ಕನ್ನಡ ಭಾಷಾಧ್ಯಯನ ವಿಭಾಗ


 

ಕನ್ನಡ ಭಾಷೆಯನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುವ ಉದ್ದೇಶದಿಂದ ಕನ್ನಡ ಭಾಷಾಧ್ಯಯನ ವಿಭಾಗವು ಹುಟ್ಟಿಕೊಂಡಿದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಕನ್ನಡ ಭಾಷೆಯ ರಚನೆ ಮತ್ತು ಬಳಕೆಯಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತಿವೆ. ಅನೇಕ ಶತಮಾನಗಳಲ್ಲಿ ಆದ ಬದಲಾವಣೆಗಳಿಗಿಂತ ಕಳೆದ ಎರಡು ದಶಕಗಳಲ್ಲಿನ ನಡೆದಿರುವ ಬದಲಾವಣೆಗಳು ತೀವ್ರವಾಗಿವೆ. ಈ ಬದಲಾವಣೆಗಳನ್ನು ಗುರುತಿಸುವ ಮತ್ತು ಅದಕ್ಕೆ ಕಾರಣಗಳನ್ನು ಹುಡುಕುವ ಉದ್ದೇಶದ ಹಿನ್ನೆಲೆಯಲ್ಲಿ ವಿಭಾಗ ಅನೇಕ ಯೋಜನೆಗಳನ್ನು ಹಾಕಿಕೊಂಡು ಕೆಲಸ ನಿರ್ವಹಿಸುತ್ತಿದೆ. ಈಗಾಗಲೇ ವಿಭಾಗವು ಈ ಬಗೆಯ ಕೆಲವು ಯೋಜನೆಗಳನ್ನು ಪೂರ್ಣಗೊಳಿಸಿದೆ. ಅವುಗಳಲ್ಲಿ ಕನ್ನಡದ ಉಪಭಾಷೆಗಳ ದಾಖಲೀಕರಣ. ಆಧುನಿಕತೆಯಿಂದ ಕಳೆದುಹೋಗುತ್ತಿರುವ ವೃತ್ತಿಗಳ ಪದಕೋಶಗಳು - ಕೃಷಿ, ಕಂಬಾರ, ಕುಂಬಾರ, ನೇಕಾರ, ಮುಂತಾದ ವೃತ್ತಿಗಳು-ದಾಖಲೀಕರಿಸಲಾಗಿದೆ. ಕನ್ನಡ ಭಾಷೆಯ ವಿಶ್ವಕೋಶವನ್ನು ಸಿದ್ಧಗೊಳಿಸಲಾಗಿದೆ. ಅಲ್ಲದೆ ಎರಡು ಬಾರಿ ಪರಿಷ್ಕರಿಸಿದ ಆವೃತ್ತಿಗಳು ಬಂದಿವೆ. ಕನ್ನಡದಲ್ಲಿ ಕನ್ನಡದ್ದೇ ಪದಗಳಂತೆ ಬಳಕೆಯಾಗುತ್ತಿರುವ ಇಂಗ್ಲೀಶ್ ಪದಗಳ ಕೋಶವೊಂದನ್ನು ಸಿದ್ಧಪಡಿಸಲಾಗಿದೆ. ಕನ್ನಡದ ಉಪಭಾಷೆಗಳ ಪದಕೋಶವೊಂದನ್ನು ಸಿದ್ಧಗೊಳಿಸುವ ಕೆಲಸ ನಡೆಯುತ್ತಿದೆ. ಕನ್ನಡ ಭಾಷೆಯ ರಚನೆ ಮತ್ತು ಬಳಕೆ ಕುರಿತಂತೆ ಕರ್ನಾಟಕದಾದ್ಯಂತ ಅನೇಕ ಕಮ್ಮಟಗಳನ್ನು ಹಮ್ಮಿಕೊಂಡು ಆಧುನಿಕ ಚಿಂತನೆಗಳ ಪ್ರಸಾರ ಕಾರ್ಯವನ್ನು ಕೈಗೊಂಡಿದೆ. ಅಲ್ಲದೆ ಕನ್ನಡ ಭಾಷಾಭಿವೃದ್ಧಿ, ಸಾಧನೆ ಮತ್ತು ಮುನ್ನೋಟ ಕುರಿತ ವಿಚಾರ ಸಂಕಿರಣಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಕನ್ನಡದ ಮೂಲಕವೇ ಕನ್ನಡ ಭಾಷೆಯ ರಚನೆ ಮತ್ತು ಬಳಕೆಯನ್ನು ಅರಿಯುವ, ಚಿಂತನೆ ಮಾಡುವ ಮತ್ತು ಬೆಳೆಸುವ ದೃಷ್ಟಿಕೋನದ ಹಿನ್ನೆಲೆಯಲ್ಲಿ ವಿಭಾಗ ಕಾರ್ಯಕ್ರಮಗಳನ್ನು ರೂಪಿಸುವ ಮಹದುದ್ದೇಶ ಹೊಂದಿದೆ.

ವಿಭಾಗದ ಬೋಧಕರ ವಿವರಗಳು

ಹೆಸರು

ಹುದ್ದೆ

ವಿದ್ಯಾರ್ಹತೆ

 

ಡಾ. ಡಿ. ಪಾಂಡುರಂಗಬಾಬು

ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ ...

ಡಾ ಅಶೋಕ ಕುಮಾರ

ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು

ಪಿಎಚ್.ಡಿ
ಹೆಚ್ಚಿನ ವಿವರ ...

ಡಾ. ಸಾಂಬಮೂರ್ತಿ

ಸಹ ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ ...

ಡಾ. ಪಿ. ಮಹಾದೇವಯ್ಯ

ಸಹ ಪ್ರಾಧ್ಯಾಪಕರು

ಪಿಎಚ್.ಡಿ
ಹೆಚ್ಚಿನ ವಿವರ ...


 
   
   
   
 

 

2011 © ಕನ್ನಡ ವಿಶ್ವವಿದ್ಯಾಲಯ, ಹಂಪಿ | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
Browser Support - Internet Explorer 7 and above | Best Viewed Resolution - 1024 X 768 Pixels