ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಕರ್ನಾಟಕದ ಇತಿಹಾಸ, ಪುರಾತತ್ವ ಮತ್ತು ಸಾಂಸ್ಕೃತಿಕ ವಿವರಗಳಿಗೆ ಸಂಬಂಧಿಸಿದ ಆಕರಗಳನ್ನು ಸಂಗ್ರಹಿಸುವ, ಪುನರ್ ಕಟ್ಟುವ ಹಾಗೂ ಅರ್ಥೈಸುವ ಮಹತ್ವಾಕಾಂಕ್ಷಿ ಚಟುವಟಿಕೆಗಳನ್ನು ೧೯೯೬ರಿಂದಲೂ ನಿರಂತರವಾಗಿ ನಿರ್ವಹಿಸುತ್ತಾ ಸಾಗಿದೆ. ಇಂಥ ಪ್ರಮುಖ ಧ್ಯೇಯೋದ್ದೇಶಗಳನ್ನಿಟ್ಟುಕೊಂಡಿರುವ ವಿಭಾಗವು ಆ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಪೂರೈಸಿದೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ಪುನರ್ ನಿರ್ಮಾಣಕ್ಕೆ ಅವಶ್ಯಕವಾಗಿರುವ ಪ್ರತಿ ಗ್ರಾಮಗಳಲ್ಲಿ ಲಭ್ಯವಿರುವ ಆಕರ ಸಾಮಗ್ರಿಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸುವುದು ಹಾಗೂ ವಿಶ್ಲೇಷಿಸಿ-ಅರ್ಥೈಸುವುದು ವಿಭಾಗದ ಯೋಜನೆಗಳ ಪ್ರಮುಖ ಉದ್ದೇಶಗಳಾಗಿವೆ. ಕಳೆದೆರಡು ದಶಕಗಳಿಂದ ವಿಭಾಗವು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶದಲ್ಲಿ ಲಭ್ಯವಿರುವ ಆಕರಗಳ ಹಿನ್ನೆಲೆಯಲ್ಲಿ ಹೆಚ್ಚಿನ ಅಧ್ಯಯನ ಮತ್ತು ಪ್ರಕಟಣೆಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಬಹುತೇಕ ಪ್ರದೇಶಗಳನ್ನು ಅನುಲಕ್ಷಿಸಿ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು ವಿಭಾಗದ ಮುಖ್ಯ ಗುರಿಯಾಗಿದೆ. ಇಂಥ ಸದುದ್ದೇಶವನ್ನು ಹೊಂದಿರುವ ವಿಭಾಗವು ಈಗಾಗಲೇ ಇತಿಹಾಸ, ಪುರಾತತ್ವ ಮತ್ತು ಸಾಂಸ್ಕೃತಿಕ ವಲಯದ ವಿಶೇಷ ಕ್ಷೇತ್ರಗಳನ್ನು ಪರಿಗಣಿಸಿ ನಲವತ್ತು ಕೃತಿಗಳನ್ನು ಪ್ರಕಟಿಸಿರುವುದು ಹೆಮ್ಮೆಯೆನಿಸುತ್ತದೆ.
ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆ ಕಾರ್ಯಗಳನ್ನು ಪ್ರಧಾನವಾಗಿ ಪರಿಗಣಿಸಿರುವ ವಿಭಾಗದ ಸಹೋದ್ಯೋಗಿಗಳು ಯೋಜನೆಗಳ ಜೊತೆಗೆ ಮೂನ್ನೂರಕ್ಕಿಂತ ಹೆಚ್ಚಿನ ಸಂಖ್ಯೆಯ ಎಂ.ಫಿಲ್ ಮತ್ತು ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಕಾರ್ಯವು ಶ್ಲಾಘನೀಯವಾದುದೆಂದು ಹೇಳಿಕೊಳ್ಳಲು ಸಂತೋಷವೆನಿಸುತ್ತದೆ.

 

ವಿಭಾಗದ ಬೋಧಕರ ವಿವರಗಳು

ಹೆಸರು

ಹುದ್ದೆ

ವಿದ್ಯಾರ್ಹತೆ

ಡಾ. ವಾಸುದೇವ ಬಡಿಗೇರ

ಪ್ರಾಧ್ಯಾಪಕರು  ಮತ್ತು ಮುಖ್ಯಸ್ಥರು

ಪಿಎಚ್.ಡಿ
ಹೆಚ್ಚಿನ ವಿವರ …

ಡಾ. ರಮೇಶ್ ನಾಯ್ಕ

ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ …

ಡಾ ಎಸ್.ವೈ.ಸೋಮಶೇಖರ್

ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ …