ಸ್ವರೂಪ

dravidian-studiesದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವು ಭಾಷಾ ನಿಕಾಯದಲ್ಲಿ ತನ್ನ ಕೆಲಸ ನಿರ್ವಹಿಸುತ್ತಿದೆ. ಮೊದಲು ವಿದೇಶಿ ಮತ್ತು ಭಾರತೀಯ ಭಾಷಾ ವಿಭಾಗವೆಂದು ಕಾರ್ಯನಿರ್ವಹಿಸುತ್ತಿದ್ದ ವಿಭಾಗವು 1998-99 ರಿಂದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವೆಂದು ಕಾರ್ಯನಿರ್ವಹಿಸುತ್ತಿದೆ. ವಿಭಾಗವು ದ್ರಾವಿಡ/ದಕ್ಷಿಣ ಭಾರತ ಅಧ್ಯಯನವನ್ನು ಕೇಂದ್ರವಾಗಿಸಿ ತನ್ನ ಸಂಶೋಧನೆ ಮತ್ತು ಬೋಧನೆಗಳನ್ನು ನಡೆಸಿಕೊಂಡು ಬರುತ್ತಿದೆ. ತೌಲನಿಕ ಅಧ್ಯಯನದ ಮೂಲಕ (ಭಾಷೆ ಮತ್ತು ಸಂಸ್ಕೃತಿ) ಕುರಿತಂತೆ ಅಧ್ಯಯನ ನಡೆಸುವ ಮೂಲಕ ದಾಕ್ಷಿಣಾತ್ಯ ದೇಶ ಭಾಷೆಗಳೊಂದಿಗೆ ತನ್ನ ಸಂಪರ್ಕ ಸಾಧಿಸಿದೆ. ವಿಭಾಗವು ಪಂಚದ್ರಾವಿಡ ಭಾಷೆಗಳೊಂದಿಗೆ (ತೆಲುಗು, ತಮಿಳು, ಮಲೆಯಾಳಂ, ತುಳು ಗಳೊಂದಿಗೆ) ಕನ್ನಡವನ್ನು ಕೇಂದ್ರೀಕರಿಸಿ ಅಧ್ಯಯನ ಕ್ರಮ ರೂಪಿಸಿಕೊಂಡಿದೆ.
ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಕಾರ್ಯಚಟುವಟಿಕೆಗಳಿಗಿಂತ ಮುನ್ನ ವಿದೇಶಿ ಮತ್ತು ಭಾರತೀಯ ಭಾಷಾ ವಿಭಾಗವಾಗಿದ್ದ ಸಂದರ್ಭದಲ್ಲಿ ನಿರ್ವಹಿಸಿದ ಚಟುವಟಿಕೆಗಳನ್ನು ಗಮನಿಸಬಹುದು. ಮೊದಲು ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ಪ್ರಧಾನವಾಗಿಸುವ ಯೋಜನೆಗಳನ್ನು ಪೂರೈಸಲಾಗಿದೆ. ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವೆನಿಸಿದ ಮೇಲೆ ದಕ್ಷಿಣದ ದ್ರಾವಿಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಪ್ರಧಾನವಾಗಿಸಿ ಅಧ್ಯಯನ ನಡೆಸಲಾಗುತ್ತಿದೆ.
