ಆಡಳಿತಾಂಗ – ಕನ್ನಡ ವಿಶ್ವವಿದ್ಯಾಲಯ

 

ಆಡಳಿತಾಂಗವು ವಿತ್ತವಿಭಾಗ, ಆಡಳಿತ ವಿಭಾಗ, ಅಭಿವೃದ್ಧಿ ವಿಭಾಗವೆಂಬ ಮೂರು ಶಾಖೆಗಳನ್ನು ಹೊಂದಿದೆ. ಇವುಗಳಲ್ಲಿ ವಿತ್ತವಿಭಾಗವು ಪ್ರಧಾನವಾಗಿ ರಾಜ್ಯ ಸರಕಾರದಿಂದ, ಪರ್ಯಾಯವಾಗಿ ಕೇಂದ್ರ ಸರಕಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗ , ಸಾಮಾಜಿಕ ವ್ಯಕ್ತಿ ಸಂಸ್ಥೆ ಹೀಗೆ ಸರ್ವಮೂಲಗಳಿಂದ ಹಣವನ್ನು ಸಂಗ್ರಹಿಸುವ ಮತ್ತು ಶಿಕ್ಷಣದ ಎಲ್ಲ ನೆಲೆಗಳೂ ಸಮನಾಗಿ ಬೆಳೆಯುವಂತೆ ಸರಿಯಾಗಿ ವಿನಿಯೋಗಿಸುವ ಹೊಣೆಯನ್ನು ನಿರ್ವಹಿಸುತ್ತಲಿದೆ. ಆಡಳಿತ ವಿಭಾಗವು ಸಿಬ್ಬಂದಿಗಳ ಸೇವಾವ್ಯವಸ್ಥೆ , ವೇತನ ಸಾದಿಲ್ವಾರು ಮೊದಲಾದ ಮುಖ್ಯ ಚಟುವಟಿಕೆಗಳನ್ನು ನಿಭಾಯಿಸುತ್ತಿದೆ.

admin-front-view

admin-inside-view

ಅಭಿವೃದ್ಧಿ ವಿಭಾಗವು ಕಟ್ಟಡ, ರಸ್ತೆ, ನೀರು, ದೀಪ, ಉದ್ಯಾನ, ಅರಣ್ಯೀಕರಣ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದೆ. ಇದರ ಅಂಗವಾಗಿ ತಾಂತ್ರಿಕ ವಿಭಾಗ ಮತ್ತು ಉದ್ಯಾನ ವಿಭಾಗಗಳು ಶ್ರಮಿಸುತ್ತಿವೆ.

ಗೌರವಾನ್ವಿತ ತಾವರಚಂದ್‌ ಗೆಹ್ಲೋಟ್‌ ಅವರು

ಕುಲಾಧಿಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ

ರಾಜ್ಯಪಾಲರು, ಕರ್ನಾಟಕ ಸರ್ಕಾರ

ಗೌರವಾನ್ವಿತ ಡಾ. ಎಂ.ಸಿ.ಸುಧಾಕರ ಅವರು

ಸಮಕುಲಾಧಿಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಹಾಗೂ ಉನ್ನತ ಶಿಕ್ಷಣ ಸಚಿವರು,

ಕರ್ನಾಟಕ ಸರ್ಕಾರ

ಡಾ. ಡಿ.ವಿ.ಪರಮಶಿವಮೂರ್ತಿ ಅವರು

ಮಾನ್ಯ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