ ನೀಡುವಿಕೆ :

  1. ಒಬ್ಬ ವಿದ್ಯಾರ್ಥಿಗೆ ಒಂದು ಕೋರ್ಸನ ಒಂದು ತರಗತಿಯ ಒಟ್ಟು ಪರೀಕ್ಷೆಗೆ ೦೫ ಕೃಪಾಂಕಗಳಿರುತ್ತವೆ.
  2. ಒಬ್ಬ ವಿದ್ಯಾರ್ಥಿಯು ಎಲ್ಲಾ ಪತ್ರಿಕೆಗಳಲ್ಲಿ ಉತ್ತೀರ್ಣವಾಗಿ ಒಂದು ಪತ್ರಿಕೆಯಲ್ಲಿ ಮಾತ್ರ ಉತ್ತೀರ್ಣವಾಗಲು ೦೫ ಅಂಕಗಳು ಕಡಿಮೆ ಬಿದ್ದರೆ, ಗರಿಷ್ಠ ೦೫ ಕೃಪಾಂಕಗಳನ್ನು ನೀಡಲಾಗುವುದು.
  3. ಈ ಕೃಪಾಂಕಗಳನ್ನು ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್)ಯ ಸಿದ್ಧತಾಕಾರ್ಯದಲ್ಲಿ ತೊಡಗಿರುವ ಟ್ಯಾಬುಲೇಟರ್ ಅಧ್ಯಯನಾಂಗದ ನಿರ್ದೇಶಕರ ಗಮನಕ್ಕೆ ತಂದು ಸಮಾಲೋಚಿಸಿ ಸೇರಿಸುತ್ತಾರೆ.

ಆಂತರಿಕ ಮೌಲ್ಯಮಾಪನ

  1. ವಿದ್ಯಾರ್ಥಿಯು ಡೆಸರ್ಟೇಷನ್, ಅಸೈನ್‌ಮೆಂಟ್ಗಳನ್ನು ಆಯಾ ವಿಷಯದ ಪ್ರಾಧ್ಯಾಪಕರಿಗೆ ಸಲ್ಲಿಸಿ, ರುಜುಮಾಡಿಸಿ ಮುಖ್ಯಸ್ಥರಿಗೆ ಸಲ್ಲಿಸುವುದು. ಆಂತರಿಕ ಮೌಲ್ಯಮಾಪನವನ್ನು ಪ್ರಾಧ್ಯಾಪಕರು ಮಾಡುತ್ತಾರೆ.

ಎಂ.ಮ್ಯೂಜಿಕ್ ಪ್ರಥಮ ವರ್ಷ

ಆಂತರಿಕ ಅಂಕಗಳು (ಸಂಗೀತಶಾಸ್ತ್ರ-೧) – ೨೦ ಅಂಕಗಳು
ವಿದ್ಯಾರ್ಥಿಯ ಹಾಜರಾತಿ(೭೫%ಹಾಜರಿ ಇದ್ದರೆ) ೦೫ ಅಂಕಗಳು
ಅಸಾಯಿನ್‌ಮೆಂಟ್ (ಒಂದು ವರ್ಷಕ್ಕೆ ೫) ೦೫ ಅಂಕಗಳು
ವಿದ್ಯಾರ್ಥಿಯ ನಡವಳಿಕೆ ೦೫ ಅಂಕಗಳು
ವಿದ್ಯಾರ್ಥಿಯು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ (ಎಲ್ಲಾ ಕಾರ್ಯಕ್ರಮ) ೦೫ ಅಂಕಗಳು
  ಒಟ್ಟು ೨೦ ಅಂಕಗಳು
ಆಂತರಿಕ ಅಂಕಗಳು (ಸಂಗೀತಶಾಸ್ತ್ರ-೨) – ೨೦ ಅಂಕಗಳು
ವಿದ್ಯಾರ್ಥಿಯ ಹಾಜರಾತಿ(೭೫%ಹಾಜರಿ ಇದ್ದರೆ) ೦೫ ಅಂಕಗಳು
ಡೆಸರ್ಟೇಷನ್(ಒಂದು ವರ್ಷಕ್ಕೆ ೧) ೦೫ ಅಂಕಗಳು
ವಿದ್ಯಾರ್ಥಿಯ ನಡವಳಿಕೆ ೦೫ ಅಂಕಗಳು
ವಿದ್ಯಾರ್ಥಿಯು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ(ಎಲ್ಲಾ ಕಾರ್ಯಕ್ರಮ) ೦೫ ಅಂಕಗಳು
  ಒಟ್ಟು ೨೦ ಅಂಕಗಳು

 

