(ಪ್ರವೇಶಾರ್ಹತೆ : ಯಾವುದೇ ಪದವಿ/ SSLC)

ಕ್ರ ಸಂ  ಶಿಕ್ಷಣಕ್ರಮ ಸಂಖ್ಯೆ                                                            ಕೋಡ್

೧.     ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ                            ೦೪

೨.     ಪತ್ರಿಕೋದ್ಯಮ ಅಧ್ಯಯನ                                                     ೦೮

೩.     ನಾಟಕ ಕಲೆ                                                                       ೧೧

೪.     ಭಾಷಾಂತರ ಅಧ್ಯಯನ                                                        ೧೪

೫.     ಕನ್ನಡ ಸಾಹಿತ್ಯ                                                                  ೧೬

೬.     ಶಾಸನಶಾಸ್ತ್ರ ಅಧ್ಯಯನ                                                     ೧೯

೭.     ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಕಂಪ್ಯೂಟರ್ ಡಿಪ್ಲೊಮ)   ೨೩

 

ಸೂಚನೆ: ಪ್ರತಿ ಶಿಕ್ಷಣಕ್ರಮದಲ್ಲಿ ಕನಿಷ್ಟ ೧೦ ಅಭ್ಯರ್ಥಿಗಳ ಪ್ರವೇಶವೂ ಸಾಧ್ಯವಾಗದಿದ್ದಲ್ಲಿ ಪ್ರವೇಶ ಪಡೆದ ಅಂತಹ ಅಭ್ಯರ್ಥಿಗಳು ತಮ್ಮ ಶಿಕ್ಷಣಕ್ರಮವನ್ನು ಸಂಪರ್ಕ ಕಾರ್ಯಕ್ರಮದ ಪೂರ್ವದಲ್ಲಿಯೇ ಬದಲಾಯಿಸಿಕೊಂಡು ಸ್ವಯಂಕಲಿಕಾ ಸಾಮಗ್ರಿಯನ್ನು ಬದಲಾಯಿಸಿ ಕೊಳ್ಳಬಹುದು ಇಲ್ಲವೇ ಸ್ವಯಂಕಲಿಕಾ ಸಾಮಗ್ರಿ ಹಿಂದಿರುಗಿಸಿ ಪ್ರವೇಶವನ್ನು ರದ್ದುಗೊಳಿಸಿಕೊಂಡು ಅರ್ಜಿ ಶುಲ್ಕ ಹೊರತುಪಡಿಸಿ ಪಾವತಿಸಿದ ಇತರ ಎಲ್ಲ ಶುಲ್ಕವನ್ನು ಹಿಂಪಡೆಯಬಹುದು.

 

೨.೩.೧ ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕೋರ್ಸ್ ಮತ್ತು ನಿಯಮಗಳು

ಕೋರ್ಸ್       ಕೋರ್ಸಿನ ಶೀರ್ಷಿಕೆ                                         ಅಂಕಗಳು

ಸಂಕೇತ                                                        ಶ್ರೇಯಾಂಕ     ಲಿಖಿತ      ಆಂತರಿಕ       ಒಟ್ಟು

೦೪A   ೧. ಪುರಾತತ್ವ                                           ೬              ೯೦         ೧೦            ೧೦೦

೦೪B   ೨. ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ            ೬             ೯೦         ೧೦            ೧೦೦

೦೪C   ೩. ಪ್ರವಾಸೋದ್ಯಮ ಪರಿಚಯ                     ೬             ೯೦          ೧೦            ೧೦೦

೦೪D   ೪. ಪ್ರವಾಸೋದ್ಯಮ                                  ೬            ೯೦          ೧೦            ೧೦೦

೦೪E   ೫.ಅ. ಸಂಪ್ರಬಂಧ                                     ೩             –             ೫೦             ೫೦

೫.ಆ. ಪ್ರವಾಸ ವರದಿ                                    ೩             –              ೫೦          ೫೦

ಒಟ್ಟು          ೩೦          ೩೬೦        ೧೪೦         ೫೦೦

ಸಂಪ್ರಬಂಧ, ಪ್ರವಾಸ ವರದಿ

೦೪E ಕೋರ್ಸು(ಪತ್ರಿಕೆ) ಸಂಪ್ರಬಂಧ ಮತ್ತು ಪ್ರವಾಸ ವರದಿಯನ್ನು ಒಳಗೊಂಡಿರುತ್ತದೆ. ಸ್ನಾತಕೋತ್ತರ ಡಿಪ್ಲೊಮ ಅಭ್ಯರ್ಥಿಗಳು ಕನಿಷ್ಠ ೩೦ ಪುಟಗಳ ಸಂಪ್ರಬಂಧ ಮತ್ತು ಕನಿಷ್ಠ ೩೦ ಪುಟಗಳ ಪ್ರವಾಸ ವರದಿಯನ್ನು ಸಲ್ಲಿಸುವುದು ಕಡ್ಡಾಯ. ಈ ಸಂಪ್ರಬಂಧ ಮತ್ತು ಪ್ರವಾಸ ವರದಿಗಳು ಎ೪ ಅಳತೆಯ ಪ್ರತಿ ಹಾಳೆಯಲ್ಲಿ ೩೦ ಸಾಲುಗಳನ್ನು ಡಿಟಿಪಿ ಮಾಡಿರಬೇಕು. ಒಟ್ಟಾರೆ ೬೦ ಪುಟಗಳ ವರದಿಯನ್ನು ಒಂದರಲ್ಲೇ ಬೈಂಡ್ ಮಾಡಿಸಿ ವಾರ್ಷಿಕ ಪರೀಕ್ಷೆಯ ಮುನ್ನ ತಪ್ಪದೇ ನಿಗದಿತ ದಿನಾಂಕದೊಳಗೆ ಮೌಲ್ಯಮಾಪನಕ್ಕಾಗಿ ೨ ಪ್ರತಿಗಳಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಮೂಲಕ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು.

ಡಿಪ್ಲೊಮ ಅಭ್ಯರ್ಥಿಗಳು ಕನಿಷ್ಠ ೨೦ ಪುಟಗಳ ಸಂಪ್ರಬಂಧ ಮತ್ತು ಕನಿಷ್ಠ ೨೦ ಪುಟಗಳ ಪ್ರವಾಸ ವರದಿಯನ್ನು ಸಲ್ಲಿಸುವುದು ಕಡ್ಡಾಯ. ಈ ಸಂಪ್ರಬಂಧ ಮತ್ತು ಪ್ರವಾಸ ವರದಿಗಳು ಎ೪ ಅಳತೆಯ ಪ್ರತಿ ಹಾಳೆಯಲ್ಲಿ ೩೦ ಸಾಲುಗಳನ್ನು ಡಿಟಿಪಿ ಮಾಡಿರಬೇಕು. ಒಟ್ಟಾರೆ ೪೦ ಪುಟಗಳ ವರದಿಯನ್ನು ಒಂದರಲ್ಲೇ ಬೈಂಡ್ ಮಾಡಿಸಿ ವಾರ್ಷಿಕ ಪರೀಕ್ಷೆಯ ಮುನ್ನ ತಪ್ಪದೇ ಮೌಲ್ಯಮಾಪನಕ್ಕಾಗಿ ೨ ಪ್ರತಿಗಳಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಮೂಲಕ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು.

ದೂರಶಿಕ್ಷಣ ನಿರ್ದೇಶನಾಲಯದ ಮಾರ್ಗದರ್ಶನದ ಮೇರೆಗೆ ಅಭ್ಯರ್ಥಿಯು ಕರ್ನಾಟಕದ ಸ್ಮಾರಕ, ಪ್ರಕೃತಿದತ್ತ ಪ್ರವಾಸಿತಾಣ, ಸಾಹಸ ಕ್ರೀಡೆ ಮುಂತಾದ ಯಾವುದಾದರೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರಕಾರ್ಯ ಮಾಡಿ ಅಧ್ಯಯನ ಕೈಗೊಂಡು ಸಂಪ್ರಬಂಧ ರಚಿಸಬೇಕು.

ಸಂಪ್ರಬಂಧ ಮತ್ತು ಪ್ರವಾಸ ವರದಿಗೆ ಸಂಬಂದಿsಸಿದ ವಿಷಯವನ್ನು ಸಂಪರ್ಕ ಕಾರ್ಯಕ್ರಮದ ಒಳಗಾಗಿ ಅಥವಾ ಸಂಪರ್ಕ ಕಾರ್ಯಕ್ರಮ ಸಂದರ್ಭದಲ್ಲಿ ತಜ್ಞ/ಬೋಧಕರೊಂದಿಗೆ ಅಥವಾ ಅಧ್ಯಯನ ಮಂಡಳಿಯವರೊಂದಿಗೆ ಚರ್ಚಿಸಿ ಖಚಿತಪಡಿಸಿಕೊಂಡು ದೂರಶಿಕ್ಷಣಕ್ಕೆ ತಿಳಿಸಬೇಕು.

ಪತ್ರಿಕೋದ್ಯಮ ಅಧ್ಯಯನ ಕೋರ್ಸ್ ಮತ್ತು ನಿಯಮಗಳು

ಕೋರ್ಸ್       ಕೋರ್ಸಿನ ಶೀರ್ಷಿಕೆ                                        ಅಂಕಗಳು

ಸಂಕೇತ                                                 ಶ್ರೇಯಾಂಕ  ಲಿಖಿತ ಆಂತರಿಕ ಒಟ್ಟು

೦೮A   ೧. ಸಮೂಹ ಮಾಧ್ಯಮಗಳ ಪರಿಚಯ                    ೬     ೯೦    ೧೦    ೧೦೦

೦೮B   ೨. ವರದಿಗಾರಿಕೆ                                    ೬     ೯೦    ೧೦    ೧೦೦

೦೮C   ೩. ಸುದ್ದಿ ಸಂಪಾದನೆ                                ೬     ೯೦    ೧೦    ೧೦೦

೦೮D   ೪. ಅಭಿವೃದ್ಧಿ ಪತ್ರಿಕೋದ್ಯಮ                           ೬     ೯೦    ೧೦    ೧೦೦

೦೮E   ೫. ಪ್ರಾಯೋಗಿಕ

ಅ. ಪತ್ರಿಕೆ ಪ್ರಕಟಣೆ                                 ೨     –      ೨೫    ೨೫

ಆ. ನಿಯತಕಾಲಿಕೆ ಪ್ರಕಟಣೆ                            ೨     –      ೨೫    ೨೫

ಇ. ಸಂಪಾದನೆ                                     ೧     –      ೨೫    ೨೫

ಈ. ಮೌಖಿಕ ಪರೀಕ್ಷೆ                                ೧     –      ೨೫    ೨೫

ಒಟ್ಟು   ೩೦    ೩೬೦   ೧೪೦   ೫೦೦

ಪ್ರಾಯೋಗಿಕ

೦೮E ಕೋರ್ಸು(ಪತ್ರಿಕೆ) ಪ್ರಾಯೋಗಿಕವಾಗಿದ್ದು ಕಡ್ಡಾಯವಾಗಿರುತ್ತದೆ. ಇದು ಪತ್ರಿಕೆ ಪ್ರಕಟಣೆ, ನಿಯತಕಾಲಿಕೆ ಪ್ರಕಟಣೆ, ಸಂಪಾದನೆ ಮತ್ತು ಮೌಖಿಕ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಡಿಪ್ಲೊಮ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳು ಸರಳವಾಗಿರುವವು. ಸಂಪರ್ಕ ಕಾರ್ಯಕ್ರಮದ ಸಂದರ್ಭದಲ್ಲಿ ಈ ಎಲ್ಲ ಪ್ರಯೋಗಗಳು ಜರುಗುವವು.

 

 

೩.೩.೩. ನಾಟಕ ಕಲೆ ಕೋರ್ಸ್ ಮತ್ತು ನಿಯಮಗಳು

ಕೋರ್ಸ್       ಕೋರ್ಸಿನ ಶೀರ್ಷಿಕೆ                                 ಅಂಕಗಳು

ಸಂಕೇತ                                          ಶ್ರೇಯಾಂಕ       ಲಿಖಿತ ಆಂತರಿಕ ಒಟ್ಟು

೧೧A   ೧.     ಆಂಗಿಕ ಮತ್ತು ವಾಚಿಕ (ದೇಹ ಮತ್ತು ಧ್ವನಿ)         ೬     ೯೦    ೧೦    ೧೦೦

೧೧B   ೨. ಆಹಾರ್ಯ (ತಂತ್ರಕೌಶಲ)                           ೬     ೯೦    ೧೦    ೧೦೦

೧೧C   ೩. ಸಾತ್ವಿಕ (ಸೈದ್ಧಾಂತಿಕ ಚಿಂತನೆಗಳು)                  ೬     ೯೦    ೧೦    ೧೦೦

೧೧ಆ   ೪. ಕನ್ನಡ ಸಾಹಿತ್ಯ ಮತ್ತು ನಾಟಕ ಪ್ರಜ್ಞೆ                  ೬     ೯೦    ೧೦    ೧೦೦

೧೧D   ೫.ಅ. ಪ್ರಯೋಗ                                    ೨     –      ೫೦    ೫೦

೫.ಆ. ಮೌಖಿಕ ಪರೀಕ್ಷೆ                               ೨     –      ೨೫    ೨೫

೫.ಇ. ಸಂಪ್ರಬಂಧ                                   ೨     –      ೨೫    ೨೫

ಒಟ್ಟು ೩೦    ೩೬೦   ೧೪೦   ೫೦೦

ಪ್ರಯೋಗ, ಸಂಪ್ರಬಂಧ ವರದಿ

೧೧E ಕೋರ್ಸು(ಪತ್ರಿಕೆ) ೫೦ ಅಂಕಗಳ ಪ್ರಯೋಗ ಮತ್ತು ಎ೪ ಅಳತೆಯ ಕನಿಷ್ಠ ೧೫ ಮತ್ತು ೨೫ ಪುಟಗಳ ೨೫ ಅಂಕಗಳ ಸಂಪ್ರಬಂಧ ಹಾಗೂ ೨೫ ಅಂಕಗಳ ಮೌಖಿಕ ಪರೀಕ್ಷೆಯನ್ನು ಒಳಗೊಂಡಿರುತ್ತದೆ.

ದೂರಶಿಕ್ಷಣ ನಿರ್ದೇಶನಾಲಯದ ಮಾರ್ಗದರ್ಶನದ ಮೇರೆಗೆ ಅಭ್ಯರ್ಥಿಯು ವಿವಿಧ ನಾಟಕಗಳಿಗೆ ಸಂಬಂದಿsಸಿದಂತೆ ವಿಷಯಗಳನ್ನು ಪ್ರಯೋಗ ಮತ್ತು ಸಂಪ್ರಬಂಧ ರಚನೆಗೆ ಆಯ್ಕೆ ಮಾಡಿಕೊಳ್ಳಬೇಕು. ನಾಟಕ ಕಲೆ ಅಧ್ಯಯನವು ಮುಖ್ಯವಾಗಿ ಬಹುಶಿಸ್ತೀಯ ಅಧ್ಯಯನ ಎಂಬುದನ್ನು ಗಮನಿಸಿ, ಯಾವುದೇ eನಕ್ಷೇತ್ರಕ್ಕೆ ಸಂಬಂದಿsಸಿದ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಕೈಗೊಳ್ಳಬಹುದು.

ಸಂಪ್ರಬಂಧ ಮತ್ತು ಪ್ರಯೋಗ ವಿಷಯಕ್ಕೆ ಸಂಬಂದಿsಸಿದ ವಿಷಯವನ್ನು ಸಂಪರ್ಕ ಕಾರ್ಯಕ್ರಮದ ಒಳಗಾಗಿ ಅಥವಾ ಸಂಪರ್ಕ ಕಾರ್ಯಕ್ರಮ ಸಂದರ್ಭದಲ್ಲಿ ತಜ್ಞ/ಬೋಧಕರೊಂದಿಗೆ ಅಥವಾ ಅಧ್ಯಯನ ಮಂಡಳಿಯವರೊಂದಿಗೆ ಚರ್ಚಿಸಿ ಖಚಿತಪಡಿಸಿಕೊಂಡು ದೂರಶಿಕ್ಷಣ ನಿರ್ದೇಶನಾಲಯಕ್ಕೆ ತಿಳಿಸಬೇಕು. ಸಂಪ್ರಬಂಧದ ಎ೪ ಅಳತೆಯ ಡಿಟಿಪಿ ಮಾಡಿದ ಕನಿಷ್ಠ ೨೫ ಪುಟಗಳ ವರದಿಯನ್ನು ಸ್ನಾತಕೋತ್ತರ ಡಿಪ್ಲೊಮ ಮತ್ತು ೧೫ ಪುಟಗಳ ವರದಿಯನ್ನು ಡಿಪ್ಲೊಮ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯ ಮುನ್ನ ತಪ್ಪದೇ ಮೌಲ್ಯಮಾಪನಕ್ಕಾಗಿ ೨ ಪ್ರತಿಗಳಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಮೂಲಕ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ಸಂಪರ್ಕ ಕಾರ್ಯಕ್ರಮ ಸಂದರ್ಭದಲ್ಲಿಯೇ ಪ್ರಯೋಗ ಮತ್ತು ಮೌಖಿಕ ಪರೀಕ್ಷೆಗಳು ಜರುಗುವುವು.