ಪ್ರಶಂಸೆ
ಕಳೆದ ಬಾರಿ 2003 ರಲ್ಲಿ ಭೇಟಿ ಮಾಡಿದ ನ್ಯಾಕ್ ಕಮಿಟಿಯು ವಿಭಾಗದ ಕಾರ್ಯಸಾನೆಗಳನ್ನು ಶ್ಲಾಘಿಸಿದೆ.
ಉದ್ದೇಶ
> ದಕ್ಷಿಣ ಭಾರತದ ಭಾಷೆ ಮತ್ತು ಸಂಸ್ಕೃತಿ ಕುರಿತ ತೌಲನಿಕ ಅಧ್ಯಯನ
> ದ್ರಾವಿಡ ಅಧ್ಯಯನಕಾರರಿಗೊಂದು ವೇದಿಕೆಯಾಗಿ ಕೆಲಸ ನಿರ್ವಹಣೆ.
> ಎಂ.ಎ., ಎಂ.ಫಿಲ್., ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಬೋಧನೆ
> ದ್ರಾವಿಡ ಸಾಹಿತ್ಯ ಚರಿತ್ರೆ ಮಾಲಿಕೆ ಯೋಜನೆ
ಸಂಶೋಧನೆ
ದ್ರಾವಿಡ ಅಧ್ಯಯನ/ದಕ್ಷಿಣ ಅಧ್ಯಯನಕ್ಕೆ ಸಂಬಂಧಿಸಿದಂತೆ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ವಿಭಾಗವು ಪ್ರಧಾನವಾಗಿಸಿ ಅಧ್ಯಯನ ಕ್ರಮವನ್ನು ರೂಪಿಸಿಕೊಂಡಿದೆ.
(i) ಯೋಜನೆಗಳನ್ನು ರೂಪಿಸುವಲ್ಲಿ ವಿಭಾಗದ ಸದಸ್ಯರು ವೈಯಕ್ತಿಕ ಮತ್ತು ಸಾಂಸ್ಥಿಕ ಯೋಜನೆಗಳನ್ನು ರೂಪಿಸುವಲ್ಲಿ ದ್ರಾವಿಡ ಅಥವಾ ದಕ್ಷಿಣ ಭಾರತ ಪರಿಕಲ್ಪನೆಯನ್ನು ಕೇಂದ್ರವಾಗಿಸಿ ತೌಲನಿಕ, ಅನುವಾದಿತ ನೆಲೆಗಳನ್ನು ರೂಪಿಸಿಕೊಳ್ಳುವರು. ವಿಭಾಗದಲ್ಲಿ ಬಹುಭಾಷಿಕ ವಿದ್ವಾಂಸರು ಇರುವ ಹಿನ್ನೆಲೆಯಲ್ಲಿ ಬಹುಭಾಷಿಕ ನೆಲೆಯ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಿದೆ.
(ii) ವಿದ್ಯಾರ್ಥಿಗಳು ಸಂಶೋಧನಾ ವಿಷಯ ಆಯ್ಕೆ ಮಾಡುವಲ್ಲಿ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ದ್ರಾವಿಡ ಅಥವಾ ದಕ್ಷಿಣ ಭಾರತ ಕುರಿತ ವಿಷಯಗಳ ತೌಲನಿಕ, ಅನುವಾದಿತ, ಭಾಷಿಕ ನೆಲೆಗಳಲ್ಲಿ ಕನ್ನಡವನ್ನು ಕೇಂದ್ರವಾಗಿರಿಸಿ ಅಧ್ಯಯನ ನಡೆಸುವರು.
(iii) ವಿಚಾರ ಸಂಕಿರಣಗಳನ್ನು ನಡೆಸುವಲ್ಲಿ ವಿಭಾಗವು ಇದುವರೆಗೆ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಿಕೊಂಡು ಬಂದಿದೆ. ದಕ್ಷಿಣ ಭಾರತದ ಇತರ ವಿಶ್ವವಿದ್ಯಾಲಯಗಳ ಸಹಭಾಗಿತ್ವದೊಡನೆ ವಿಚಾರಸಂಕಿರಣಗಳನ್ನು ನಡೆಸಿಕೊಂಡು ಬಂದಿರುವುದು ವಿಭಾಗದ ಹೆಮ್ಮೆ. ದ್ರಾವಿಡ ಚಿಂತನೆ ನಡೆಸಲು ಇದೊಂದು ಸಮರ್ಪಕ ವೇದಿಕೆಯಾಗುವುದು.
ದ್ರಾವಿಡ ಕಾವ್ಯ ಮೀಮಾಂಸೆ
ದ್ರಾವಿಡ ಸಿನಿಮಾ ಮತ್ತು ದೇಸೀಯತೆ
ದ್ರಾವಿಡ ನಿಘಂಟು
ದ್ರಾವಿಡ ವ್ಯಾಕರಣ
ದ್ರಾವಿಡ ಛಂದಸ್ಸು
ದಕ್ಷಿಣ ಭಾರತ ಮತ್ತು ಮೌಖಿಕ ಪರಂಪರೆ
ದಕ್ಷಿಣ ಭಾರತ ಮತ್ತು ಜೈನಧರ್ಮ
ದಕ್ಷಿಣ ಭಾರತ ಮತ್ತು ಜನಪದ ರಂಗಭೂಮಿ
ದ್ರಾವಿಡ ಕೃತಿಗಳು ಮತ್ತು ಭಾಷಾಂತರ ಪ್ರಕ್ರಿಯೆ
ದ್ರಾವಿಡ ಸಾಹಿತ್ಯ ಮತ್ತು ದೇಸೀ ಸಂಸ್ಕೃತಿ
ದ್ರಾವಿಡ ಅಧ್ಯಯನಕ್ಕೆ ವೇದಿಕೆಯಾಗುವ ಮೂಲಕ
ವಿಭಾಗದ ಸದಸ್ಯರುಗಳು ಮತ್ತು ಇತರ ವಿದ್ವಾಂಸರುಗಳಿಂದ ಮಂಡಿತಗೊಂಡ ದ್ರಾವಿಡ ಚಿಂತನೆಗಳನ್ನು ‘ದ್ರಾವಿಡ ಅಧ್ಯಯನ’ ಪತ್ರಿಕೆ ಮೂಲಕ ಒಂದೆಡೆ ತರುವುದು ಇಲ್ಲಿನ ಪ್ರಮುಖ ಆಶಯ. ದ್ರಾವಿಡ ಅಧ್ಯಯನದ ಮೂಲಕ ದ್ರಾವಿಡ – ದ್ರಾವಿಡ ಅಧ್ಯಯನಕಾರರಿಗೊಂದು ವೇದಿಕೆ ಕಲ್ಪಿಸುವುದು ವಿಭಾಗದ ಧ್ಯೇಯವಾಗಿದೆ.
ಇತರ ದ್ರಾವಿಡ ಭಾಷೆ ಸಂಸ್ಕೃತಿಗಳೊಂದಿಗೆ ಸಂವಾದ ನಡೆಸುವ ಮೂಲಕ ವಿಭಾಗವು ದ್ರಾವಿಡ ಚಿಂತನೆಯ ವೇದಿಕೆಯಾಗುವುದು ವಿಭಾಗದ ಆಶಯ. ತೆಲುಗು ಅಭಿಶಿಕ್ಷಣ ಕಾರ್ಯಕ್ರಮವೊಂದನ್ನು ವಿಭಾಗವು ಈಗಾಗಲೇ ಈ ಹಿನ್ನೆಲೆಯಲ್ಲಿ ಆಯೋಜಿಸಿದೆ.
ಬೋಧನೆ
ವಿಭಾಗದ ಸದಸ್ಯರು ಎಂ. ಎ. ಕೋರ್ಸಿನ ಪತ್ರಿಕೆಗಳನ್ನು ಪಾಠ ಮಾಡುವುದು.
ಅಲ್ಲದೇ ದ್ರಾವಿಡ ಅಧ್ಯಯನವನ್ನು ಐಚ್ಫಿಕ ವಿಷಯವಾಗಿ ಉಳ್ಳ ಎಂ.ಎ.ಪಿಎಚ್.ಡಿ. ಸಂಯೋಜಿತ ಪದವಿ ಹಾಗೂ ಎಂ.ಫಿಲ್. ತರಗತಿಗಳಿಗೆ ಪಾಠ ಮಾಡುವರು.
ಎಂ.ಫಿಲ್. ಹಾಗೂ ಪಿಎಚ್.ಡಿ. ಕೋರ್ಸ್ ಗಳಿಗೂ ಪಾಠ ಮಾಡುವರು.
ದೂರಶಿಕ್ಷಣ ಕೇಂದ್ರದ ದ್ರಾವಿಡ ಅಧ್ಯಯನ ಡಿಪ್ಲೊಮಾ ತರಗತಿಗಳಿಗೆ ಪಾಠ ಮಾಡುವರು.
ದ್ರಾವಿಡ ಸಾಹಿತ್ಯ ಚರಿತ್ರೆ ಮಾಲಿಕೆ
ವಿಭಾಗವು ಪಂಚದ್ರಾವಿಡ ಭಾಷೆಗಳಿಗೆ ಸಂಬಂಧಿಸಿದ ದ್ರಾವಿಡ ಭಾಷೆ – ಸಾಹಿತ್ಯ – ಸಂಸ್ಕೃತಿಗಳನ್ನು ಒಳಗೊಂಡ ಸಾಹಿತ್ಯ ಚರಿತ್ರೆಗಳನ್ನು ನಿರ್ಮಾಣ ಮಾಡುವ ಯೋಜನೆಯೊಂದನ್ನು ರೂಪಿಸಿದೆ. ವಿಶ್ವಕೋಶ ಮಾದರಿಯಂತೆ ಇದು ರೂಪಗೊಂಡಿದೆ. ತುಳು ಸಾಹಿತ್ಯ ಚರಿತ್ರೆಗಳನ್ನು ನಿರ್ಮಾಣ ಮಾಡುವ ಯೋಜನೆಯೊಂದನ್ನು ರೂಪಿಸಿದೆ. ವಿಶ್ವಕೋಶ ಮಾದರಿಯಂತೆ ಇದು ರೂಪಗೊಂಡಿದೆ. ತುಳು ಸಾಹಿತ್ಯ ಚರಿತ್ರೆ ಈ ಮಾಲಿಕೆಯಲ್ಲಿ ಮೊದಲನೆಯದು. ತೆಲುಗು ಸಾಹಿತ್ಯ ಚರಿತ್ರೆ ರೂಪಿಸುವಲ್ಲಿ ವಿಭಾಗವು ಸದ್ಯ ತೊಡಗಿಸಿಕೊಂಡಿದೆ.
ವಿಭಾಗದ ಯೋಜನೆಗಳು
ವಿಭಾಗವು ಮಹತ್ವದ ಮೈಲಿಗಲ್ಲುಗಳಂತಹ ಯೋಜನೆಗಳನ್ನು ಈಗಾಗಲೇ ನಿರ್ವಹಿಸುತ್ತಲೇ ಇನ್ನೂ ಹತ್ತು ಹಲವಾರು ಯೋಜನೆಗಳಲ್ಲಿ ಸದ್ಯ ತೊಡಗಿಸಿಕೊಂಡಿದೆ.
1. ಶಿವತತ್ವರತ್ನಾಕರ
2. ಭಾರತೀಯ ಕಾವ್ಯಶಾಸ್ತ್ರ ಪರಿಭಾಷೆ
3. ದ್ರಾವಿಡ ಸಾಹಿತ್ಯ ಅನುವಾದ ಕೃತಿ ದರ್ಶನ
4. ದ್ರಾವಿಡ ನಿಘಂಟು
5. ದಕ್ಷಿಣ ಭಾರತ ವಿಶ್ವಕೋಶ
6. ದಕ್ಷಿಣ ಭಾರತ ಅನುಭಾವ ಪರಂಪರೆ
7. ತುಳು ಸಾಹಿತ್ಯ ಚರಿತ್ರೆ
8. ತೌಲನಿಕ ದ್ರಾವಿಡ ವ್ಯಾಕರಣ
9. ತೆಲುಗು ದಾಕ್ಷಿಣಾತ್ಯ ಸಾಹಿತ್ಯ
10. ಅಚ್ಯುತರಾಯಾಭ್ಯುದಯಂ
11. ತೆಲುಗು ಸಾಹಿತ್ಯ ಚರಿತ್ರೆ (ಮುಂದುವರೆದಿದೆ)
12. ದ್ರಾವಿಡ ನಿಘಂಟು ಪರಿಷ್ಕರಣೆ (ಮುಂದುವರೆದಿದೆ)

ಮುಂದಿನ ಕಾರ್ಯಕ್ರಮಗಳು
* ದ್ರಾವಿಡ ಅಧ್ಯಯನ ಸ್ನಾತಕೋತ್ತರ ಅಧ್ಯಯನ
* ದ್ರಾವಿಡ ಅಧ್ಯಯನವನ್ನು ಪ್ರಧಾನವಾಗಿರಿಸಿದ ಸ್ನಾತಕೋತ್ತರ ಪದವಿ ಆರಂಭಿಸುವುದು ವಿಭಾಗದ ಆಶಯ. ಇದಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮವೊಂದನ್ನು ತಯಾರಿಸಲಾಗಿದೆ.
* ದ್ರಾವಿಡ ಗ್ರಂಥಾಲಯ ಪತ್ರಾಗಾರ
ದ್ರಾವಿಡ ಅಧ್ಯಯನಕ್ಕೆ ಸಂಬಂಧಿಸಿದ ಸುಸಜ್ಜಿತ ಗ್ರಂಧಾಲಯ ಹೊಂದುವದು ವಿಭಾಗದ ಆಶಯ. ದಕ್ಷಿಣಭಾರತ ಅಧ್ಯಯನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಲಭ್ಯವಾಗುವ ಪತ್ರಾಗಾರ ಕೂಡ ವಿಭಾಗದ ಹೊಂಗನಸು.
* ದ್ರಾವಿಡ ಭಾಷಾಧ್ಯಯನಕಾರರಿಗೆ ದ್ರಾವಿಡ ಭಾಷೆ – ಭಾಷೆಗಳ ನಡುವೆ ಸಂವಾದ ನಡೆಸುವ ಮೂಲಕ ದ್ರಾವಿಡ ಚಿಂತನೆಯ ವೇದಿಕೆ ನಿರ್ಮಿಸುವುದು.
ಪ್ರಕಟಣೆಗಳು
1. ಶಿವತತ್ವರತ್ನಾಕರ – ಸಂಸ್ಕೃತದ ಅನುವಾದ – ಸಂ. ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್
2. ಭಾರತೀಯ ಕಾವ್ಯಶಾಸ್ತ್ರ ಪರಿಭಾಷೆ – ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್
3. ತೆಲುಗು ದಾಕ್ಷಿಣಾತ್ಯ ಸಾಹಿತ್ಯ ತೆಲುಗಿನಿಂದ ಅನುವಾದ ಸಿ. ವೆಂಕಟೇಶ್
4. ದ್ರಾವಿಡ ನಿಘಂಟು -ಡಾ. ಮೋಹನ್ ಕುಂಟಾರ , ಡಾ. ಸುಬ್ಬಣ್ಣ ರೈ , ಡಾ. ಮಾಧವ ಕೆ.ಕೆ., ಶ್ರೀ. ಸಿ. ವೆಂಕಟೇಶ್
5. ದ್ರಾವಿಡ ಶಾಸ್ತ್ರ – ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್
6. ತೌಲನಿಕ ದ್ರಾವಿಡ ವ್ಯಾಕರಣ – ಅನು ಡಾ. ಮಾಧವ ಕೆ. ಕೆ.
7. ತುಳು ಸಾಹಿತ್ಯ ಚರಿತ್ರೆ – ಪ್ರೊ. ಎ. ವಿ. ನಾವಡ , ಡಾ. ವಾಮನ ನಂದಾವರ , ಡಾ. ಸುಬ್ಬಣ್ಣ ರೈ , ಡಾ. ಮಾಧವ ಕೆ. ಕೆ.

ವಿಭಾಗದ ಬೋಧಕರ ವಿವರಗಳು

ಹೆಸರು

ಹುದ್ದೆ

ವಿದ್ಯಾರ್ಹತೆ

ಡಾ. ಎ. ಸುಬ್ಬಣ್ಣ ರೈ

ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ …

ಡಾ .ಕೆ.ಕೆ. ಮಾಧವ

ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ …

ಸಿ. ವೆಂಕಟೇಶ್

ಸಹ ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ …

ಡಾ ಸುಚೇತ ನವರತ್ನ

ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು

ಪಿಎಚ್.ಡಿ
ಹೆಚ್ಚಿನ ವಿವರ …