ಎಂ.ಮ್ಯೂಜಿಕ್ ದ್ವಿತೀಯ ವರ್ಷ

ಆಂತರಿಕ ಅಂಕಗಳು (ಸಂಗೀತಶಾಸ್ತ್ರ-೧) – ೨೦ ಅಂಕಗಳು
ವಿದ್ಯಾರ್ಥಿಯ ಹಾಜರಾತಿ ೦೫ ಅಂಕಗಳು
ಅಸಾಯಿನ್‌ಮೆಂಟ್(ಒಂದು ವರ್ಷಕ್ಕೆ ೫) ೦೫ ಅಂಕಗಳು
ವಿದ್ಯಾರ್ಥಿಯ ನಡವಳಿಕೆ ೦೫ ಅಂಕಗಳು
ವಿದ್ಯಾರ್ಥಿಯು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ(ಎಲ್ಲಾ ಕಾರ್ಯಕ್ರಮ) ೦೫ ಅಂಕಗಳು
  ಒಟ್ಟು ೨೦ ಅಂಕಗಳು
ಆಂತರಿಕ ಅಂಕಗಳು (ಸಂಗೀತಶಾಸ್ತ್ರ-೨) – ೨೦ ಅಂಕಗಳು
ವಿದ್ಯಾರ್ಥಿಯ ಹಾಜರಾತಿ ೦೫ ಅಂಕಗಳು
ಡೆಸರ್ಟೇಷನ್ (ಒಂದು ವರ್ಷಕ್ಕೆ ೧) ೦೫ ಅಂಕಗಳು
ವಿದ್ಯಾರ್ಥಿಯ ನಡವಳಿಕೆ ೦೫ ಅಂಕಗಳು
ವಿದ್ಯಾರ್ಥಿಯು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ(ಎಲ್ಲಾ ಕಾರ್ಯಕ್ರಮ) ೦೫ ಅಂಕಗಳು
  ಒಟ್ಟು ೨೦ ಅಂಕಗಳು

 

ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿ

  1. ಅಧ್ಯಯನ ಮಂಡಳಿಯು ಹಾಗೂ ಪರೀಕ್ಷಾ ಮಂಡಳಿಯು ಕನ್ನಡ ವಿಶ್ವವಿದ್ಯಾಲಯದ ನಿಯಮಾನುಸಾರ ಕಾರ್ಯ ನಿರ್ವಹಿಸುವುದು.
  2. ಈ ಮಂಡಳಿಗಳಲ್ಲಿ ಭಾಗವಹಿಸಿದ ಬಾಹ್ಯ ಪರೀಕ್ಷಕರಿಗೆ ವಿಶ್ವವಿದ್ಯಾಲಯದ ನಿಯಮಾನುಸಾರ ಸೌಲಭ್ಯಗಳಿರುತ್ತವೆ.
  3. ಅಧ್ಯಯನ ಮಂಡಳಿ:

ವಿಭಾಗದ ಮುಖ್ಯಸ್ಥರು                          :         ಅಧ್ಯಕ್ಷರು

ಪ್ರಾಧ್ಯಾಪಕರು    (ಸಂಗೀತ ವಿಷಯದವರು)  :         ಸದಸ್ಯರು

ಪ್ರಾಧ್ಯಾಪಕರು    (ಸಂಗೀತ ವಿಷಯದವರು)  :         ಸದಸ್ಯರು

ಅಧ್ಯಯನ ಮಂಡಳಿಯಲ್ಲಿ ಆಂತರಿಕ ಹಾಗೂ ಬಾಹ್ಯ ಪ್ರಾಧ್ಯಾಪಕರು ಸದಸ್ಯರಾಗಿರುತ್ತಾರೆ.

 

ಪರೀಕ್ಷಾ ಮಂಡಳಿ

೧. ಪರೀಕ್ಷಾ ಮಂಡಳಿಯ ಸದಸ್ಯರನ್ನು ಅಧ್ಯಯನ ಮಂಡಳಿಯ (ಃ.ಔ.S) ಸಭೆಯಲ್ಲಿ ನೇಮಿಸಲಾಗುತ್ತದೆ.

ವಿಭಾಗದ ಮುಖ್ಯಸ್ಥರು                           :         ಅಧ್ಯಕ್ಷರು

ಪರೀಕ್ಷಕರು (ಸಂಗೀತ ವಿಷಯದವರು)            :         ಸದಸ್ಯರು

ಪರೀಕ್ಷಕರು (ಸಂಗೀತ ವಿಷಯದವರು)            :         ಸದಸ್ಯರು

  1. ಪರೀಕ್ಷಾ ಮಂಡಳಿಯ ಸದಸ್ಯರ ಸಂಬಂಧಿಕರು ಪರೀಕ್ಷಾರ್ಥಿಯಾಗಿದ್ದರೆ ಅಂತಹ ಸದಸ್ಯರು ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಆ ಸದಸ್ಯರ ಬದಲಾಗಿ ಇನ್ನೊಬ್ಬ ಸದಸ್ಯರನ್ನು ವಿಭಾಗದ ಮುಖ್ಯಸ್ಥರು ಆಡಳಿತದೊಂದಿಗೆ ಸಮಾಲೋಚಿಸಿ, ನೇಮಿಸುವರು.
  2. ಪರೀಕ್ಷಾ ಅವಧಿಯು ಸುದೀರ್ಘವಾಗಿದ್ದು, ಪರೀಕ್ಷಾ ಮಂಡಳಿಯ ಸದಸ್ಯರು ಅಷ್ಟು ದಿನ ಕಾರ್ಯ ನಿರ್ವಹಿಸಲು ಸಾಧ್ಯವಾಗದಿರುವಾಗ ಒಂದಕ್ಕಿಂತ ಹೆಚ್ಚಿನ ಪರೀಕ್ಷಾ ಮಂಡಳಿ ರಚಿಸಲು ಅವಕಾಶ ಇರುವುದು.
  3. ಪರೀಕ್ಷಾ ಮಂಡಳಿಯಲ್ಲಿ ಆಂತರಿಕ ಹಾಗೂ ಬಾಹ್ಯ ಪ್ರಾಧ್ಯಾಪಕರು ಸದಸ್ಯರಾಗಿರುತ್ತಾರೆ.

ಘಟಿಕೋತ್ಸವ ಪ್ರಮಾಣಪತ್ರ

ಶೀರ್ಷಿಕೆ : ಎಂ.ಮ್ಯೂಜಿಕ್ (ಹಿಂದೂಸ್ತಾನಿ ಗಾಯನ)

ಎಂ.ಮ್ಯೂಜಿಕ್ ಕೋರ್ಸ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ ಘಟಿಕೋತ್ಸವ ಪ್ರಮಾಣಪತ್ರ ಪಡೆಯಬಹುದು.

ಅಂಕಪಟ್ಟಿ

  1. ಅಂಕಪಟ್ಟಿಯ ಶೀರ್ಷಿಕೆ – ಎಂ.ಮ್ಯೂಜಿಕ್ (ಹಿಂದೂಸ್ತಾನಿ ಗಾಯನ)
  2. ವಿಶ್ವವಿದ್ಯಾಲಯವು ನೀಡುವ ಅಂಕಪಟ್ಟಿಯು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಇರುತ್ತದೆ.
  3. ಎಂ.ಮ್ಯೂಜಿಕ್ ಕೋರ್ಸ್‌ನ ಅಂಕಪಟ್ಟಿಯ ಜೊತೆಗೆ ತೇರ್ಗಡೆ ಹೊಂದಿದ ಪ್ರಮಾಣಪತ್ರವನ್ನು (ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ) ನೀಡಲಾಗುತ್ತದೆ.
  4. ಘಟಿಕೋತ್ಸವ ಪ್ರಮಾಣ ಪತ್ರ (ಅoಟಿvoಛಿಚಿಣioಟಿ ಅeಡಿಣiಜಿiಛಿಚಿಣe)ವನ್ನು ಪದವಿ ಪೂರೈಸಿದ ವಿದ್ಯಾರ್ಥಿಯು ಶುಲ್ಕ ಪಾವತಿಸಿ ಪಡೆಯಬಹುದು.

ಶುಲ್ಕಗಳು

ವಿಶ್ವವಿದ್ಯಾಲಯದ ನಿಯಮಾನುಸಾರ

ಹಣಕಾಸು ವ್ಯವಹಾರ

ವಿಶ್ವವಿದ್ಯಾಲಯದ ಎಲ್ಲಾ ಹಣಕಾಸು ವ್ಯವಹಾರಗಳು ’ಹಣಕಾಸು ಅಧಿಕಾರಿಗಳು ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-೫೮೩ ೨೭೬, ಹೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ’ ಇವರ ಹೆಸರಿನಲ್ಲಿ ಇರುತ್ತವೆ.

ಶೈಕ್ಷಣಿಕ ವರ್ಷದ ವೇಳಾಪಟ್ಟಿ

ವಿಶ್ವವಿದ್ಯಾಲಯದ ನಿಯಮಾನುಸಾರ

ಫಲಿತಾಂಶಗಳ ದರ್ಜೆವಾರು

ಸಾಮಾನ್ಯ ದರ್ಜೆ : ಶೇ. ೩೫ ರಿಂದ ಶೇ. ೫೪ ರವರೆಗೆ

ದ್ವಿತೀಯ ದರ್ಜೆ : ಶೇ. ೫೫ ರಿಂದ ಶೇ. ೫೯ರವರೆಗೆ

ಪ್ರಥಮ ದರ್ಜೆ : ಶೇ. ೬೦ ರಿಂದ ಶೇ. ೭೦ರವರೆಗೆ

ಉನ್ನತ ಶ್ರೇಣಿ (Distinction): ಶೇ. ೭೧ಕ್ಕಿಂತ ಮೇಲ್ಪಟ್ಟಿದ್ದು.