ನಮ್ಮ ಬಗ್ಗೆಮಾನ್ಯ ಕುಲಪತಿಗಳುಕನ್ನಡ ವಿಶ್ವವಿದ್ಯಾಲಯ


ಅಧ್ಯಯನಾಂಗ

ದೂರಶಿಕ್ಷಣ

ಗ್ರಂಥಾಲಯ

ಸಿರಿಗನ್ನಡ

ವಸ್ತುಸಂಗ್ರಹಾಲಯ


 

ಪುರಾಣ ಮತ್ತು ಇತಿಹಾಸಗಳ ಸಂಗಮ ಕ್ಷೇತ್ರ ಹಂಪಿ. ಪ್ರಾಚೀನ ಉಲ್ಲೇಖಗಳ ಪ್ರಕಾರ ಜಗತ್ತಿನ ಮಾತಾ-ಪಿತರೆನಿಸಿದ ಶಿವ-ಪಾರ್ವತಿಯರು ವಿವಾಹವಾದ ಸ್ಥಳ ಇದು. ರಾಮಾಯಣದ ಕಾಲದಲ್ಲಿ ಅವತಾರ ಪುರುಷರೆನಿಸಿದ ರಾಮ ಮತ್ತು ಹನುಮಂತರು ಪರಸ್ವರ ಮುಖಾಮುಖಿಯಾಗಿ ಒಬ್ಬರ ಮನಸ್ಸು ಮತ್ತೊಬ್ಬರ ಮನಸ್ಸಿನಲ್ಲಿ ಸಂಲಗ್ನಗೊಳಿಸಿಕೊಂಡ ಸ್ಥಳ ಇದು. ಧಾರ್ಮಿಕವಾಗಿ ಭಾರತದ ಮುಖ್ಯ ಧರ್ಮಗಳಾದ ಬೌದ್ಧ, ಜೈನ, ಶೈವ, ವೀರಶೈವ, ವೈಷ್ಣವ ಮತ್ತು ಇಸ್ಲಾಂ ಧರ್ಮಗಳು ನೆಲೆಗೊಂಡು ಪರಸ್ವರ ಸಾಮರಸ್ಯದಿಂದ ಬದುಕಿದ ಮತ್ತು ತಮ್ಮ ಸುತ್ತ ವಿಶಿಷ್ಟ ಧಾರ್ಮಿಕ ಸಂಸ್ಕೃತಿಯನ್ನು ಹುಟ್ಟುಹಾಕಿದ ಸ್ಥಳ ಇದು. ಐತಿಹಾಸಿಕವಾಗಿ ಶಿಲಾಯುಗದ ಪ್ರಾಚೀನ ಅವಶೇಷಗಳನ್ನು ಗರ್ಭೀಕರಿಸಿಕೊಂಡಿರುವ ಪುರಾತನ ಪ್ರದೇಶ ಇದು. ಕರ್ನಾಟಕ ಸುಪ್ರಖ್ಯಾತ ಅರಸು ಮನೆತನಗಳಾದ ಹೊಯ್ಸಳರು, ಸಿಂಧರು, ಕಂಪಿಲ ಅರಸರು ಆಳಿದ ಮತ್ತು ತನ್ನ ವೈಭವ, ಶ್ರೀಮಂತಿಕೆ, ಕಲಾವಂತಿಕೆ, ಧೈರ್ಯ-ಸ್ಥೈರ್ಯಗಳ ಮೂಲಕ ವಿಶ್ವವಿ ಖ್ಯಾತಿ ಯನ್ನು ಪಡೆದ ವಿಜಯನಗರ ಮಹಾಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದು ಮೂರು ಶತಮಾನಗಳ ಕಾಲ ಜಗತ್ತಿನ ಕಣ್ಣು ಕುಕ್ಕುವಂತೆ ಮೆರೆದ ಸ್ಥಳವಿದು.

ಕವಿಗಳಾದ ಹರಿಹರ, ರಾಘವಾಂಕ, ಕುಮಾರವ್ಯಾಸರಂಥ ಕನ್ನಡದ ಸುಪ್ರಸಿದ್ಧ ಕವಿಗಳು, ಪುರಂದರದಾಸ, ಕನಕದಾಸ ಮುಂತಾದ ದಾರ್ಶನಿಕ ಕೀರ್ತನಕಾರರು ತಮ್ಮ ಸಾಹಿತ್ಯಕ ಶಕ್ತಿ ಮತ್ತು ದೈ ವಭಕ್ತಿಗಳನ್ನು ನಾಡಿನ ತುಂಬ ಹರಿಯಿಸಿದ ಜಾಗೃತ ಕ್ಷೇತ್ರವಿದು. ವಿರೂಪಾಕ್ಷ, ವಿಜಯವಿಠ್ಠಲ, ಹಜಾರರಾಮ ಮುಂತಾದ ಅಪರೂಪದ ಶಿಲ್ಪಕಲಾ ಸಂಗಮವೆನಿಸಿದ ದೇವಾಲಯಗಳು ರೂಪುಗೊಂಡು ಕನ್ನಡ ಜನತೆಯ ಭಕ್ತಿ-ಶಕ್ತಿಗಳ ಸಂಕೇತವಾಗಿ ಕೀರ್ತಿ ಪಡೆದ ಮಹಾಕ್ಷೇತ್ರ ಇದು. ಹೀಗೆ ಮತ್ತು ಹಲವು ದೃಷ್ಟಿಗಳಿಂದ ರಾಜಕಾರಣ, ಸಂಸ್ಕೃತಿ, ಧರ್ಮ, ರಾಷ್ಟ್ರಪ್ರೇಮ, ಕಲೆ, ಸಂಪತ್ತು ಮುಂತಾದ ಕಾರಣಗಳಿಂದಾಗಿ ವಿಶ್ವವ್ಯಾಪಕ ಪ್ರಸಿದ್ಧಿಯನ್ನು ಪಡೆದಿರುವ ಹಂಪಿ ಮೂಲತಃ ವಿದ್ಯಾನಗರವಾಗಿ ಮೂಡಿ, ಅನಂತರ ವಿಜಯನಗರವಾಗಿ ಅರಳಿ ಈಗ ವಿಶ್ವವಿದ್ಯಾಲಯ ನಗರವಾಗಿ ರೂಪುಗೊಂಡಿದೆ.

ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯಾಗಿಸುವತ್ತ

ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವ ಪೂ ರ್ಣವೂ ಆದ ವಿಶಿಷ್ಟ ಘ ಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘ ಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯ ಪೂ ರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮ ರ್ಥ್ಯ ಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಭಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂ ಪೂ ರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; "ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು" ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವ ಪೂ ರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪು ಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ 900 ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂ ಥ ಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಅಧ್ಯಯನಾಂಗ

ಅಧ್ಯಯನಾಂಗವು ಈ ವಿಶ್ವವಿದ್ಯಾಲಯದ ಹೃದಯಸ್ಥಾನವಾಗಿದ್ದು ಸಂಶೋಧನಾ ಕಾರ್ಯವನ್ನು ಪ್ರಧಾನವಾಗಿ, ಬೋಧನಕಾರ್ಯವನ್ನು ಪೂರಕವಾಗಿ ಯೋಜಿಸುತ್ತ, ಯೋಜನೆಗಳನ್ನು ಕಾರ್ಯಗತಗೊಳಿಸುತ್ತದೆ. ಪದವಿ, ಡಿಪ್ಲೊಮಾ, ಎಂ.ಫಿಲ್., ಪಿಎಚ್.ಡಿ., ಡಿ.ಲಿಟ್. ಮೊದಲಾದವುಗಳ ಪಠ್ಯಕ್ರಮ, ಕಾರ್ಯಾಗಾರ, ನೋಂದಣಿ, ಪರೀಕ್ಷೆಗಳನ್ನು ಇದು ನೋಡಿಕೊಳ್ಳುತ್ತದೆ. ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಶಿಕ್ಷಣ ಇಲಾಖೆ, ಭಾರತೀಯ ವಿಶ್ವವಿದ್ಯಾಲಯ ಸಂಸ್ಥೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗಗಳೊಂದಿಗೆ ಸಂಬಂಧವನ್ನು ಬೆಳೆಸಿ, ವಿಶ್ವವಿದ್ಯಾಲಯದ ಶೈಕ್ಷಣಿಕ ಸಂವರ್ಧನೆಗೆ ದುಡಿಯುತ್ತಿದೆ.

ದೂರಶಿಕ್ಷಣ ಕೇಂದ್ರ

ಕನ್ನಡ ವಿಶ್ವವಿದ್ಯಾಲಯವು ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವ ಒಂದು ಸಂಸ್ಥೆ. ಪಶ್ಚಿಮದಿಂದ ಹರಿದು ಬರುವ ಜ್ಞಾನ ಪ್ರವಾಹವನ್ನು ಹಾಗೂ ನಮ್ಮ ನಾಡಿನ ಹಳೆಯ ಕಾಲದ ತಿಳುವಳಿಕೆಗಳು ಒಂದುಕ್ಕೊಂದು ಸಂಧಿಸಿ ಹೊಸ ಬೆಳಕನ್ನು ಬೀರಿವೆ. ಇಂತಹ ಹೊಸ ತಿಳುವಳಿಕೆಗಳ ವಿವೇಕಯುತವಾದ ವಿನಿಯೋಗ ಹಾಗೂ ವಿನಿಯೋಗಕ್ಕಾಗಿ ಹೊಸ ವಿನಿಮಯ ನೆಡೆಸಲು ಹಾಗೂ ಅರಿವನ್ನು ಎಲ್ಲರೂ ಹಂಚಿಕೊಳ್ಳಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಗುರಿ ಕನ್ನಡ ಸಂಸ್ಕೃತಿಯ ಶೋಧ, ವಿಮರ್ಶೆ ಮತ್ತು ಪ್ರಸಾರ. ನಮ್ಮ ಸಂಸ್ಕೃತಿಗಳ ವಿವೇಕಪೂರ್ಣ ವಿನಿಯೋಗದಲ್ಲೇ ಕನ್ನಡ ವಿಶ್ವವಿದ್ಯಾಲಯವು ಹತ್ತು ವರ್ಷಗಳ ಹರೆಯದ ಸಂಭ್ರಮದಲ್ಲಿದೆ . ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ಕನ್ನಡ ನಾಡಿನೆಲ್ಲೆಡೆ ನೆಲೆಸಿರುವ ಜ್ಞಾನದಾಹಿಗಳಿಗೆ ದೂರಶಿಕ್ಷಣ ಕಾರ್ಯಕ್ರಮದ ಮೂಲಕ ಜ್ಞಾನ ಪ್ರಸಾರವನ್ನು ಮಾಡುವ ಮಹತ್ವದ ಯೋಜನೆಯನ್ನು ಹಮ್ಮಿಕೊಂಡಿದೆ.

ದೂರಶಿಕ್ಷಣ ಎಂಬ ಪದವೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಇಂದು ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಪರ್ಯಾಯವಾಗಿ ಬಳಕೆಯಾಗುತ್ತಿರುವ ಪದವಿದು. ಇದು ಭಾರತೀಯ ಸಂದರ್ಭದಲ್ಲಿ ವಿನೂತನ ಪದವೇ ಆಗಿದೆ. ಸಾಮಾನ್ಯವಾಗಿ ಶಿಕ್ಷಣದ ಮೂಲಕ ವ್ಯಕ್ತಿಯ ಜ್ಞಾನ, ಪ್ರತಿಭೆ ಹಾಗೂ ಪ್ರವೃತ್ತಿಗಳನ್ನು ಹೆಚ್ಚಿಸುವ ಕೆಲಸ ನಡೆಸಲಾಗುತ್ತಿದೆ. ಅದಕ್ಕಾಗಿ ಹಂತಹಂತವಾಗಿ ಅಂದರೆ ಪ್ರಾಥಮಿಕ, ಮಾಧ್ಯವಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣಗಳನ್ನು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ತರಗತಿ ಎಂಬ ಕೋಣೆಯಲ್ಲಿ ನಿರ್ದಿಷ್ಟ ಅವಧಿಗಳಲ್ಲಿ ಕೊಡಲಾಗುತ್ತಿದೆ. ಇಂತಹ ಶಿಕ್ಷಣದಲ್ಲಿ ಸಾಮಾನ್ಯವಾಗಿ ಪುಸ್ತಕದ ಜ್ಞಾನವು ಅಧ್ಯಾಪಕರು ಮತ್ತು ವಿದ್ಯಾಗಳು ಮುಖಾಮುಖಿ ಆಗುವುದರ ಮೂಲಕ ಅಥವಾ ಪರಸ್ಪರ ಅಧ್ಯಾಪನ ಮತ್ತು ಪ್ರಶ್ನೆ ಉತ್ತರಗಳ ರೂಪದಲ್ಲಿ ಪ್ರಸಾರವಾಗುತ್ತಿರುತ್ತದೆ. ವಿದ್ಯಾ ರ್ಥಿ ಗಳು ಮತ್ತು ಅಧ್ಯಾಪಕರು ಪರಸ್ಪರ ಕೇಳಿ ಅರಿತುಕೊಳ್ಳುವ ಶಿಕ್ಷಣ ವ್ಯವಸ್ಥೆಯಲ್ಲಿ ದೂರಶಿಕ್ಷಣವನ್ನು ಸುಮಾರು 150 ವರ್ಷಗಳ ಹಿಂದೆ ಪಾಶ್ಚಾತ್ಯ ದೇಶಗಳಲ್ಲಿ ಅಳವಡಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿಯೂ ಅನೇಕ ವಿಶ್ವವಿದ್ಯಾಲಯಗಳು ದೂರಶಿಕ್ಷಣದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜ್ಞಾನ ಪ್ರಸಾರದಲ್ಲಿ ತೊಡಗಿವೆ.

