ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗವನ್ನು ೧೯೯೬ರಲ್ಲಿ ಪ್ರಾರಂಭಿಸಲಾಯಿತು. ವಿಭಾಗವು ಪ್ರಾರಂಭದಿಂದಲೂ, ಅಭಿವೃದ್ಧಿಗೆ ಸಂಬಂಧಿಸಿದ ಸಂಗತಿಗಳನ್ನು, ಅಭಿವೃದ್ಧಿ ಸಿದ್ಧಾಂತಗಳು ಮತ್ತು ಅಭಿವೃದ್ಧಿ ಅನುಭವಗಳ ನಡುವಿನ ಅಂತರವನ್ನು ಕೇಂದ್ರೀಕರಿಸಿ ವೈಜ್ಞಾನಿಕವಾಗಿ ಬಹುಶಿಸ್ತೀಯ ನೆಲೆಯಲ್ಲಿ ಸಂಶೋಧನೆಗಳನ್ನು ನಡೆಸುತ್ತಿದೆ. ಹೀಗೆ ವಿಭಾಗವು ನಡೆಸಿದ ಅನೇಕ ಸಂಶೋಧನೆಗಳು ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರುವುದಕ್ಕೆ ಸಂಬಂಧಿಸಿದಂತೆ ಅಲ್ಪಾವಧಿ ಮತ್ತು ದೀರ್ಘಕಾಲೀನ ಪ್ರಜಾಸತ್ತಾತ್ಮಕ ಅಭಿವೃದ್ಧಿ ಕಾರ್ಯತಂತ್ರಗಳ ಸೂತ್ರೀಕರಣವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.

ಸಂಶೋಧನೆ:
ಸಂಶೋಧನೆ ನಡೆಸುವ ಉದ್ದೇಶ, ರಾಜ್ಯದ ಬಡಜನರು ಮತ್ತು ಹಿಂದುಳಿದ ಪ್ರದೇಶಗಳು ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಎದುರಿಸುತ್ತಿರುವ ಎಲ್ಲಾ ರೀತಿಯ ತೂಡಕುಗಳನ್ನು ಮತ್ತು ಸಂಕೀರ್ಣತೆಗಳನ್ನು ಬಹುಶಿಸ್ತೀಯ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದು. ಸಂಶೋಧನೆಯಿಂದ ಪಡೆದುಕೊಂಡ ಫಲಿತಗಳನ್ನು, ಅನುಭವಗಳನ್ನು ಮತ್ತು ತಿಳುವಳಿಕೆಗಳನ್ನು ಜನರು, ಜನರ ಪ್ರತಿನಿಧಿಗಳು ಮತ್ತು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಅಭಿವೃದ್ಧಿ ಕಾರ್ಯಕರ್ತರ ಜೊತೆ ಹಂಚಿಕೊಳ್ಳುವ ಮೂಲಕ ತಳಮಟ್ಟದ ಅಭಿವೃದ್ಧಿ ಪ್ರಕ್ರಿಯೆಗಳ ಸವಾಲು ಮತ್ತು ಸಾಧ್ಯತೆಗಳನ್ನು ಜನರ ಸಾಮಾನ್ಯರ ನೆಲೆಯಲ್ಲಿ ಶೋಧಿಸುವುದು ಮತ್ತು ಸ್ಥಳೀಯ ಮಟ್ಟದ ಪರ್ಯಾಯಗಳನ್ನು ಕಂಡುಕೊಳ್ಳುವುದು.

ವಿಭಾಗ ಸಂಶೋಧನೆಯ ಆದ್ಯತಾ ಕ್ಷೇತ್ರಗಳು:-
೧. ಸಹಭಾಗಿತ್ವ ಅಭಿವೃದ್ಧಿ, ೨. ಲಿಂಗಸಂಬಂಧಿ ಅಭಿವೃದ್ಧಿ, ೩. ಸುಸ್ಥಿರ ಅಭಿವೃದ್ಧಿ, ೪. ಅಭಿವೃದ್ಧಿಯ ಅಸಮಾನತೆ ೫. ಪ್ರಾದೇಶಿಕ ಅಸಮಾನತೆ, ೬. ಹಕ್ಕು ಆಧಾರಿತ ಅಭಿವೃದ್ಧಿ, ೭. ಸ್ಥಳೀಯ ಸರ್ಕಾರಗಳು ಮತ್ತು ಅಭಿವೃದ್ಧಿ ೮. ??ಗ್ರಾಮೀಣಾಭಿವೃದ್ಧಿ ನಿರ್ವಹಣೆ, ೯. ಸಂಘಟಿತ ಮತ್ತು ಅಸಂಘಟಿತ ವಲಯಗಳ ಆರ್ಥಿಕತೆ ಮತ್ತು ದುಡಿಮೆ, ೧೦. ಆರೋಗ್ಯ, ಆಹಾರ, ಅಪೌಷ್ಟಿಕತೆ, ಶಿಕ್ಷಣ, ಕುಡಿಯುವ ನೀರು, ವಸತಿ, ಮತ್ತು ಉದ್ಯೋಗ, ಇತ್ಯಾದಿ ಅಗತ್ಯ ಮೂಲಸೌಲಭ್ಯಗಳನ್ನು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದು ೧೧. ಅಭಿವೃದ್ಧಿ ನೀತಿಗಳು ಮತ್ತು ಸಮಕಾಲೀನ ಬಿಕ್ಕಟ್ಟುಗಳು, ೧೨. ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆ ಸಂಬಂಧಿ ಬಿಕ್ಕಟ್ಟುಗಳು ೧೩. ವಲಸೆ ಮತ್ತು ಅಭಿವೃದ್ಧಿ ೧೪.ಸಮಕಾಲೀನ ಅಭಿವೃದ್ಧಿ ಬಿಕ್ಕಟ್ಟುಗಳು, ಇತ್ಯಾದಿ.

ತರಬೇತಿ:-
ಅಭಿವೃದ್ಧಿ ಅಧ್ಯಯನ ವಿಭಾಗವು ಸಂಶೋಧನೆಯಿಂದ ಪಡೆದುಕೊಂಡ ಫಲಿತಗಳ ಆಧಾರದಲ್ಲಿ ಸಾಂಪ್ರದಾಯಿಕ ಅಭಿವೃದ್ಧಿ ಮಾದರಿಗಳಿಂತ ವಿಭಿನ್ನವಾದ ಅಭಿವೃದ್ಧಿ ತರಬೇತಿ ಮಾಡ್ಯೂಲ್‌ಗಳನ್ನು ರೂಪಿಸಿದೆ. ಈ ತರಬೇತಿ ಮಾಡ್ಯೂಲ್‌ಗಳು ಶೈಕ್ಷಣಿಕ ಮತ್ತು ಅಧಿಕಾರಶಾಹಿ ವಲಯಗಳು ರೂಪಿಸಿದ ಸಾಂಪ್ರದಾಯಿಕ ತರಬೇತಿ ಮಾಡ್ಯುಲಸ್‌ಗಿಂತ ಭಿನ್ನವಾಗಿದೆ. ಸಾಂಪ್ರದಾಯಿಕ ತರಬೇತಿ ಮಾಡ್ಯೂಲ್‌ಗಳು ಪ್ರೇರಣೆ ಮತ್ತು ಕೌಶಲ್ಯ ರಚನೆಗೆ ಹೆಚ್ಚಿನ ಅವಕಾಶವನ್ನು ನೀಡಿವೆ. ಇದು ಅತ್ಯಂತ ಅಗತ್ಯ. ಆದರೆ ಇವುಗಳು ಮಾತ್ರವೇ ಪ್ರಜಾಸ್ತಾತ್ಮಕ ಅಭಿವೃದ್ಧಿ ಅನುಷ್ಟಾನಕ್ಕೆ ಸಾಕಾಗುವುದಿಲ್ಲ. ಸಾಂಪ್ರದಾಯಿಕ ತರಬೇತಿ ಮಾಡ್ಯೂಲ್‌ಗಳನ್ನು ವಿಮಶಾತ್ಮಕವಾಗಿ ಚರ್ಚೆಸಿ, ಅಧ್ಯಯನಮಾಡಿ ಜನ ಸಾಮಾನ್ಯರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವ ಮತ್ತು ವಿಕೇಂದ್ರೀಕರಣದ ದೃಷ್ಠಿಕೋನದಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ತರಬೇತಿ ಮಾಡ್ಯೂಲ್‌ಗಳನ್ನು ಅಭಿವೃದ್ಧಿ ಅಧ್ಯಯನ ವಿಭಾಗವು ರೂಪಿಸಿದೆ. ನಮ್ಮ ತರಬೇತಿ ಮಾಡ್ಯೂಲ್ ತರಬೇತುದಾರರಿಗೆ ಅವರು ವಾಸಿಸುವ ಸಾಮಾಜಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವ ಜೊತೆಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಈಗ ನಡೆಯುತ್ತಿರುವ ಮತ್ತು ನಡೆಸಲು ಉದ್ದೇಶಿತ ತರಬೇತಿಗಳೆಂದರೆ: ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ತಳಮಟ್ಟದ ಅಭಿವೃದ್ಧಿ ಕಾರ್ಯಕತರು(ಅಂಗನವಾಡಿ ಕಾರ್ಯಕತರು, ಆರೋಗ್ಯ ಕಾರ್ಯಕತರು, ಆಶಾ ಕಾರ್ಯಕತೇಯರು, ಶಾಲಾ ಶಿಕ್ಷಕರು, ಪೊಲೀಸರು, ಗ್ರಾಮ ಪಂಚಾಯತಿ ಮಟ್ಟದ ಎಲ್ಲಾ ಅಭಿವೃದ್ಧಿ ಕಾರ್ಯಕರ್ತರು) ಅಭಿವೃದ್ಧಿ ಫಲಾನುಭವಿಗಳು, ಇತ್ಯಾದಿ.

ತಲುಪು:-
ಅಭಿವೃದ್ಧಿ ಅಧ್ಯಯನ ವಿಭಾಗವು ಎರಡು ಪ್ರಮುಖ ಉದ್ದೇಶದಿಂದ ತನ್ನ ಸಂಶೋಧನಾ ಫಲಿತಾಂಶವನ್ನು ಜನ ಸಮುದಾಯಕ್ಕೆ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ: ಒಂದು, ಸಮಾಜದ ಅಂಚಿನ ಆಚೆಗೆ ಇರುವವರ ಜೀವನದ ಸ್ಥಿತಿಗತಿಗನ್ನು ವಿಸ್ತೃತ ಸಮಾಜಕ್ಕೆ, ಅದರಲ್ಲಿಯೂ ಯೋಜನಾಕಾರರಿಗೆ ಮತ್ತು ಮೇಲ್ ಮಟ್ಟದ ಅಧಿಕಾರಿಶಾಹಿಗೆ ಪರಿಚಯಿಸುವುದು. ಎರಡು, ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರನ್ನೂ ಒಟ್ಟುಗೂಡಿಸುವುದು. ಒಟ್ಟುಗೂಡಿಸುವ ಉದ್ದೇಶ ಅಭಿವೃದ್ಧಿಯ ವಾಸ್ತವಿಕತೆಯನ್ನು ಎಲ್ಲಾ ಪಾಲುದಾರರಿಗೆ ತಿಳಿಸುವ ಜೊತೆ ಜೊತೆಗೆ, ಸಮಾಜದ ಎಲ್ಲಾ ಜನವರ್ಗಗಳು, ಅದರಲ್ಲಿಯೂ ಅವಕಾಶವಂಚಿತರನ್ನು ಒಳಗೊಳ್ಳುವ ಪರ್ಯಾಯ ಸುಸ್ಥಿರ ಅಭಿವೃದ್ಧಿ ನೀತಿಗಳನ್ನು ರೂಪಿಸುವುದಕ್ಕೆ ಬೇಕಾಗುವ ಸಾಕ್ಷ್ಯಾಧರಗಳನ್ನು ಶೈಕ್ಷಣಿಕ ದೃಷ್ಟಿಕೋನದಿಂದ ಕಟ್ಟಿಕೊಡುವುದು. ಅಭಿವೃದ್ಧಿ ಅಧ್ಯಯನ ವಿಭಾಗವು ಜನರಿಗೆ ಸಂಶೋಧನಾ ಫಲಿತಾಂಶವನ್ನು ತಲುಪಿಸಲು ಈ ಕೆಳಗಿನ ಮಾಧ್ಯಮವನ್ನು ಬಳಸುತ್ತಿದೆ/ಬಳಸಲು ಉದ್ದೇಶಿಸಿದೆ – ಅಭಿವೃದ್ಧಿ ಅಧ್ಯಯನ: ಸಮಾಜ ವಿಜ್ಞಾನ ಪತ್ರಿಕೆ, ದ್ವೈ-ವಾರ್ಷಿಕ ಜರ್ನಲ್; ನಿರಂತರವಾಗಿ ಪಿಎಚ್‌ಡಿ ಕಾರ್ಯಕ್ರಮಗಳನ್ನು ನಡೆಸುವುದು, ಪರ್ಯಾಯ ಅಭಿವೃದ್ಧಿ ವಿ?ಯಗಳ ಮೇಲೆ ಅಲ್ಪಾವಧಿಯ ಕೋರ್ಸ್‌ಗಳನ್ನು ನಡೆಸುವುದು, ಸಂಶೋಧನಾ ಉತ್ಪನ್ನವನ್ನು ವಿಸ್ತೃತ ಸಮಾಜಕ್ಕೆ ಪ್ರಸಾರ ಮಾಡಲು ವೆಬ್‌ಸೈಟ್ ಪ್ರಾರಂಭಿಸಲು ಉದ್ದೇಶಿಸಿದೆ; ಅಭಿವೃದ್ಧಿ ಸಮಾವೇಶಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸುವುದು, ಎಲ್ಲಾ ಅಭಿವೃದ್ಧಿ ಪಲಾನುಭವಿಗಳು ಮತ್ತು ಯೋಜನೆಗಳನ್ನು ಅನುಷ್ಟಾನಕ್ಕೆ ತರುವವರ ಸಮಾವೇಶಗಳನ್ನು ಸಂಘಟಿಸುವುದು. ಸಮಕಾಲೀನ ಅಭಿವೃದ್ಧಿ ಬಿಕ್ಕಟ್ಟುಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಜನರಿಗೆ ತಲುಪಿಸುವ ದೃಷ್ಠಿಯಿಂದ ಪ್ರಚಾರ ಉಪನ್ಯಾಸಗಳನ್ನು ಸಂಘಟಿಸುವುದು.

ವಿಸ್ತರಣೆ ಸೇವೆಗಳು:-
ಅಭಿವೃದ್ಧಿ ನೀತಿ ನಿರೂಪಣೆ ಮತ್ತು ಅಭಿವೃದ್ಧಿಯ ಅನುಷ್ಟಾನದಲ್ಲಿ ನೇರವಾಗಿ ಮಧ್ಯಪ್ರವೇಶಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಹಲವು ಸಮಿತಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ವಿಭಾಗದ ಪ್ರಾಧ್ಯಾಪಕರು, ವಿವಿಧ ಸಾಮರ್ಥ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ: ೧. ಕನಾಟಕ ರಾಜ್ಯ ಸರ್ಕಾರ ರಚಿಸಲಾದ ಪಂಚಾಯತ್‌ಗಳನ್ನು ಬಲಪಡಿಸಲು ರಾಜ್ಯ ಮಟ್ಟದ ತಜ್ಞರ ಸಮಿತಿಯ ಸದಸ್ಯರಾಗಿ, ೨ ಜಿಲ್ಲಾ ಯೋಜನಾ ಸಮಿತಿಗಳ ಸಲಹೆಗಾರಾಗಿ, ೩. ಗ್ರಾಮೀಣಾಭಿವೃದ್ಧಿಗಾಗಿ ಕೆಲಸ ಮಾಡುವ ಎನ್‌ಜಿಒಗಳಿಗೆ ಸಲಹೆಗಾರರಾಗಿ, ೪. ಶ್ರೀ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ(ಎಸ್‌ಐಆರ್‌ಡಿ), ಮೈಸೂರು, ರಚಿಸಿರುವ ವಿವಿಧ ತರಬೇತಿ ಕಾರ್ಯಕ್ರಮಗಳ ಸಮಿತಿ ಸದಸ್ಯರಾಗಿ, ೫. ಶಾಲಾ ಶಿಕ್ಷಣದಲ್ಲಿ ಗುಣಮಟ್ಟದ ಅಭಿವೃದ್ದಿಗೆ ಸಮುದಾಯದ ಸಹಭಾಗಿತ್ವವನ್ನು ಬಲಪಡಿಸಲು ಶಿಕ್ಷಣ ಇಲಾಖೆ ರಚಿಸಿರುವ ರಾಜ್ಯ ಮಟ್ಟದ ಸಮಿತಿಗಳ ಸದಸ್ಯರಾಗಿ, ೫. ಶಿಕ್ಷಣ ಇಲಾಖೆ ರಚಿಸಿರುವ ಶಾಲಾ ಪಠ್ಯಕ್ರಮ ರಚನಾ ಸಮಿತಿಯಲ್ಲಿ ಸದಸ್ಯರಾಗಿ, ೬. ಕರ್ನಾಟಕ ಮಕ್ಕಳ ರಕ್ಷಣಾ ಆಯೋಗ ರಚಿಸಿದ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ.

 

                                                                                            ವಿಭಾಗದ ಬೋಧಕರ ವಿವರಗಳು

 

ಹೆಸರು
ಹುದ್ದೆ
ವಿದ್ಯಾರ್ಹತೆ
ಹೆಚ್ಚಿನ ವಿವರ ... 
ಡಾ. ಎಚ್.ಡಿ ಪ್ರಶಾಂತ್
ಪ್ರಾಧ್ಯಾಪಕರು
ಪಿಎಚ್.ಡಿ.
ಹೆಚ್ಚಿನ ವಿವರ ...
ಡಾ.ಎ. ಶ್ರೀಧರ
ಪ್ರಾಧ್ಯಾಪಕರು
ಪಿಎಚ್.ಡಿ.
ಹೆಚ್ಚಿನ ವಿವರ ...
ಡಾ. ಜನಾರ್ದನ
 ಪ್ರಾಧ್ಯಾಪಕರು
ಪಿಎಚ್.ಡಿ.
ಹೆಚ್ಚಿನ ವಿವರ ...
ಡಾ. ಎಸ್.ಎ. ಗೋವರ್ಧನ
ಸಹಾಯಕ ಪ್ರಾಧ್ಯಾಪಕರು
ಪಿಎಚ್.ಡಿ.
ಹೆಚ್ಚಿನ ವಿವರ ...
ಡಾ. ಗೀತಮ್ಮ ಕೆ.
ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಪಿಎಚ್.ಡಿ.
ಹೆಚ್ಚಿನ ವಿವರ ...