 

 

೩.೩.೪. ಭಾಷಾಂತರ ಅಧ್ಯಯನ ಕೋರ್ಸ್ ಮತ್ತು ನಿಯಮಗಳು

ಕೋರ್ಸ್       ಕೋರ್ಸಿನ ಶೀರ್ಷಿಕೆ                                 ಅಂಕಗಳು

ಸಂಕೇತ                                          ಶ್ರೇಯಾಂಕ       ಲಿಖಿತ ಆಂತರಿಕ ಒಟ್ಟು

೧೪A   ೧. ಭಾಷಾಂತರ ಅಧ್ಯಯನ ಸಿದ್ಧಾಂತ ಮತ್ತು ವಾಗ್ವಾದಗಳು    ೬     ೯೦    ೧೦    ೧೦೦

೧೪B   ೨. ಭಾರತ, ಬಹುಭಾಷಿಕತೆ, ಭಾಷಾಂತರ                  ೬     ೯೦    ೧೦    ೧೦೦

೧೪C   ೩. ಮಾಧ್ಯಮ ಮತ್ತು ಭಾಷಾಂತರ                       ೬     ೯೦    ೧೦    ೧೦೦

೧೪D   ೪. ಭಾಷಾಂತರ ವಿವಿಧ ನೆಲೆಗಳು                       ೬     ೯೦    ೧೦    ೧೦೦

೧೪E   ೫ ಪ್ರಾಯೋಗಿಕ ಭಾಷಾಂತರ

೫.ಅ. ಯೋಜನೆ                                   ೨     –      ೬೦    ೬೦

೫.ಆ. ಯೋಜನೆ ವಿಶ್ಲೇಷಣೆ                                   ೨     –      ೨೦    ೨೦

೫.ಇ. ಮೌಖಿಕ ಪರೀಕ್ಷೆ                               ೨     –      ೨೦    ೨೦

ಒಟ್ಟು ೩೦    ೩೬೦   ೧೪೦   ೫೦೦

ರಾಜ್ಯ ಮತ್ತು ರಾಷ್ಟ್ರದ ಗಡಿಗಳನ್ನು ಮೀರಿ ಇಂದಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕ್ರಿಯೆಗಳು ಸಾಗುತ್ತಿವೆ. ಈ ಸಂದರ್ಭದಲ್ಲಿ ಹಲವು ಭಾಷೆ, ಸಂಸ್ಕೃತಿಗಳ ರಾಷ್ಟ್ರ, ರಾಜ್ಯಗಳ ನಡುವೆ ಸಂಪರ್ಕಕೊಂಡಿಯಾಗಿ ಭಾಷಾಂತರ ಕ್ರಿಯೆ ಕೆಲಸ ಮಾಡುತ್ತದೆ. ದೈನಂದಿನ ವ್ಯವಹಾರಗಳ ನಡುವೆಯೂ ಅಪ್ರಜ್ಞಾಪೂರ್ವಕವಾಗಿ ಭಾಷಾಂತರ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಈ ಪ್ರಕ್ರಿಯೆಯನ್ನು ಕುರಿತು ಗಮನಹರಿಸದೇ ಇರುವುದರಿಂದ ಅನೇಕ ವೇಳೆ ಭಾಷಾಂತರ ಕ್ರಿಯೆ ತನ್ನ ಪೋಷಕ ಉದ್ದೇಶಗಳ ಗುರಿಯತ್ತ ತಲುಪುವುದೇ ಇಲ್ಲ. ಹಾಗಾಗಿ ಇಂತಹ ಭಾಷಾಂತರ ಪ್ರಕ್ರಿಯೆಗಳನ್ನು ಪ್ರಜ್ಞಾಪೂರ್ವಕವಾಗಿ ಗುರುತಿಸಿ ಆ ಮೂಲಕ ಭಾಷಾಂತರ ಕ್ರಿಯೆಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವತ್ತ ಗಮನಹರಿಸುವುದು ಅಗತ್ಯವಿದೆ. ಹಲವು ಭಾಷೆಗಳ ನಡುವೆ ಸಂವಹನ ಏರ್ಪಡಬೇಕಾದ ಇಂದಿನ ದಿನಗಳಲ್ಲಿ ಭಾಷಾಂತರ ಪ್ರಕ್ರಿಯೆಗಳಿಗೆ ಅತ್ಯಂತ ಪ್ರಾಶಸ್ತ್ಯವಿದೆ. ಭಾಷಾಂತರ ಅಧ್ಯಯನ ಡಿಪ್ಲೊಮಾವನ್ನು ಪಡೆದು ಭಾಷಾಂತರ ಕೆಲಸ ನಿರ್ವಹಿಸಲು ಸಮರ್ಥರಾಗುವ ಅಭ್ಯರ್ಥಿಗಳಿಗೆ ಕೇಂದ್ರ, ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದ ಅವಕಾಶ ವಿಪುಲವಾಗಿದೆ. ಹಾಗೆಯೇ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುವ ಆಸಕ್ತರು ಹಾಗೂ ಭಾಷಾಂತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವವರನ್ನು ದೃಷ್ಟಿಯಲ್ಲಿರಿಸಿಕೊಂಡು ಭಾಷಾಂತರ ಅಧ್ಯಯನ ಡಿಪ್ಲೊಮಾವನ್ನು ಆರಂಭಿಸಿದೆ.