ಆಧುನಿಕ ದಿನಗಳಲ್ಲಿ ಜ್ಞಾನವನ್ನು ಸಂಪಾದಿಸಲು ಅನೇಕ ದಾರಿಗಳಿವೆ. ವಿಶ್ವವಿದ್ಯಾಲಯದಂತಹ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ತರಗತಿಯ ಕೋಣೆಗಳಲ್ಲಿ ನಿರ್ದಿಷ್ಟ ಅವಧಿಗಳ ಕಾಲ ಕುಳಿತು ಕಲಿಯುವುದರ ಬದಲಾಗಿ ವಿಶ್ವವಿದ್ಯಾಲಯದಿಂದ ಸಾವಿರಾರು ಮೈಲು ದೂರವಿದ್ದೂ ಶಿಕ್ಷಣವನ್ನು ಪಡೆಯುವ ವ್ಯವಸ್ಥೆಯೇ ದೂರಶಿಕ್ಷಣ. ಅಂಚೆಯ ಲ್ಲಿ ಪಾಠಗಳನ್ನು ವಿದ್ಯಾ ರ್ಥಿ ಗಳಿಗೆ ನಿಗದಿತವಾಗಿ ರವಾನಿಸುವುದರ ಮೂಲಕ ಶಿಕ್ಷಣದ ಪ್ರಸಾರವಿರುತ್ತದೆ. ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವವರು, ಗೃಹಿಣಿಯರು ಮೊದಲಾದವರಿಗೆ ತಾವಿದ್ದ ಸ್ಥಳದಲ್ಲಿಯೇ ಅಧ್ಯಯನ ಮಾಡಲು ಅನುಕೂಲವಾಗುವಂತೆ ಇಂತಹ ಶಿಕ್ಷಣಗಳನ್ನು ರೂಪಿಸಲಾಗುತ್ತದೆ. ತಮ್ಮ ಕಲಿಕೆ ಹಾಗೂ ನಡೆನುಡಿಗ ಳ ಲ್ಲಿ ಜ್ಞಾನ ತಿಳುವಳಿಕೆಗಳನ್ನು ಸ್ವೀಕರಿಸುವಲ್ಲಿ ರೂಪಿಸಿಕೊಳ್ಳುವ ಶಿಸ್ತನ್ನು, ಸಂವಹನ ಸಾಮಥ್ರ್ಯವನ್ನು ದೂರಶಿಕ್ಷಣದ ಮೂಲಕವೂ ತರಗತಿಗಳಲ್ಲಿ ಅಧ್ಯಾಪಕರ ಮುಂದೆ ಕುಳಿತ ಪಾಠ ಕೇಳುವ ವಿದ್ಯಾ ರ್ಥಿ ಗಳು ರೂಢಿಸಿಕೊಳ್ಳುವಂತೆ ವಿದ್ಯಾ ರ್ಥಿ ಗಳು ರೂಢಿಸಿಕೊಳ್ಳಬಲ್ಲರು ಎಂಬುದನ್ನು ಈಗಾಗಲೇ ದೂರಶಿಕ್ಷಣ ವ್ಯವಸ್ಥೆ ಸಾಧಿಸಿ ತೋರಿಸಿದೆ. ಪ್ರಾಯೋಗಿಕವಾದ ಹಾಗೂ ಪರಿಣಾಮಕಾರಿಯಾದ ವಿಧಾನಗಳ ಮೂಲಕ ದೂರಶಿಕ್ಷಣದಲ್ಲಿ ಜ್ಞಾನವನ್ನು ಪಡೆಯಬಹುದು ಎಂಬುದನ್ನು ಈಗಾಗಲೇ ಅನೇಕ ವಿಶ್ವವಿದ್ಯಾಲಯಗಳು ಮಾಡಿ ತೋರಿಸಿವೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಅಲ್ಲದೆ ಮೈಸೂರು, ಬೆಂಗಳೂರು, ಕರ್ನಾಟಕ, ಕುವೆಂಪು, ದೆಹಲಿ, ಪಂಜಾಬ್, ಮದ್ರಾಸ್, ಮದುರೈ ಕಾಮರಾಜ, ಅಣ್ಣಾಮಲೈ, ಆಂಧ್ರ ಮೊದಲಾದ ವಿಶ್ವವಿದ್ಯಾಲಯಗಳು ತಮ್ಮ ದೂರ ಶಿ ಕ್ಷಣ ವಿಭಾಗಗಳ ಮೂಲಕ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ.

ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ವಿವಿಧ ಡಿಪ್ಲೊಮ ಹಾಗೂ ಸರ್ಟಿಫಿಕೆಟ್ ಕೋರ್ಸ್ ಅನ್ನು ವಿಶಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ದೂರಶಿಕ್ಷಣದ ಮೂಲಕ ನಿರ್ವಹಿಸುತ್ತಿದೆ. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರವು ಈ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೀಡುವುದರ ಮೂಲಕವೇ ಆಸಕ್ತರೆಲ್ಲರಿಗೂ ಜ್ಞಾನ ಪ್ರಸಾರ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಕಾರ್ಯಕ್ರಮದ ವಿವರಗಳನ್ನು ವಿವಿಧ ಮಾಧ್ಯಮಗಳ ಮೂಲಕ ನಾಡಿನಾದ್ಯಂತ ಪ್ರಚಾರಪಡಿಸಲಾಗಿದ್ದು ಆಸಕ್ತರು ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.

ಗ್ರಂಥಾಲಯ

ಸಂಶೋಧನಾ ಚಟುವಟಿಕೆಗಳಿಗೆ ಗ್ರಂಥಾಲಯ ತೀರ ಅಗತ್ಯ. ಈ ದೃಷ್ಟಿಯಿಂದ 'ಅಕ್ಷರ' ಕಟ್ಟಡದಲ್ಲಿ ಗ್ರಂಥಾಲಯವೊಂದು ಅಸ್ತಿತ್ವಕ್ಕೆ ಬಂದಿದೆ. ಆಧುನಿಕ ಕೃತಿಗಳ ಗ್ರಂಥಾಲಯ, ಪ್ರಾಚೀನ ಹಸ್ತಪ್ರತಿಗಳ ಗ್ರಂಥಾಲಯ, ದೃಶ್ಯ-ಶ್ರವ್ಯ ಧ್ವನಿಸುರುಳಿಗಳ ಗ್ರಂಥಾಲಯ-ಹೀಗೆ ಇದರಲ್ಲಿ ಮೂರು ಶಾಖೆಗಳಿವೆ. ಬಹುಭಾಷೆ, ಬಹುವಿಷಯಗಳಿಗೆ ಸಂಬಂಧಿಸಿದ ಪ್ರಾಚೀನ ಆಧುನಿಕ ಪುಸ್ತಕಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಡಾ. ಎಂ.ಚಿದಾನಂದಮೂರ್ತಿ, ಕೊಪ್ಪಳದ ಶ್ರೀ ಅಗಡಿ ಸಂಗಣ್ಣ ಮೊದಲಾದವರು ನೀಡಿದ ಉದಾರ ಕೊಡುಗೆಯಿಂದಲೂ ಈ ಗ್ರಂಥಾಲಯ ಬೆಳೆದುನಿಂತಿದೆ. ಕನ್ನಡದ ಎಲ್ಲ ಗ್ರಂಥಗಳು ಸಂಶೋಧಕರಿಗೆ ಒಂದೆಡೆ ದೊರೆಯುವಂಥ ಪ್ರತ್ಯೀಕವಾದ ಮತ್ತು ವಿಶಿಷ್ಟವಾದ" ಕನ್ನಡ ಗ್ರಂಥಾಲಯ '' ವೊಂದನ್ನು ಸ್ಥಾಪಿಸುವ ಉದ್ದೇಶವೂ ವಿಶ್ವವಿದ್ಯಾಲಯಕ್ಕಿದೆ.

ಆಧುನಿಕ ಮುದ್ರಿತ ಕೃತಿಗಳ ಸಂಗ್ರಹದಂತೆ, ಪ್ರಾಚೀನ ಹಸ್ತಪ್ರತಿಗಳ ಸಂಗ್ರಹದ ಕಡೆಗೂ ಈ ವಿಶ್ವವಿದ್ಯಾಲಯ ಗಮನಕೊಟ್ಟಿದೆ. ಈಗಾಗಲೇ ಹಳ್ಳಿ-ಪಳ್ಳಿಗಳನ್ನು ಸಂದರ್ಶಿಸಿ ಹಸ್ತಪ್ರತಿಗಳನ್ನು ಸಂಗ್ರಹಿಸುವ, ಸೂಚಿ ಸಿದ್ಧಪಡಿಸುವ ಕೆಲಸ ಇಲ್ಲಿ ನಡೆದಿದೆ.

ಇತ್ತೀಚಿನ ದಿನಗಳನ್ನು ದೃಶ್ಯ-ಶ್ರವ್ಯ-ಧ್ವನಿಸುರುಳಿಗಳ ಸಂಗ್ರಹಾಲಯಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ. ಕನ್ನಡ ವಿಶ್ವವಿದ್ಯಾಲಯ ಈ ಕ್ಷೇತ್ರದ ಕಡೆಗೂ ಗಮನ ಹರಿಸಿ ಸೋಲಿಗರು, ಕಾಡುಕುರುಬರು, ಜೇನುಕುರುಬರು, ಮಲೆಕುಡಿಯರು, ಮೇರರು ಮತ್ತು ಮನ್ಸರು ಬುಡಕಟ್ಟು ಜನಾಂಗಗಳ ದೃಶ್ಯ ಸುರುಳಿಗಳನ್ನು, ಗೊಂಡರ ಕಾವ್ಯ, ಕುಡುಬಿಯರ ರಾಮಾಯಣ ಕಾವ್ಯ, ಮ್ಯಾಸಬೇಡರ ಗಾದರಿ ಪಾಲನಾಯಕನ ಕಾವ್ಯ, ಲಂಬಾಣಿಯರ ಕಾವ್ಯ, ಸೋಲಿಗರ ಕಾವ್ಯಗಳ ಶ್ರವ್ಯ ಸುರುಳಿಗಳನ್ನು ಸಿದ್ಧಪಡಿಸಿ ಸಂರಕ್ಷಿಸಿದೆ. ಆಧುನಿಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಈ ಗ್ರಂಥಾಲಯವನ್ನು ಅತ್ಯಾಧುನಿಕ ಸೌಲಭ್ಯವುಳ್ಳ ಗ್ರಂಥಾಲಯವನ್ನಾಗಿ ರೂಪಿಸುವ ಕ್ರಮಗಳನ್ನು ತೀವ್ರವಾಗಿ ಕೈಗೊಳ್ಳಲಾಗುತ್ತಿದೆ.

ಸಿರಿಗನ್ನಡ ಗ್ರಂಥಾಲಯ

ಕನ್ನಡ ವಿಶ್ವವಿದ್ಯಾಲಯಕ್ಕೆ 'ಸಿರಿಗನ್ನಡ' ದ ಕನಸು

ಈ 'ಸಿರಿಗನ್ನಡ' ಪರಾಮರ್ಶನ ಗ್ರಂಥಾಲಯವು ಕನ್ನಡ ಮತ್ತು ಕರ್ನಾಟಕದ ಬಗ್ಗೆ ಜಗತ್ತಿನಾದ್ಯಂತ ಲಭ್ಯವಿರುವ ಲಿಖಿತ, ಮುದ್ರಿತ ಮತ್ತು ವಿದ್ಯುನ್ಮಾನ ಮಾದ್ಯಮದಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಿ, ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಆಸಕ್ತ ಓದುಗರಿಗೆ ತಕ್ಷಣವೇ ಒದಗಿಸಿಕೊಡುವಂತಹ ವ್ಯವಸ್ಥಿತ ಯೋಜನೆಯನ್ನು ಹೊಂದಿದೆಯಲ್ಲದೆ, ಕನ್ನಡದಲ್ಲಿ ಇದುವರೆಗೆ ಪ್ರಕಟವಾಗಿರುವ ಹಾಗು ಮುಂದೆ ಪ್ರಕಟವಾಗುವ ಎಲ್ಲಾ ನಿಯತಕಾಲಿಕೆ ಸಂಚಿಕೆಗಳು ಹಾಗು ಗ್ರಂಥಗಳು ಎಲ್ಲವೂ ತನ್ನಲ್ಲಿ ಲಭ್ಯವಾಗುವಂತೆ ಒಂದು ಅಪೂರ್ವ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಹಾಗೆಯೇ ಕನ್ನಡ ಮತ್ತು ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾದ ಖ್ಯಾತ ಸಾಹಿತಿಗಳು, ಕಲಾವಿದರು, ವಿದ್ವಾಂಸರು, ವಿಜ್ಞಾನಿಗಳು, ತತ್ವಶಾಸ್ತ್ರಜ್ಞರು .. ಇತ್ಯಾದಿ ಗಣ್ಯ ಮಹನೀಯರ ಭಾವಚಿತ್ರಗಳು, ಧ್ವನಿಮುದ್ರಿತ ಕ್ಯಾಸೆಟ್ ಗಳು, ಪತ್ರಗಳನ್ನು ಇಲ್ಲಿ ಸಂಗ್ರಹಿಸಿಡಲಾಗುತ್ತದೆ. ಈ ಮಹತ್ವವಾದ ಕಾರ್ಯಕ್ಕೆ ರೂ. 180 ಲಕ್ಷಗಳ ಸಮಗ್ರ ಯೋಜನೆಯೊಂದು ಸಿದ್ಧವಾಗಿದೆ. ಹಾಗೂ ಮಾಹಿತಿ ಸಂಗ್ರಹಣೆಗಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಗ್ರಂಥಾಲಯ ಕೇಂದ್ರಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ. 'ಸಿರಿಗನ್ನಡ' ದ ಮೈಸಿರಿಯನ್ನು ಬೆಳೆಸುವ ಕಾರ್ಯ ಭರದಿಂದ ಮುಂದುವರೆದಿದೆ.

ಸಿರಿಗನ್ನಡ ಗ್ರಂಥಾಲಯ ಕನ್ನಡಿಗರೆಲ್ಲರದು. ಕನ್ನಡ-ಕರ್ನಾಟಕದ ಬಗ್ಗೆ ಅಧ್ಯಯನ ಮಾಡ ಬಯಸುವವರಿಗೆ' ಸಿರಿಗನ್ನಡ ' ಕ್ಕೆ ಮುಕ್ತ ಸ್ವಾಗತವಿದೆ.

ವಸ್ತುಸಂಗ್ರಹಾಲಯ

ಕನ್ನಡ ವಿಶ್ವವಿದ್ಯಾಲಯ ಜನತೆಯ ಆಕರ್ಷಣೆ, ವಿದ್ವಜ್ಜನತೆಯ ಅಧ್ಯಯನಕ್ಕೋಸುಗ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಬಯಸಿದೆ. ಈಗಾಗಲೇ ಪ್ರಾಚ್ಯವಸ್ತು ಸಂಗ್ರಹಾಲಯದ ಆಶ್ರಯದಲ್ಲಿ ಪ್ರಾಚೀನ ಅವಶೇಷಗಳನ್ನು ಸಂಗ್ರಹಿಸಲಾಗಿದ್ದು, ಮ್ಯೂ ಜಿಯಂ ಕಟ್ಟಡದ ಪೂರ್ವಭಾವಿ ಸಿದ್ಧತೆಗಳು ಮುಗಿದಿವೆ. ಕರ್ನಾಟಕದ ಪ್ರಕೃತಿ ಸೌಂದರ್ಯದ, ಸಾಹಿತ್ಯದ, ಕಲೆಗಳ ಮತ್ತಿತರ ಸರ್ವಮುಖ ಸರ್ಮದ್ಧಿಯ ವಿಶೇಷತೆಗಳನ್ನು ಪ್ರತಿಬಿಂಬಿಸುವ, ರಾಷ್ಟ್ರೀಯ ಮ್ಯೂ ಜಿಯಂ ಮಾದರಿ ವ್ಯಾಪಕ ವಸ್ತುಸಂಗ್ರಹಾಲಯವೊಂದನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದು, ಇದಕ್ಕಾಗಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಿನಿ ವಿಜಯನಗರ ಕಲ್ಪನೆಯೊಂದನ್ನು ಈ ಬೃಹತ್ ವಸ್ತುಸಂಗ್ರಹಾಲಯದ ಅಂಗವಾಗಿ ರೂಪಿಸುವ ಉದ್ದೇಶವೂ ಇದೆ.

ಉತ್ತರ ಕರ್ನಾಟಕದಲ್ಲಿ ಕೊನೆಯ ಪಕ್ಷ ಒಂದಾದರೂ ಜಾನಪದ ಮ್ಯೂ ಜಿಯಂ ಅಸ್ತಿತ್ವಕ್ಕೆ ಬರಬೇಕೆನ್ನುವ ಕನಸು ಬಹ ಳ ಹಳೆಯದು. ಇದನ್ನು ನನಸಾಗಿಸುವ ಉದ್ದೇಶದಿಂದ 'ಅಕ್ಷರ ' ಕಟ್ಟಡದಲ್ಲಿ ಜಾನಪದ ಮ್ಯೂ ಜಿಯಂ ಆರಂಭಿಸಿದೆ.

ಕನ್ನಡ ವಿಶ್ವವಿದ್ಯಾಲಯದ ಉದ್ದೇಶಗಳು

ಕನ್ನಡ ವಿಶ್ವವಿದ್ಯಾಲಯದ "ನಾಡೋಜ" ಪದವಿ ಪುರಸ್ಕೃತರು

ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರು

 

 
   
   
   
 

 

2011 © ಕನ್ನಡ ವಿಶ್ವವಿದ್ಯಾಲಯ, ಹಂಪಿ | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
Browser Support - Internet Explorer 7 and above | Best Viewed Resolution - 1024 X 768 Pixels