visual-artsಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾನಿಕಾಯ, ಸಮಾಜ ವಿಜ್ಞಾನಗಳ ನಿಕಾಯ, ಲಲಿತಕಲಾ ನಿಕಾಯ ಎಂಬ ಮೂರು ನಿಕಾಯಗಳು ಕಾರ್ಯ ನಿರ್ವಹಿಸುತ್ತಿವೆ. ಲಲಿತಕಲಾ ನಿಕಾಯದಲ್ಲಿ ದೃಶ್ಯಕಲಾ ವಿಭಾಗವು ಒಂದು ಪ್ರಮುಖ ವಿಭಾಗವಾಗಿದೆ. ಈ ವಿಭಾಗವು 1993ರಿಂದ ಪ್ರಾರಂಭಗೊಂಡು ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸ್ನಾತಕೋತ್ತರ ಎರಡು ವರ್ಷದ ನಾಲ್ಕು ಸೆಮಿಸ್ಟರ್ ಗಳ ಎಂ.ವಿ.ಎ(ಮಾಸ್ಟರ್ ಆಫ್ ವಿಜ್ಯುವಲ್ ಆರ್ಟ್ಸ್) ಚಿತ್ರಕಲೆಯ ಸ್ನಾತಕೋತ್ತರ ತರಗತಿಗಳು ನಡೆಯುತ್ತಿವೆ, ಒಂದು ವರ್ಷದ ಎಂ.ಫಿಲ್(ಮಾಸ್ಟರ್ ಆಫ್ ಫಿಲಾಸಫಿ)ಸ್ನಾತಕೋತ್ತರ ತರಗತಿ ಮತ್ತು ಪಿಹೆಚ್.ಡಿ(ಡಾಕ್ಟರ್ ಆಫ್ ಫಿಲಾಸಫಿ) ಅಧ್ಯಯನಕ್ಕೆ ಅವಕಾಶವಿದೆ. ರಾಜ್ಯ ಹೊರರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನ ಅಧ್ಯಯನ ಮಾಡುತ್ತಿದ್ದಾರೆ.
ಪಿಹೆಚ್.ಡಿ ಅಧ್ಯಯನವು ಆಂತರಿಕ ಮತ್ತು ಬಾಹ್ಯ ಎರಡೂ ರೀತಿಯಲ್ಲಿ ಅಧ್ಯಯನಕ್ಕೆ ಅವಕಾಶವಿದೆ. ಆಂತರಿಕ ಎಂ.ಫಿಲ್ ಮತ್ತು ಪಿಹೆಚ್.ಡಿ ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 2000.00 ರೂ. ಶಿಷ್ಯವೇತನವನ್ನು ವಿಶ್ವವಿದ್ಯಾಲಯ ನೀಡುತ್ತಿದೆ. ಯು.ಜಿ.ಸಿ.ಯ ಶಿಷ್ಯವೇತನವನ್ನು ಪಡೆದ ವಿದ್ಯಾರ್ಥಿಗಳು ಸಹ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ವಿಭಾಗವು ರಾಜ್ಯ ಮತ್ತು ಹೊರರಾಜ್ಯದಲ್ಲಿ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಸಮೂಹ ಚಿತ್ರಕಲಾ ಪ್ರದರ್ಶನ ಮತ್ತು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಿದೆ. ಮತ್ತು ಹಿರಿಯ ಕಲಾವಿದರ ಕಲಾಪ್ರಾತ್ಯಕ್ಷಿಕೆ ಮತ್ತು ಕಲಾ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲದೇ ಹಿರಿಯ ಕಲಾವಿದರ ವಿಶೇಷ ಕಲಾಉಪನ್ಯಾಸಗಳು, ವಿಭಾಗದಲ್ಲಿ ನಡೆಯುತ್ತ ಬಂದಿವೆ.
ಈಗಾಗಲೇ ದೆಹಲಿ, ಲಖ್ನೋ, ಕಲ್ಕತ್ತ, ಹೈದರಾಬಾದ್, ಚೆನ್ನೈ, ಪಂಜಾಬ್, ಕೇರಳ, ಗೋವಾ, ಪೂನಾ ಮುಂತಾದ ಕಡೆಗೆ ವಿಭಾಗದ ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ವಿಭಾಗದ ಪ್ರಾಧ್ಯಾಪಕರ ದೇಶ-ವಿದೇಶದಲ್ಲಿ (ಇಂಡೋನೇಷಿಯ) ಏಕವ್ಯಕ್ತಿ ಮತ್ತು ಗುಂಪು ಕಲಾಪ್ರದರ್ಶನಗಳು ನಡೆದಿವೆ, ಹಾಗೆಯೇ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಚಿತ್ರಕಲಾ/ಶಿಲ್ಪಕಲಾ ಶಿಬಿರಗಳು, ವಿಚಾರ ಸಂಕಿರಣ, ಕಾರ್ಯಾಗಾರ ಹಾಗೂ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಇವರ ಚಿತ್ರಕಲಾಕೃತಿಗಳು ದೇಶ-ವಿದೇಶಗಳಲ್ಲಿ ಸಂಗ್ರಹಗೊಂಡಿವೆ. ಅಲ್ಲದೇ ಅನೇಕ ಸಂಶೋಧನಾ ಲೇಖನಗಳು ಮತ್ತು ಪುಸ್ತಕಗಳು ಪ್ರಕಟಗೊಂಡಿವೆ.
ವಿಭಾಗದಲ್ಲಿ 28 ವಿದ್ಯಾರ್ಥಿಗಳು ಈಗಾಗಲೇ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಹಾಗೆಯೇ 18 ವಿದ್ಯಾರ್ಥಿಗಳು ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ 10 ಜನ ವಿದ್ಯಾರ್ಥಿಗಳು ಎಂ.ಫಿಲ್ ಪದವಿಯ ಅಧ್ಯಯನ ಮಾಡುತ್ತಿದ್ದಾರೆ. 8 ಜನ ವಿದ್ಯಾರ್ಥಿಗಳು ಪಿಹೆಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಯು.ಜಿ.ಸಿ.ಯ ಶಿಷ್ಯವೇತನ, ಸೀನಿಯರ್ ಮತ್ತು ಜೂನಿಯರ್ ಸಂಶೋಧನ ಶಿಷ್ಯವೇತನವನ್ನು ಪಡೆದು ಅಧ್ಯಯನ ಮಾಡುತ್ತಿದ್ದಾರೆ.
ಇದೀಗ ವಿಭಾಗವು ಯು.ಜಿ.ಸಿ,ಯ ನೆರವಿನಿಂದ ನಿರ್ಮಾಣವಾದ ನೂತನ ಭವ್ಯವಾದ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದಲ್ಲಿ ವಿಶಾಲವಾದ ತರಗತಿ ಕೊಠಡಿಗಳು, ಗಣಕಯಂತ್ರದ ಕೊಠಡಿ, ಗ್ರಂಥಾಲಯ, ಆರ್ಟ್ ಗ್ಯಾಲರಿ ಮತ್ತು ಅಡಿಟೋರಿಯಂ ಇತ್ಯಾದಿ ಆಧುನಿಕ ಮೂಲಭೂತ ಸೌಕರ್ಯಗಳನ್ನು ಹೊಂದಿದೆ.

ವಿಭಾಗದ ಬೋಧಕರ ವಿವರಗಳು

 

ಹೆಸರು
ಹುದ್ದೆ
ವಿದ್ಯಾರ್ಹತೆ
ಹೆಚ್ಚಿನ ವಿವರ ..
ಡಾ. ಮೋಹನ್‌ರಾವ್‌ ಬಿ. ಪಂಚಾಳ
ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಪಿಎಚ್.ಡಿ
  ಹೆಚ್ಚಿನ ವಿವರ ..