ಪ್ರಯೋಗ, ಸಂಪ್ರಬಂಧ ವರದಿ

ಈ ಕೋರ್ಸ್‌ನಲ್ಲಿ ಐದು ಪತ್ರಿಕೆಗಳು ಇರುತ್ತವೆ. ಪ್ರತಿ ಪತ್ರಿಕೆಗೆ ೧೦೦ ಅಂಕಗಳು. ಇವುಗಳಲ್ಲಿ ನಾಲ್ಕು ಪತ್ರಿಕೆಗಳಿಗೆ ೮೦ ಅಂಕಗಳ ಲಿಖಿತ ಪರೀಕ್ಷೆ ಮತ್ತು ೨೦ ಅಂಕಗಳ ಮನೆಗೆಲಸ ಇರುತ್ತದೆ. ಪಾಠಗಳೊಂದಿಗೆ ಕಳಿಸುವ ಅಭ್ಯಾಸಗಳನ್ನು ಪೂರ್ಣಗೊಳಿಸಿ ಹಿಂತಿರುಗಿಸುವುದು, ನೇರ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹಾಗೂ ನಿಗದಿತ ಚಟುವಟಿಕೆಗಳಲ್ಲಿ ಕ್ರಮಬದ್ಧವಾಗಿ ತೊಡಗಿಸಿಕೊಳ್ಳುವುದು-ಇವು ಆಂತರಿಕ ಮೌಲ್ಯಮಾಪನಕ್ಕೆ ಆಧಾರಗಳಾಗಿರುತ್ತವೆ. ಐದನೆಯ ಪತ್ರಿಕೆಯಲ್ಲಿ ಸಂಪ್ರಬಂಧಗಳನ್ನು ರಚಿಸಿಕೊಡಬೇಕಾಗಿರುತ್ತದೆ. ಭಾಷಾಂತರ ಯೋಜನೆಗೆ ೬೦ ಅಂಕಗಳು, ಯೋಜನೆಯ ವಿಶ್ಲೇಷಣೆಗೆ ೨೦ ಅಂಕಗಳು ಹಾಗೂ ಮೌಖಿಕ ಪರೀಕ್ಷೆಗೆ ೨೦ ಅಂಕಗಳು ಹೀಗೆ ಒಟ್ಟು ೧೦೦ ಅಂಕಗಳು ಇರುತ್ತವೆ.

 

 

೩.೩.೫ ಕನ್ನಡ ಸಾಹಿತ್ಯ ಕೋರ್ಸ್ ಮತ್ತು ನಿಯಮಗಳು

ಕೋರ್ಸ್ ಕೋರ್ಸಿನ ಶೀರ್ಷಿಕೆ                                        ಅಂಕಗಳು

ಸಂಕೇತ                                          ಶ್ರೇಯಾಂಕ     ಲಿಖಿತ ಆಂತರಿಕ       ಒಟ್ಟು

೧೬A   ೧. ಚಂಪೂ ಸಾಹಿತ್ಯ                                 ೬     ೯೦    ೧೦    ೧೦೦

೧೬B   ೨. ಭಕ್ತಿ ಸಾಹಿತ್ಯ                                          ೬     ೯೦    ೧೦    ೧೦೦

