women-studies

ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗವನ್ನು 1999ರಲ್ಲಿ ಆರಂಭಿಸಲಾಯಿತು. ವಿಭಿನ್ನ ಜ್ಞಾನ ಶಿಸ್ತುಗಳಲ್ಲಿ ಸ್ಥಾಪಿತವಾಗಿರುವ ಜ್ಞಾನವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ಪುನರ್ ವಿಮರ್ಶಿಸುವ ಕಾರ್ಯವನ್ನು, ಕರ್ನಾಟಕದಲ್ಲಿ ಆರಂಭಿಸಿದ್ದು 70ರ ದಶಕದಿಂದೀಚೆಗೆ. ಭಾಷೆ, ಸಾಹಿತ್ಯ, ಸಂಸ್ಕೃತಿ, ಮೊದಲಾದ ಪ್ರಮುಖ ಮಾನವಿಕ ಅಧ್ಯಯನ ಶಾಖೆಗಳಾದ ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ಮುಂತಾದ ಜ್ಞಾನಶಾಖೆಗಳನ್ನು ಮಹಿಳಾ ದೃಷ್ಟಿಕೋನದಿಂದ ಅಧ್ಯಯನ ಮಾಡುವುದು, ಮಹಿಳಾ ಅಧ್ಯಯನ ವಿಭಾಗದ ಮುಖ್ಯ ಆಶಯವಾಗಿದೆ. ಮಹಿಳಾ ಅಧ್ಯಯನದ ಈ ಸೇವೆ ಅಕಾಡೆಮಿಕ್ ವಲಯದಲ್ಲಿ ಅತ್ಯಂತ ಕೂತೂಹಲಕರವಾದ ಹಾಗೂ ಗಂಭೀರವಾದ ಚರ್ಚೆಯನ್ನು ಮಂಡಿಸುವುದರಿಂದ ಎಲ್ಲಾ ಜ್ಞಾನಶಾಖೆಗಳು ಈ ಚಿಂತನೆಯನ್ನು ಅಳವಡಿಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ. ಸ್ಥಿರವಾಗಿ ನೆಲೆಯೂರಿರುವ ಸಾಂಪ್ರದಾಯಿಕವಾದ ಪುರುಷ ಕೇಂದ್ರಿತ ಆಲೋಚನಾ ಕ್ರಮದಿಂದ ಹೊರಬಂದು ಚಲನಶೀಲವಾದ ಜಂಡರ್ ಚಿಂತನಾ ಕ್ರಮವನ್ನು ರೂಢಿಸುವುದು ವರ್ತಮಾನದ ಲಕ್ಷಣವಾಗಿದೆ. ಇಂತಹ ಹಲವಾರು ಅಗತ್ಯ ಕಾರಣಗಳಿಗಾಗಿ ಮಹಿಳಾ ಅಧ್ಯಯನ ವಿಭಾಗವನ್ನು ರೂಪಿಸಲಾಗಿದೆ.
ಮಹಿಳಾ ಅಧ್ಯಯನ ವಿಭಾಗವು ಕನ್ನಡ ವಿಶ್ವವಿದ್ಯಾಲಯದ ಧ್ಯೇಯವಾಕ್ಯದಂತೆ ಸಂಶೋಧನೆಯನ್ನು ನಡೆಸುವುದು ಮುಖ್ಯವಾದ ಆಶಯವಾಗಿರುವುದರಿಂದ ಪ್ರಧಾನವಾಗಿ ಅಧ್ಯಯನ ಯೋಜನೆಗಳು, ಗುಂಪು ಯೋಜನೆಗಳು, ಪ್ರಧಾನ (ಮೇಜರ್ ಪ್ರಾಜೆಕ್ಟ್) ಯೋಜನೆ, ವೈಯಕ್ತಿಕ ಯೋಜನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಯೋಜನೆಗಳ ಒಟ್ಟೊಟ್ಟಿಗೆ ಕಾರ್ಯಕ್ರಮವಾಗಿ ವಿಚಾರ ಸಂಕಿರಣ, ಕಮ್ಮಟ ಮತ್ತು ತರಬೇತಿ ಚಟುವಟಿಕೆಗಳನ್ನು ಕೂಡ ವಿಭಾಗದ ಅಧ್ಯಾಪಕ ವರ್ಗವು ನಡೆಸಿಕೊಂಡು ಬರುತ್ತಿದೆ. ಇವುಗಳಿಂದ ಸಮುದಾಯ ಕಾರ್ಯಚಟುವಟಿಕೆಗಳಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ, ಉಚಿತ ಆರೋಗ್ಯ ಶಿಬಿರಗಳು, ಜಾಗೃತಿ ಶಿಬಿರಗಳನ್ನು ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು, ಶಿಬಿರಗಳನ್ನು ನಡೆಸಲಾಗುತ್ತಿದೆ.
ಸಂಶೋಧನೆಗೆ ಪೂರಕವಾಗಿ ಬೋಧನೆಯನ್ನು ಕೂಡಾ ಅಷ್ಟೇ ಸಮರ್ಥವಾಗಿ ವಿಭಾಗವು ಮುನ್ನಡೆಸಿಕೊಂಡು ಬರುತ್ತಿದೆ. ಮಹಿಳಾ ಅಧ್ಯಯನವನ್ನು ಕೋರ್ಸ್ ಆಗಿ, ಡಿಪ್ಲೊಮಾ, ಎಂ.ಎ ಪಿಎಚ್.ಡಿ. ಸಂಯೋಜಿತ ಪದವಿ, ಎಂ.ಫಿಲ್. ಪದವಿ ಹಾಗೂ ಪಿಎಚ್.ಡಿ. ಪದವಿಗಳನ್ನು ಆರಂಭಿಸಲಾಗಿದೆ. ಬೋಧನೆಯನ್ನು, ಸಂಶೋಧನೆಯನ್ನು ಅನ್ವಯಿಸಿ ಪಠ್ಯಕ್ರಮಗಳನ್ನು ರೂಪಿಸುವುದು, ಪರಿಷ್ಕಕರಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಮತ್ತೆ ಮತ್ತೆ ಮಾಡಲಾಗುತ್ತದೆ.
ವಿಭಾಗದ ಧ್ಯೇಯೋದ್ದೇಶಕ್ಕೆ ಪೂರಕವಾಗಿ ಯುಜಿಸಿಯಿಂದ ಅನುದಾನ ಪಡೆದು 10ನೇ ಯೋಜನೆಯಲ್ಲಿ ‘ಮಹಿಳಾ ಅಧ್ಯಯನ ಕೇಂದ್ರ’ವನ್ನು ಆರಂಭಿಸಲಾಗಿದೆ.
ವಿಭಾಗದ ಎಲ್ಲಾ ಅಧ್ಯಾಪಕ ಸದಸ್ಯರು ಈ ಕೇಂದ್ರದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. 2004 ರಿಂದ ಈ ಯುಜಿಸಿ ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರವನ್ನು ಆರಂಭಿಸಲಾಗಿದೆ. ಇಲ್ಲಿಯೂ ಕನ್ನಡ ಬೋಧನೆ, ಸಂಶೋಧನೆ ಹಾಗೂ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಮುನ್ನಡೆಸಿಕೊಂಡು ಬರಲಾಗುತ್ತಿದೆ.
ವಿಭಾಗವು ಈ ಎಲ್ಲಾ ಚಟುವಟಿಕೆಗಳನ್ನು ದಾಖಲಿಸಿ ಓದುಗ ಸಮುದಾಯಕ್ಕೆ ತಲುಪಿಸಲು ಪತ್ರಿಕೆಯೊಂದನ್ನು ರೂಪಿಸಿ ‘ಮಹಿಳಾ ಅಧ್ಯಯನ’ ಎಂಬ ಹೆಸರಿನಲ್ಲಿ ಅರ್ಧವಾರ್ಷಿಕ ನಿಯತಕಾಲಿಕೆಯನ್ನು ತರುತ್ತಿದೆ. ವಿಭಾಗದ ಸಾಮಾಜಿಕ ಯೊಜನೆಗಾಗಿ ‘ಮಹಿಳಾ ಸಾಹಿತ್ಯ ಚರಿತ್ರೆಯನ್ನು ಈಗಾಗಲೇ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸಲಾಗಿದೆ. ಹಾಗೆಯೇ ಅನೇಕ ವೈಯಕ್ತಿಕ ಯೋಜನೆಗಳನ್ನು, ಅನುವಾದಗಳನ್ನು, ಸ್ವತಂತ್ರ ಕೃತಿಗಳನ್ನು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸುವ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ.

ವಿಭಾಗದ ಬೋಧಕರ ವಿವರಗಳು

ಹೆಸರು
ಹುದ್ದೆ
ವಿದ್ಯಾರ್ಹತೆ
ಹೆಚ್ಚಿನ ವಿವರ ...
ಡಾ. ಶಿವಾನಂದ ಎಸ್. ವಿರಕ್ತಮಠ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು,
ನಿರ್ದೇಶಕರು, ಮಹಿಳಾ ಅಧ್ಯಯನ ಕೇಂದ್ರ
ಪಿಎಚ್.ಡಿ
ಹೆಚ್ಚಿನ ವಿವರ ...
ಡಾ. ಶೈಲಜ ಇಂ. ಹಿರೇಮಠ
ಪ್ರಾಧ್ಯಾಪಕರು 
ಪಿಎಚ್.ಡಿ
ಹೆಚ್ಚಿನ ವಿವರ ...
ಡಾ.ಯರ್ರಿಸ್ವಾಮಿ ಈ.
ಸಹಾಯಕ ಪ್ರಾಧ್ಯಾಪಕರು
ಪಿಎಚ್.ಡಿ
 ಹೆಚ್ಚಿನ ವಿವರ ...