೧೬C   ೩. ಮಧ್ಯಕಾಲೀನ ಕನ್ನಡ ಸಾಹಿತ್ಯ                       ೬     ೯೦    ೧೦    ೧೦೦

೧೬D   ೪. ಸಾಹಿತ್ಯಧ್ಯಯನ ಸಾಮಗ್ರಿ                          ೬     ೯೦    ೧೦    ೧೦೦

೧೬E   ೫. ಅ ಸಂಪ್ರಬಂಧ                                  ೩     –      ೫೦    ೫೦

೫. ಆ ವಿಷಯ/ವ್ಯಕ್ತಿ ಅಧ್ಯಯನ ವರದಿ                    ೩     –      ೫೦    ೫೦

ಒಟ್ಟು   ೩೦    ೩೬೦   ೧೪೦   ೫೦೦

ಸಂಪ್ರಬಂಧ ವರದಿ

೧೬E ಕೋರ್ಸು(ಪತ್ರಿಕೆ) ಸಂಪ್ರಬಂಧ ಮತ್ತು ವಿಷಯ/ವ್ಯಕ್ತಿ ಅಧ್ಯಯನ ವರದಿಯನ್ನು ಒಳಗೊಂಡಿರುತ್ತದೆ. ಸ್ನಾತಕೋತ್ತರ ಡಿಪ್ಲೊಮ ಅಭ್ಯರ್ಥಿಗಳು ಕನಿಷ್ಠ ೩೦ ಪುಟಗಳ ಸಂಪ್ರಬಂಧ ಮತ್ತು ಕನಿಷ್ಠ ೩೦ ಪುಟಗಳ ವಿಷಯ/ವ್ಯಕ್ತಿ ಅಧ್ಯಯನ ವರದಿಯನ್ನು ಸಲ್ಲಿಸುವುದು ಕಡ್ಡಾಯ. ಈ ಸಂಪ್ರಬಂಧ ಮತ್ತು ವಿಷಯ/ವ್ಯಕ್ತಿ ಅಧ್ಯಯನ ವರದಿಗಳು ಎ೪ ಅಳತೆಯ ಪ್ರತಿ ಹಾಳೆಯಲ್ಲಿ ೩೦ ಸಾಲುಗಳನ್ನು ಡಿಟಿಪಿ ಮಾಡಿರಬೇಕು. ಒಟ್ಟಾರೆ ೬೦ ಪುಟಗಳ ಬರವಣಿಗೆಯನ್ನು ಒಂದರಲ್ಲೇ ಬೈಂಡ್ ಮಾಡಿಸಿ ವಾರ್ಷಿಕ ಪರೀಕ್ಷೆಯ ಮುನ್ನ ತಪ್ಪದೇ ಮೌಲ್ಯಮಾಪನಕ್ಕಾಗಿ ೨ ಪ್ರತಿಗಳಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಮೂಲಕ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು.

ಡಿಪ್ಲೊಮ ಅಭ್ಯರ್ಥಿಗಳು  ಕನಿಷ್ಠ ೨೦ ಪುಟಗಳ ಸಂಪ್ರಬಂಧ ಮತ್ತು ಕನಿಷ್ಠ ೨೦ ಪುಟಗಳ ವಿಷಯ/ವ್ಯಕ್ತಿ ಅಧ್ಯಯನ ವರದಿಯನ್ನು ಸಲ್ಲಿಸುವುದು ಕಡ್ಡಾಯ. ಈ ಸಂಪ್ರಬಂಧ ಮತ್ತು ವಿಷಯ/ವ್ಯಕ್ತಿ ಅಧ್ಯಯನ ವರದಿಗಳು ಎ೪ ಅಳತೆಯ ಪ್ರತಿ ಹಾಳೆಯಲ್ಲಿ ೩೦ ಸಾಲುಗಳನ್ನು ಡಿಟಿಪಿ ಮಾಡಿರಬೇಕು. ಒಟ್ಟಾರೆ ೪೦ ಪುಟಗಳ ಬರವಣಿಗೆಯನ್ನು ಒಂದರಲ್ಲೇ ಬೈಂಡ್ ಮಾಡಿಸಿ ವಾರ್ಷಿಕ ಪರೀಕ್ಷೆಯ ಮುನ್ನ ತಪ್ಪದೇ ಮೌಲ್ಯಮಾಪನಕ್ಕಾಗಿ ೨ ಪ್ರತಿಗಳಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಮೂಲಕ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ದೂರಶಿಕ್ಷಣ ನಿರ್ದೇಶನಾಲಯದ ಮಾರ್ಗದರ್ಶನದ ಮೇರೆಗೆ ಅಭ್ಯರ್ಥಿಯು ಸಮಾಜದ ವಿವಿಧ ಕ್ಷೇತ್ರಗಳಿಗೆ ಸಂಬಂದಿsಸಿದಂತೆ ಕನ್ನಡ ಸಾಹಿತ್ಯ ವಿಷಯಗಳನ್ನು ಸಂಪ್ರಬಂಧ ರಚನೆಗೆ ಆಯ್ಕೆ ಮಾಡಿಕೊಳ್ಳಬೇಕು.

ಸಂಪ್ರಬಂಧ ಮತ್ತು ವಿಷಯ/ವ್ಯಕ್ತಿ ಅಧ್ಯಯನ ವಿಷಯಕ್ಕೆ ಸಂಬಂದಿsಸಿದ ವಿಷಯವನ್ನು ಸಂಪರ್ಕ ಕಾರ್ಯಕ್ರಮದ ಒಳಗಾಗಿ ಅಥವಾ ಸಂಪರ್ಕ ಕಾರ್ಯಕ್ರಮ ಸಂದರ್ಭದಲ್ಲಿ ತಜ್ಞ/ಬೋಧಕರೊಂದಿಗೆ ಅಥವಾ ಅಧ್ಯಯನ ಮಂಡಳಿಯವ ರೊಂದಿಗೆ ಚರ್ಚಿಸಿ ಖಚಿತಪಡಿಸಿಕೊಂಡು ದೂರಶಿಕ್ಷಣ ನಿರ್ದೇಶನಾಲಯಕ್ಕೆ ತಿಳಿಸಬೇಕು.

 

೩.೩.೬ ಶಾಸನಶಾಸ್ತ್ರ ಅಧ್ಯಯನ ಕೋರ್ಸ್ ಮತ್ತು ನಿಯಮಗಳು

ಕೋರ್ಸ್       ಕೋರ್ಸಿನ ಶೀರ್ಷಿಕೆ                           ಅಂಕಗಳು

ಸಂಕೇತ                                   ಶ್ರೇಯಾಂಕ     ಲಿಖಿತ ಆಂತರಿಕ ಒಟ್ಟು

೧೯ಂ  ೧. ಶಾಸನಶಾಸ್ತ್ರ ಲಿಪಿಶಾಸ್ತ್ರ ಪರಿಚಯ             ೬     ೯೦    ೧೦    ೧೦೦

೧೯ಃ  ೨. ಕನ್ನಡ ಲಿಪಿಯ ಹುಟ್ಟು ಮತ್ತು ಬೆಳವಣಿಗೆ         ೬     ೯೦    ೧೦    ೧೦೦

೧೯ಅ   ೩. ಕರ್ನಾಟಕ ಶಾಸನಗಳ ಪರಿಚಯ               ೬     ೯೦    ೧೦    ೧೦೦

೧೯ಆ   ೪. ಆಯ್ದ ಶಾಸನಗಳ ಪಠ್ಯ                      ೬     ೯೦    ೧೦    ೧೦೦

೧೯ಇ   ೫.ಅ. ಸಂಪ್ರಬಂಧ                            ೩     –      ೫೦    ೫೦

೫.ಆ. ವಿಷಯ/ವ್ಯಕ್ತಿ ಅಧ್ಯಯನ ವರದಿ                     ೩     –      ೫೦    ೫೦

ಒಟ್ಟು   ೩೦    ೩೬೦   ೧೪೦   ೫೦೦

ಸಂಪ್ರಬಂಧ ವರದಿ

೧೯E ಕೋರ್ಸು(ಪತ್ರಿಕೆ) ಸಂಪ್ರಬಂಧ ಮತ್ತು ವಿಷಯ/ವ್ಯಕ್ತಿ ಅಧ್ಯಯನ ವರದಿಯನ್ನು ಒಳಗೊಂಡಿರುತ್ತದೆ. ಸ್ನಾತಕೋತ್ತರ ಡಿಪ್ಲೊಮ ಅಭ್ಯರ್ಥಿಗಳು ಕನಿಷ್ಠ ೩೦ ಪುಟಗಳ ಸಂಪ್ರಬಂಧ ಮತ್ತು ಕನಿಷ್ಠ ೩೦ ಪುಟಗಳ ವಿಷಯ/ವ್ಯಕ್ತಿ ಅಧ್ಯಯನ ವರದಿಯನ್ನು ಸಲ್ಲಿಸುವುದು ಕಡ್ಡಾಯ. ಈ ಸಂಪ್ರಬಂಧ ಮತ್ತು ವಿಷಯ/ವ್ಯಕ್ತಿ ಅಧ್ಯಯನ ವರದಿಗಳು ಎ೪ ಅಳತೆಯ ಪ್ರತಿ ಹಾಳೆಯಲ್ಲಿ ೩೦ ಸಾಲುಗಳನ್ನು ಡಿಟಿಪಿ ಮಾಡಿರಬೇಕು. ಒಟ್ಟಾರೆ ೬೦ ಪುಟಗಳ ವರದಿಯನ್ನು ಒಂದರಲ್ಲೇ ಬೈಂಡ್ ಮಾಡಿಸಿ ವಾರ್ಷಿಕ ಪರೀಕ್ಷೆಯ ಮುನ್ನ ತಪ್ಪದೇ ಮೌಲ್ಯಮಾಪನಕ್ಕಾಗಿ ೨ ಪ್ರತಿಗಳಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಮೂಲಕ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು.

ಡಿಪ್ಲೊಮ ಅಭ್ಯರ್ಥಿಗಳು ಕನಿಷ್ಠ ೨೦ ಪುಟಗಳ ಸಂಪ್ರಬಂಧ ಮತ್ತು ಕನಿಷ್ಠ ೨೦ ಪುಟಗಳ ವಿಷಯ/ವ್ಯಕ್ತಿ ಅಧ್ಯಯನ ವರದಿಯನ್ನು ಸಲ್ಲಿಸುವುದು ಕಡ್ಡಾಯ. ಈ ಸಂಪ್ರಬಂಧ ಮತ್ತು ವಿಷಯ/ವ್ಯಕ್ತಿ ಅಧ್ಯಯನ ವರದಿಗಳು ಎ೪ ಅಳತೆಯ ಪ್ರತಿ ಹಾಳೆಯಲ್ಲಿ ೩೦ ಸಾಲುಗಳನ್ನು ಡಿಟಿಪಿ ಮಾಡಿರಬೇಕು. ಒಟ್ಟಾರೆ ೪೦ ಪುಟಗಳ ವರದಿಯನ್ನು ಒಂದರಲ್ಲೇ ಬೈಂಡ್ ಮಾಡಿಸಿ ವಾರ್ಷಿಕ ಪರೀಕ್ಷೆಯ ಮುನ್ನ ತಪ್ಪದೇ ಮೌಲ್ಯಮಾಪನಕ್ಕಾಗಿ ೨ ಪ್ರತಿಗಳಲ್ಲಿ ಸಂಬಂಧಪಟ್ಟ ಅಧ್ಯಯನ ಕೇಂದ್ರದ ಮೂಲಕ ದೂರಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು.

ದೂರಶಿಕ್ಷಣ ನಿರ್ದೇಶನಾಲಯದ ಮಾರ್ಗದರ್ಶನದ ಮೇರೆಗೆ ಅಭ್ಯರ್ಥಿಯು ಕ್ಷೇತ್ರಕಾರ್ಯ ಮಾಡಿ ಯಾವುದಾದರೂ ಹೊಸ ಶಾಸನಗಳನ್ನು ಹುಡುಕಿ ಅಥವಾ ಪ್ರಕಟವಾಗಿರುವ ಶಾಸನಗಳನ್ನು ಪುನರ್ ಪರಿಶೀಲಿಸಿ, ಅಭ್ಯರ್ಥಿಯ ವಾಸಸ್ಥಳದ ಪರಿಸರದಲ್ಲಿನ ಸ್ಮಾರಕ ಶಿಲೆಗಳನ್ನು, ಶಾಸನಗಳನ್ನು ಕುರಿತು ಅಥವಾ ಯಾವುದಾದರೂ ಶಾಸನದ ಮಹತ್ವವನ್ನು ಶಾಸನಶಾಸ್ತ್ರದ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ಸಂಪ್ರಬಂಧ ರಚಿಸಬೇಕು.

ಸಂಪ್ರಬಂಧ ಮತ್ತು ವಿಷಯ ಅಧ್ಯಯನ ವಿಷಯಕ್ಕೆ ಸಂಬಂದಿsಸಿದ ವಿಷಯವನ್ನು ಸಂಪರ್ಕ ಕಾರ್ಯಕ್ರಮದ ಮುನ್ನ ಅಥವಾ ಆ ಸಂದರ್ಭದಲ್ಲಿ ತಜ್ಞ/ಬೋಧಕರೊಂದಿಗೆ ಅಥವಾ ಅಧ್ಯಯನ ಮಂಡಳಿಯವರೊಂದಿಗೆ ಚರ್ಚಿಸಿ ಖಚಿತಪಡಿಸಿಕೊಂಡು ದೂರಶಿಕ್ಷಣ ನಿರ್ದೇಶನಾಲಯಕ್ಕೆ ತಿಳಿಸಬೇಕು.

೩.೩.೭ ಮಾಹಿತಿ ಮತ್ತು ಸಂವಹನ ತಂತ್ರeನ ಕೋರ್ಸ್ ಮತ್ತು ನಿಯಮಗಳು

ಕೋರ್ಸ್       ಕೋರ್ಸಿನ ಶೀರ್ಷಿಕೆ                                  ಅಂಕಗಳು

ಸಂಕೇತ                                          ಶ್ರೇಯಾಂಕ     ಲಿಖಿತ ಆಂತರಿಕ ಒಟ್ಟು

೨೩A   ೧. ಗಣಕ ಪರಿಚಯ                                 ೬     ೯೦    ೧೦    ೧೦೦

೨೩B   ೨. ಹಾರ್ಡ್‌ವೇರ್(ಯಂತ್ರಾಂಶ)                          ೬     ೯೦    ೧೦    ೧೦೦

೨೩C   ೩. ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಿಸುವ ವಿಧಾನ          ೬     ೬೦    ೪೦*   ೧೦೦

೨೩D   ೪. ಎಂ.ಎಸ್.ಆಪಿsಸ್ ೨೦೦೩                           ೬     ೬೦    ೪೦*   ೧೦೦

೨೩E   ೫. ಅಂತರಜಾಲ(ಇಂಟರ್‌ನೆಟ್)                         ೬     ೭೦    ೩೦*   ೧೦೦

ಒಟ್ಟು   ೩೦    ೩೫೦   ೧೫೦   ೫೦೦

* ಪ್ರಯೋಗ

ಮಾಹಿತಿ ಮತ್ತು ಸಂವಹನ ತಂತ್ರeನ ಸ್ನಾತಕೋತ್ತರ ಡಿಪ್ಲೊಮದ ಕೋರ್ಸ್ ೨೩A ಮತ್ತು ೨೩B ಕೋರ್ಸಿ(ಪತ್ರಿಕೆ)ನಲ್ಲಿ ೧೦ ಅಂಕಗಳು ಆಂತರಿಕ ಮೌಲ್ಯಮಾಪನಕ್ಕಾಗಿ ಅಂದರೆ ಸಂಪರ್ಕ ಕಾರ್ಯಕ್ರಮ ಹಾಗೂ ಮೌಖಿಕ ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ. ಸಂಪರ್ಕ ಕಾರ್ಯಕ್ರಮ ಕಡ್ಡಾಯ. ಸಂಪರ್ಕ ಕಾರ್ಯಕ್ರಮದಲ್ಲಿಯೇ ೨೩C ಮತ್ತು ೨೩D ಕೋರ್ಸಿ(ಪತ್ರಿಕೆ)ನಲ್ಲಿ ೪೦ ಅಂಕಗಳ ಮೌಲ್ಯಮಾಪನಕ್ಕಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ಏರ‍್ಪಡಿಸಲಾಗುವುದು ಡಿಪ್ಲೊಮದ ವಿದ್ಯಾರ್ಥಿಗಳಿಗೂ ಈ ಪ್ರಯೋಗಗಳು ಸರಳವಾಗಿರುವವು. ಮಾಹಿತಿ ಮತ್ತು ಸಂವಹನ ತಂತ್ರeನ ಸ್ನಾತಕೋತ್ತರ ಡಿಪ್ಲೊಮ ಮತ್ತು ಡಿಪ್ಲೊಮದ ಕೋರ್ಸ್ ೨೩A ಮತ್ತು ೨೩B ಕೋರ್ಸಿ(ಪತ್ರಿಕೆ)ನಲ್ಲಿ ತಲಾ ೯೦ ಅಂಕಗಳ ೩ ಗಂಟೆ ಅವಧಿಯ ಮತ್ತು ಕೋರ್ಸ್ ೨೩C ಮತ್ತು  ೨೩D ಕೋರ್ಸಿ(ಪತ್ರಿಕೆ)ನಲ್ಲಿ ತಲಾ ೬೦ ಅಂಕಗಳ ಹಾಗೂ ೨೩E ಕೋರ್ಸಿ(ಪತ್ರಿಕೆ)ನಲ್ಲಿ ೭೦ ಅಂಕಗಳ ೨ ಗಂಟೆ ಅವಧಿಯ ಲಿಖಿತ ವಾರ್ಷಿಕ ಪರೀಕ್ಷೆ ಕಡ್ಡಾಯವಾಗಿರುವುದು. ಉತ್ತೀರ್ಣ ಹೊಂದಲು ಪ್ರತಿ ಕೋರ್ಸಿನಲ್ಲಿ ಆಂತರಿಕ ಅಂಕಗಳನ್ನು ಸೇರಿ ಕನಿಷ್ಠ ೩೫ ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ.